RCB ಸ್ಟಾರ್​ ವಿರಾಟ್​ ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ ವಿರುದ್ಧ ಕೇಸ್​.. ಆಗಿದ್ದೇನು?

author-image
Bheemappa
Updated On
RCB ಸ್ಟಾರ್​ ವಿರಾಟ್​ ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ ವಿರುದ್ಧ ಕೇಸ್​.. ಆಗಿದ್ದೇನು?
Advertisment
  • ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ ವಿರುದ್ಧ ಎಫ್​ಐಆರ್
  • ಬೆಂಗಳೂರಿನಲ್ಲಿರುವ ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಬಾರ್
  • ರೇಡ್ ಮಾಡಿ ಎನ್​ಸಿಆರ್ ದಾಖಲು ಮಾಡಿಕೊಂಡಿದ್ದ ಪೊಲೀಸರು

ಬೆಂಗಳೂರು: ಟೀಮ್ ಇಂಡಿಯಾದ ಹಾಗೂ ಆರ್​ಸಿಬಿಯ ಸ್ಟಾರ್ ಪ್ಲೇಯರ್ ಆಗಿರುವ ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್​ ವಿರುದ್ಧ ನಗರದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲು ಮಾಡಿದ್ದಾರೆ.

ಸಿಲಿಕಾನ್ ಸಿಟಿಯ ಕಸ್ತೂರ್ ಬಾ ರಸ್ತೆಯಲ್ಲಿರುವ ವಿರಾಟ್ ಕೊಹ್ಲಿ ಮಾಲೀಕತ್ವದ ದಿ ಒನ್ 8 ಕಮ್ಯೂನ್ ಪಬ್​ನಲ್ಲಿ ಪ್ರತ್ಯೇಕ ಸ್ಥಳ ಮೀಸಲು ಇಡದೇ ಗ್ರಾಹಕರಿಗೆ ಧೂಮಪಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಸಂಬಂಧ ಮೇ 29ರಂದು ಪೊಲೀಸರು ರೇಡ್ ಮಾಡಿ ಎನ್​ಸಿಆರ್ ದಾಖಲು ಮಾಡಿಕೊಂಡಿದ್ದರು. ಈಗ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ‌ ದಾಖಲಿಸಿದ್ದಾರೆ.

ಇದನ್ನೂ ಓದಿ:ಪಂಜಾಬ್ ಕಿಂಗ್ಸ್​, ಮುಂಬೈ 2 ತಂಡದ ಕ್ಯಾಪ್ಟನ್​ಗಳಿಗೆ ಬಿಗ್ ಶಾಕ್.. ಅಸಲಿಗೆ ಆಗಿದ್ದೇನು?

publive-image

ದಿ ಒನ್ 8 ಕಮ್ಯೂನ್ ಪಬ್​ನಲ್ಲಿ ಪ್ರತ್ಯೇಕ ಸ್ಥಳ ಮೀಸಲು ಇಡದಿದ್ದಕ್ಕೆ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ಈ ಹಿಂದೆಯೂ ಅನುಮತಿ ನೀಡಿರುವ ಅವಧಿ ಮೀರಿ ಪಬ್ ನಡೆಸಲಾಗುತ್ತಿದೆ ಎಂದು ಕೇಸ್ ದಾಖಲು ಮಾಡಲಾಗಿತ್ತು. 2024ರ ಜುಲೈನಲ್ಲಿ ರಾತ್ರಿ ವೇಳೆ ಅವಧಿ ಮೀರಿ ಪಬ್ ನಡೆಸುತ್ತಿದ್ದರು ಎಂದು ದೂರು ದಾಖಲಾಗಿತ್ತು.

ಜುಲೈ 6 ರಂದು ರಾತ್ರಿ 1:20ರ ವರೆಗೆ ಪಬ್ ಓಪನ್ ಆಗಿಯೇ ಇತ್ತು. ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಪಬ್ ಓಪನ್ ಇರುವುದಾಗಿ ಮಾಹಿತಿ ಪಡೆದಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅವಧಿ ಮುಗಿದಿದ್ದರೂ ಗ್ರಾಹಕರು ಇದ್ದರು. ಇದರ ಬೆನ್ನಲ್ಲೇ ಈಗ ಮತ್ತೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment