/newsfirstlive-kannada/media/post_attachments/wp-content/uploads/2025/04/BANK.jpg)
ಕರ್ನಾಟಕದ 2 ಗ್ರಾಮೀಣ ಬ್ಯಾಂಕ್ಗೆ ವಿಲೀನಕ್ಕೆ ಸಿದ್ಧತೆ ನಡೆದಿದೆ. ಕೇಂದ್ರ ಹಣಕಾಸು ಸಚಿವಾಲಯವು ಒಂದು ರಾಜ್ಯ ಒಂದು ಬ್ಯಾಂಕ್ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದೆ.
ಸರ್ಕಾರದ ಹೊಸ ಯೋಜನೆ ಪ್ರಕಾರ, ರಾಜ್ಯದಲ್ಲಿ ಈಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ಗಳು ವಿಲೀನಗೊಂಡು ಒಂದೇ ಆಗಲಿವೆ ಎಂದು ವರದಿಯಾಗಿದೆ.
RRB (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್) ಕಾರ್ಯಕ್ಷಮತೆಯ ದಕ್ಷತೆ ಹೆಚ್ಚಳ, ವೆಚ್ಚದ ಸಾರ್ವತ್ರೀಕರಣ ಜೊತೆಗೆ ಸದ್ಯ ದೇಶದಲ್ಲಿರುವ 42 ಆರ್ಆರ್ಬಿಗಳ ಸಂಖ್ಯೆಯನ್ನು 28ಕ್ಕೆ ಇಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತರುತ್ತಿದೆ. ಅದರಂತೆ ಒಂದು ರಾಜ್ಯ ಒಂದು ಒಂದು ಬ್ಯಾಂಕ್ ಯೋಜನೆಯಡಿ, ಕರ್ನಾಟಕ ಎರಡು ಬ್ಯಾಂಕ್ಗಳು ವಿಲೀನಗೊಳ್ಳಲಿವೆ.
ಇದನ್ನೂ ಓದಿ: ಹೈದ್ರಾಬಾದ್ಗೆ ಬಿಸಿ ಮುಟ್ಟಿಸಿದ ಶುಭ್ಮನ್ ಗಿಲ್, ಸುಂದರ್.. ಕೇವಲ 1 ರನ್ನಿಂದ ಅರ್ಧಶತಕ ಮಿಸ್
ವರದಿಗಳ ಪ್ರಕಾರ, ಈಗಾಗಲೇ ಬ್ಯಾಂಕುಗಳ ಕಡಿತಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳು ಪೂರ್ಣಗೊಂಡಿವೆ. ವಿಲೀನ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಹಣಕಾಸು ಸಚಿವಾಲಯದ ಪ್ರಕಾರ, ಒಟ್ಟು 15 ಆರ್ಆರ್ಬಿಗಳನ್ನು ವಿಲೀನಗೊಳಿಸಲು ನಿರ್ಧರಿಸಲಾಗಿದೆ. ಆಂಧ್ರಪ್ರದೇಶ ಅತೀ ಹೆಚ್ಚು ಆರ್ಆರ್ಬಿಗಳನ್ನು ಹೊಂದಿದೆ. ಒಟ್ಟು ನಾಲ್ಕು ಆರ್ಆರ್ಬಿಗಳನ್ನು ಹೊಂದಿದೆ. ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಾ ತಲಾ ಮೂರು, ಬಿಹಾರ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನಗಳಲ್ಲಿ ತಲಾ ಎರಡು ಆರ್ಆರ್ಬಿ ಹೊಂದಿವೆ.
ಇದನ್ನೂ ಓದಿ: ಇಂದಿನಿಂದ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ; ಜಿಲ್ಲೆ ಜಿಲ್ಲೆಯಲ್ಲೂ ಪಾದಯಾತ್ರೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ