/newsfirstlive-kannada/media/post_attachments/wp-content/uploads/2025/02/Nirmala_Sitharaman-1.jpg)
ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 3ನೇ ಬಾರಿಯ ಮೊದಲ ಆಯವ್ಯಯವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡುತ್ತಿದ್ದಾರೆ. ಸತತ 8ನೇ ಮುಂಗಡ ಪತ್ರವನ್ನು ಮಂಡನೆ ಮಾಡುತ್ತಿರುವ ಸೀತಾರಾಮನ್ ವಿಶೇಷವಾದ ಮಧುಬನಿ ಕಲೆ ಇರುವ ಸೀರೆಯನ್ನು ಧರಿಸಿ ಸಂಸತ್​ಗೆ ಆಗಮಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/02/Nirmala_Sitharaman_7.jpg)
ಇಡೀ ದೇಶದ ಕಣ್ಣು ಇವತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಲಿರುವ ಕೇಂದ್ರ ಸರ್ಕಾರದ ಬಜೆಟ್ ಮೇಲೆ ನೆಟ್ಟಿದೆ. ಸಂಸತ್​​ನಲ್ಲಿ ಬಜೆಟ್​​ ಮಂಡನೆ ಆಗುತ್ತಿದ್ದು ನಿರೀಕ್ಷೆಗಳ ಭಾರ ಹೆಚ್ಚಿದೆ. ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಹಣ ನೀಡುತ್ತಾರೆ ಎನ್ನುವುದು ಕುತೂಹಲವಾಗಿದೆ. ಜನಸಾಮಾನ್ಯರಿಗೆ ಏನೆಲ್ಲಾ ಗಿಫ್ಟ್​​ಗಳನ್ನ ಸಚಿವೆ ನೀಡಲಿದ್ದಾರೆ ಅನ್ನೋ ಕೌತುಕ ಮನೆ ಮಾಡಿದೆ.
/newsfirstlive-kannada/media/post_attachments/wp-content/uploads/2025/02/Nirmala_Sitharaman_8.jpg)
ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಮಾಡುವುದಕ್ಕೂ ಮೊದಲು ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಪತಿಗಳ ನಿವಾಸಕ್ಕೆ ಭೇಟಿ ಕೊಟ್ಟರು. ಈ ವೇಳೆ ಬಜೆಟ್ ಪ್ರತಿಯನ್ನು ಮಾಧ್ಯಮಗಳಿಗೆ ಎತ್ತಿ ತೋರಿಸಿದರು.
/newsfirstlive-kannada/media/post_attachments/wp-content/uploads/2025/02/Nirmala_Sitharaman_6.jpg)
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೈಯಲ್ಲಿ ಇರುವಂತ ಬಜೆಟ್ ಪ್ರತಿಯ ಫೋಟೋ. ಡಿಜಿಟಲ್ ಬಜೆಟ್ ಇದಾಗಿದ್ದು ಕೆಂಪು ಬಣ್ಣದಿಂದ ಕೂಡಿದೆ. ಇದರ ಮೇಲೆ ನಾಲ್ಕು ಸಿಂಹಗಳಿರುವ ರಾಷ್ಟ್ರಲಾಂಛನವನ್ನು ಕಾಣಬಹುದು.
/newsfirstlive-kannada/media/post_attachments/wp-content/uploads/2025/02/BUDGET-2025-1.jpg)
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆ ಪಡೆಯುವುದಕ್ಕೂ ಮೊದಲು ಬಜೆಟ್​​ನೊಂದಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇಲಾಖೆಗೆ ಸಂಬಂಧಿಸಿದ ಇತರೆ ಅಧಿಕಾರಿಗಳು ಇದ್ದರು.
/newsfirstlive-kannada/media/post_attachments/wp-content/uploads/2025/02/Nirmala_Sitharaman_1-1.jpg)
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಅವರ ಸಿಬ್ಬಂದಿ ವರ್ಗ. ಬಜೆಟ್​ ಅನುಮೋದನೆಗೂ ಮೊದಲು ಫೋಟೋವನ್ನು ಕ್ಲಿಕ್ಕಿಸಿಕೊಂಡರು.
/newsfirstlive-kannada/media/post_attachments/wp-content/uploads/2025/02/Nirmala_Sitharaman_2.jpg)
ಬಜೆಟ್​​ಗೆ ಅನುಮೋದನೆ ಪಡೆಯುವಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೊತೆ ಮಾತನಾಡಿದರು. ಬಳಿಕ ಅನುಮೋದನೆಯನ್ನು ಪಡೆದರು. ಈ ವೇಳೆ ಕೆಲ ಅಧಿಕಾರಿಗಳು ಕೂಡ ಜೊತೆಯಲ್ಲಿ ಇದ್ದರು.
/newsfirstlive-kannada/media/post_attachments/wp-content/uploads/2025/02/Nirmala_Sitharaman_3.jpg)
ಬಜೆಟ್​ಗೆ ಅನುಮೋದನೆ ನೀಡಿದ ಬಳಿಕ ಮೊಸರು ಹಾಗೂ ಸಕ್ಕರೆಯ ಮಿಶ್ರಣ ಮಾಡಿರುವುದನ್ನು ರಾಷ್ಟ್ರಪತಿ ಮುರ್ಮು ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಿನಿಸಿ, ಶುಭಾಶಯ ತಿಳಿಸಿದರು.
/newsfirstlive-kannada/media/post_attachments/wp-content/uploads/2025/02/Nirmala_Sitharaman_4.jpg)
ಬಜೆಟ್​ಗೆ ಅನುಮೋದನೆ ಸಿಕ್ಕ ಬಳಿಕ ಹೊರಗೆ ಬಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಅವರ ಸಿಬ್ಬಂದಿ ಫೋಟೋ ಕ್ಲಿಕ್ಕಿಸಿಕೊಂಡರು.
/newsfirstlive-kannada/media/post_attachments/wp-content/uploads/2025/02/Nirmala_Sitharaman_5.jpg)
ನಿರ್ಮಲಾ ಸೀತಾರಾಮನ್​​​​ ಮಂಡಿಸುತ್ತಿರುವ ಬಜೆಟ್ 8ನೇ ಬಜೆಟ್ ಆಗಿದೆ. ಇದು ಅವರ ಜೀವನದ ಯಶಸ್ಸಿನ ಉತ್ತುಂಗವಾಗಿದೆ. ಪ್ರಧಾನಿ ಮೋದಿ ಸರ್ಕಾರದ ಅಡಿ ಬಡವರಿಗೆ, ರೈತರಿಗೆ, ಶ್ರಮಿಕರಿಗೆ, ಕಾರ್ಮಿಕರಿಗೆ, ಉದ್ಯಮಿಗಳಿಗೆ, ಮಧ್ಯಮ ವರ್ಗಕ್ಕೆ, ಶಿಕ್ಷಣಕ್ಕೆ, ಸಾರಿಗೆ ಸಂಪರ್ಕ, ಕೈಗಾರಿಕೆಗಳಿಗೆ ಇತ್ಯಾದಿ ಕ್ಷೇತ್ರಗಳಿಗೆ ಈ ಬಜೆಟ್​ ಗುಡ್​ನ್ಯೂಸ್ ನೀಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us