newsfirstkannada.com

Budget2024: ಬಜೆಟ್ ಮಂಡನೆಯಲ್ಲಿ ನಿರ್ಮಲಾ ಸೀತಾರಾಮನ್ ಹೊಸ ದಾಖಲೆ; ಏನದು?

Share :

Published February 1, 2024 at 10:44am

Update February 1, 2024 at 10:45am

    ಬ್ರೀಫ್ ಕೇಸ್‌ ಪದ್ಧತಿಗೆ ವಿದಾಯ ಹೇಳಿರುವ ನಿರ್ಮಲಾ ಸೀತಾರಾಮನ್

    2020ರಲ್ಲಿ ಬರೋಬ್ಬರಿ 2 ಗಂಟೆ 42 ನಿಮಿಷ ಸುದೀರ್ಘ ಬಜೆಟ್ ಭಾಷಣ

    ಮಧ್ಯಂತರ ಬಜೆಟ್ ಮಂಡಿಸುತ್ತಿರುವ ಮೊದಲ ಮಹಿಳಾ ಹಣಕಾಸು ಸಚಿವೆ

ನವದೆಹಲಿ: 2024ರ ಕೇಂದ್ರ ಸರ್ಕಾರದ ಬಜೆಟ್‌ ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಅದರಲ್ಲೂ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ಈ ಬಾರಿ ವಿಶೇಷ ದಾಖಲೆಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಬಜೆಟ್ ಮಂಡಿಸಿದ ದೇಶದ ಮೊದಲ ಮಹಿಳೆಯಾಗಿದ್ದರೆ, ಎರಡನೇ ಮಹಿಳೆ ನಿರ್ಮಲಾ ಸೀತಾರಾಮನ್ ಅವರಾಗಿದ್ದಾರೆ.

ಸ್ವಾತಂತ್ರ್ಯ ಭಾರತದಲ್ಲಿ ಮಧ್ಯಂತರ ಬಜೆಟ್ ಮಂಡಿಸುತ್ತಿರುವ ಮೊದಲ ಮಹಿಳಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಾಗಿದ್ದಾರೆ. ಇದರ ಜೊತೆಗೆ ನಿರ್ಮಲಾ ಸೀತಾರಾಮನ್ ಅವರು ಬ್ರೀಫ್ ಕೇಸ್‌ಗೆ ವಿದಾಯ ಹೇಳಿ ರಾಷ್ಟ್ರ ಲಾಂಛನ ಹೊಂದಿರುವ ಕೆಂಪು ಬಣ್ಣದ ಲೆಡ್ಜರ್ ರೂಪದಲ್ಲಿ ಬಜೆಟ್ ತರುವ ಪದ್ದತಿ ಆರಂಭಿಸಿದ್ದಾರೆ.

ಇದನ್ನೂ ಓದಿ: ಬಜೆಟ್​ ಮಂಡನೆಯಲ್ಲಿದ್ದ 92 ವರ್ಷಗಳ ಹಳೇ ಸಂಪ್ರದಾಯ ಬದಲಾಯಿಸಿದೆ ಮೋದಿ ಸರ್ಕಾರ.. ಈ ಬಗ್ಗೆ ನಿಮಗೆಷ್ಟು ಗೊತ್ತು..?

ಇದಿಷ್ಟೇ ಅಲ್ಲ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಇತಿಹಾಸದಲ್ಲಿ ಹಲವಾರು ದಿಗ್ಗಜರನ್ನು ದಿಗ್ಗಜರನ್ನು ಸರಿಗಟ್ಟಿದ್ದ ಮಹಿಳಾ ಹಣಕಾಸು ಸಚಿವೆ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 2020ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಬರೋಬ್ಬರಿ 2 ಗಂಟೆ 42 ನಿಮಿಷಗಳ ಸುದೀರ್ಘ ಬಜೆಟ್ ಭಾಷಣ ಮಾಡಿ ದಾಖಲೆ ಬರೆದಿದ್ದಾರೆ.

ಆರ್. ಕೆ ಷಣ್ಮುಕಂ ಚೆಟ್ಟಿ ಅವರಿಂದ ಹಿಡಿದು ನಿರ್ಮಲಾ ಸೀತಾರಾಮನ್ ತನಕ ಭಾರತ ಇದುವರೆಗೂ 38 ಹಣಕಾಸು ಸಚಿವರನ್ನು ಕಂಡಿದೆ. ಮೊರಾರ್ಜಿ ದೇಸಾಯಿ ಅವರು ಐದು ಬಾರಿ ಪೂರ್ಣ ಬಜೆಟ್ ಮತ್ತು ಒಂದು ಮಧ್ಯಂತರ ಮಂಡಿಸಿದ ದಾಖಲೆ ಹೊಂದಿದ್ದರು. ಇಂದು ನಿರ್ಮಲಾ ಸೀತಾರಾಮನ್ ಅವರು ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಿತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Budget2024: ಬಜೆಟ್ ಮಂಡನೆಯಲ್ಲಿ ನಿರ್ಮಲಾ ಸೀತಾರಾಮನ್ ಹೊಸ ದಾಖಲೆ; ಏನದು?

https://newsfirstlive.com/wp-content/uploads/2024/02/Nirmala-Sitaraman.jpg

Load More