ರಿಕ್ಕಿ ರೈ ಕೇಸ್​ನಲ್ಲಿ ನಾಲ್ವರ ವಿರುದ್ಧ FIR.. ಪ್ರಕಾಶ್ ರೈ ವ್ಯಕ್ತಪಡಿಸಿದ ಅನುಮಾನ ಏನು?

author-image
Veena Gangani
Updated On
‘ಅವರೇ ಅಟ್ಯಾಕ್ ಮಾಡಿಸಿದ್ದು..’ ಪೊಲೀಸರಿಗೆ ಮಹತ್ವದ ಮಾಹಿತಿ ನೀಡಿ ರಿಕ್ಕಿ ರೈ
Advertisment
  • ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಸ್ಥಿತಿ ಹೇಗಿದೆ?
  • ಮೂವರು ಅಪರಿಚಿತರಿಂದ ರಿಕ್ಕಿ ಮೇಲೆ ಫೈರಿಂಗ್
  • ಡ್ರೈವರ್ ಡೆತ್ ಆಗೋ ಸಾಧ್ಯತೆ ಇತ್ತು ಎಂದ ಪ್ರಕಾಶ್ ರೈ

ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಗುಂಡಿನ ದಾಳಿಯಾಗಿದೆ. ಬಿಡದಿಯ ಮುತ್ತಪ್ಪ ರೈ ನಿವಾಸದ ಬಳಿ ಮೂವರು ಅಪರಿಚಿತರು ಫೈರಿಂಗ್ ಮಾಡಿ ಎಸ್ಕೇಪ್​ ಆಗಿದ್ದಾರೆ. ರಿಕ್ಕಿ ರೈ ಮೂಗು ಹಾಗೂ ಬಲ ಭುಜಕ್ಕೆ ಗುಂಡು ತಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ರಿಕ್ಕಿ ರೈ ಪ್ರಕರಣಕ್ಕೆ ಹೊಸ ತಿರುವು.. ಘಟನೆ ಬಳಿಕ ಏನೆಲ್ಲ ಆಯ್ತು..? ಟಾಪ್ 20 ಅಪ್​ಡೇಟ್ಸ್​..!

publive-image

ಇನ್ನೂ, ಈ ಬಗ್ಗೆ ರಿಕ್ಕಿ ರೈ ಸಂಬಂಧಿ ಪ್ರಕಾಶ್ ರೈ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ಮಧ್ಯರಾತ್ರಿ ನನಗೆ ವಿಚಾರ ಗೊತ್ತಾಯ್ತು. ಕೂಡಲೇ ನಾನು ಸ್ಥಳಕ್ಕೆ ಬಂದೆ. ಬಳಿಕ ಬಿಡದಿ ಗಾರ್ಮೆಂಟ್ ಹಾಸ್ಪಿಟಲ್ ಬಳಿ ಬಂದೆ. ಮೂಗು ಹಾಗೂ ಬಲಗೈಗೆ ಗಾಯ ಆಗಿತ್ತು ಡ್ರೈವರ್​ಗೂ ಸಣ್ಣ ಪುಟ್ಟ ಗಾಯ ಆಗಿದೆ. ಕಾರಿನಲ್ಲಿ ಬ್ಯಾಗ್ ತಗೋತಾ ಇದ್ರು. ಈ ವೇಳೆ ಫೈರ್ ಮಾಡಿದ್ದಾರೆ. ಹಾಗಾಗೀ ಮೂಗಿದೆ ಬಿದ್ದಿದೆ. ಡ್ರೈವರ್ ಡೆತ್ ಆಗೋ ಸಾಧ್ಯತೆನೂ ಹೆಚ್ಚಾಗಿತ್ತು. ರಿಕ್ಕಿಗೆ ಡ್ರೈವಿಂಗ್ ಅಂದ್ರೆ ಪ್ಯಾಷನ್. ಹಾಗಾಗಿ ಡ್ರೈವರ್ ಸೀಟ್​ನ್ನೇ ಟಾರ್ಗೇಟ್ ಮಾಡಿದ್ರು. ಮುತ್ತಪ್ಪ ರೈ ಅವರ ಕಾಲದಿಂದಲೇ ಇದ್ದ ದ್ವೇಷ ಮುಂದುವರೆದಿರೋ ಸಾಧ್ಯತೆ ಇರುತ್ತೆ. ಸೋ ಯಾರಾದ್ರೂ ಹೇಳಿರೋ ಸಾಧ್ಯತೆನೂ ಇದೆ.

publive-image

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿರೋ ಸಾಧ್ಯತೆನೂ ಇದೆ. ಮುತ್ತಪ್ಪ ರೈ ಅವರ ಎರಡನೇ ಪತ್ನಿಯ ಆಸ್ತಿ ವಿವಾದ ಇತ್ತು. ಕಾಂಪ್ರಮೈಸ್ ಕೂಡ ಇತ್ತೀಚೆೆಗೆ ಆಗಿತ್ತು. ಬೆಂಗಳೂರಿನ ಸದಾಶಿವನಗರ ಮನೆಯಲ್ಲಿ ಆಫೀಸ್ ಇದೆ. ಹಾಗಾಗಿ ಅಲ್ಲೂ ಇರ್ತಾರೆ. ಇಲ್ಲಿ ಮನೆಯ ಇಂಟೀರಿಯರ್ ಕೂಡ ನಡೀತಾ ಇದೆ. ಅದನ್ನೂ ಅವರೇ ನೋಡಿಕೊಳ್ತಿದ್ರು. ನಾವು ಯಾವುದಾದ್ರೂ ಕೆಲಸ ಇದ್ರೆ ಮೀಟ್ ಮಾಡ್ತಿದ್ವಿ. ಯಾವ ವಿಚಾರಕ್ಕೆ ಹೀಗೆ ಆಗಿದೆ ಅಂಥ ಹೇಳೋಕೆ ಬರಲ್ಲ. ಸದ್ಯ ರಾಕೇಶ್ ಮಲ್ಲಿ, ನಿತೇಶ್ ಶೆಟ್ಟಿ, ವೈದ್ಯನಾಥ್ ಹಾಗೂ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ ವಿರುದ್ಧ ಎಫ್ಐಆರ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment