BBK11: ಬಿಗ್​ಬಾಸ್​ ಖ್ಯಾತಿಯ ನಟಿ ಹಂಸ ಪ್ರತಾಪ್ ಮೇಲೆ ದೂರು​ ದಾಖಲು; ಕಾರಣವೇನು?

author-image
Veena Gangani
Updated On
BBK11: ಬಿಗ್​ಬಾಸ್​ ಮನೆಗೆ ಲಾಯರ್​ ಜಗದೀಶ್​ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರಾ? ಗುಟ್ಟು ಬಿಚ್ಚಿಟ್ಟ ಹಂಸಾ
Advertisment
  • ಬಿಗ್​ಬಾಸ್​ ಮೂಲಕ ಫೇಮಸ್​ ಆಗಿದ್ದ ಕಿರುತೆರೆ ನಟಿ ಹಂಸ ಪ್ರತಾಪ್
  • ಬಿಗ್​ಬಾಸ್​ನಿಂದ ಹೊರ ಬಂದ್ಮೇಲೆ ಮತ್ತೆ ಸುದ್ದಿಯಾದ ನಟ ಹಂಸ
  • ಕನ್ನಡದ ನಂಬರ್​ ಒನ್​ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಕಿರುತೆರೆ ನಟಿ

ಪುಟ್ಟಕ್ಕನ ಮಕ್ಕಳು ಕಿರುತೆರೆಯ ನಂಬರ್​ ಒನ್​ ಧಾರಾವಾಹಿ. ದೊಡ್ಡ ತಾರಾಬಳಗ ಹೊಂದಿದ್ದ ಅಪರೂಪದ ಕತೆ. ಈ ಧಾರಾವಾಹಿಯ ವಿಶೇಷ ಅಂದ್ರೇ ನಾಯಕ ನಾಯಕಿಯನ್ನ ಮಾತ್ರ ಹೈಲೈಟ್​ ಮಾಡದೇ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ. ಹಾಗೇ ಕತೆನೇ ಹೀರೋ ಅಂದ್ರು ತಪ್ಪಾಗೋದಿಲ್ಲ. ಇಂತಹ ಅದ್ಭುತ ಧಾರಾವಾಹಿ ಕಲಾವಿದರ ಕಾರಣಕ್ಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಕನಸಿನ ಮನೆಗೆ ಪ್ರವೇಶ ಮಾಡಿದ ಬಿಗ್​ಬಾಸ್​ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್​ ಗೌಡ; ಇಲ್ಲಿವೆ ಫೋಟೋಸ್

publive-image

ಪುಟ್ಟಕ್ಕನ ಮಕ್ಕಳು ನಿರ್ಮಾಪಕ, ನಿರ್ದೇಶಕರಾದ ಆರೂರು ಜಗದೀಶ್​ ಅವರು ರಾಜಿ ಪಾತ್ರ ಮಾಡುತ್ತಿದ್ದ ಹಂಸ ಅವರ ಬಗ್ಗೆ ಕೊಂಚ ಬೇಸರದಲ್ಲಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ನೀಡಿರೋ ಸಂದರ್ಶನದಲ್ಲಿ ರಾಜೇಶ್ವರಿ ಪಾತ್ರದಲ್ಲಿ ಅಭಿನಯಿಸ್ತಿದ್ದ ಹಂಸ ಅವರು ನಡೆದುಕೊಂಡ ರೀತಿ ಬಗ್ಗೆ ಮಾತ್ನಾಡಿದ್ದಾರೆ. ಹಂಸ ಅವರು ರಾಜಿ ಪಾತ್ರ ಮಾಡುತ್ತಿದ್ದಾಗಲೇ ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದರು. ಹಂಸ ಇಲ್ಲಿಗೆ ಬಂದಿದ್ದಾರೆ. ರಾಜಿ ಪಾತ್ರ ಯಾರು ಮಾಡ್ತಾರೆ? ರಾಜಿ ಪಾತ್ರ ಮುಕ್ತಾಯವಾಯ್ತಾ? ಅಥವಾ ಬಿಗ್​ ಬಾಸ್​ ಮನೆಯಿಂದ ಹೊರ ಬಂದ್ಮೇಲೆ ಪಾತ್ರ ಮುಂದುವರೆಸ್ಬಹುದು ಅಂತಲ್ಲಾ ವೀಕ್ಷಕರಲ್ಲೆ ಲೆಕ್ಕಾಚಾರ ಶುರುವಾಗಿದ್ವು.

publive-image

ಆರೂರು ಜಗದೀಶ್​ ಅವರ ಆರೋಪವೇನು?

ಹಂಸ ಅವರು ಮಾಹಿತಿ ನೀಡದೇ ಬಿಗ್​ ಬಾಸ್​ ಮನೆಗೆ ಹೋಗಿದ್ದಾರೆ. ನಮಗೆ ಹೇಳಲೇ ಇಲ್ಲ ಅವ್ರು. ನನಗೆ ಫೋನ್​ ಮಾಡಿ ಹೇಳಿದ್ದು, ಸರ್​​ ನನೊಂದು ಸಿನಿಮಾ ಶೂಟಿಂಗ್​ಗೆ 40 ರಿಂದ 45 ದಿನ ಫಾರಿನ್​ಗೆ ಹೊಗ್ತಾ ಇದ್ದೀನಿ ಅಂದ್ರು. ನಾನು, ಹೌದಾ ಮೇಡಮ್​ ಅಂತ ಅಂದೆ. ಪೋಷಕ ನಟ ನಟಿಯರನ್ನ ಯಾರು 45 ಫಾರಿನ್​ಗೆ, ಅದು ಈ ಟೈಮ್​ನಲ್ಲಿ ಕರ್ಕೊಂಡು ಹೋಗ್ತಾರೆ ಅನ್ನೋದು ಮನಸ್ಸಲ್ಲಿತ್ತು. ಆದ್ರೂ, ಸರಿ ಮ್ಯಾಡಮ್​ ನಾನು ತಂಡಕ್ಕೆ ಮಾಹಿತಿ ನೀಡ್ತಿನಿ ಕತೆಯಲ್ಲಿ ಏನಾದ್ರೂ ಬದಲಾವಣೆ ಮಾಡೋಣ ಅಂತ ಅಂದೆ. ಇದಾದ ಮೇಲೆ ಅವ್ರನ್ನ ನಾನು ನೋಡಿದ್ದೇ ಬಿಗ್​ ಬಾಸ್​ ಪ್ರೊಮೋದಲ್ಲಿ. ನಂಗೆ ಶಾಕ್​ ಆಯ್ತು. ಎಲ್ಲಾ ಕಡೆಯಿಂದ ಕಾಲ್ಸ್​ ಬರೋದಕ್ಕೆ ಶುರುವಾಯ್ತು. ಸಿನಿಮಾ ಶೂಟಿಂಗ್ ಅಂತ​ ಹೋದ್ರೆ ಆಗೋಮ್ಮೆ ಈಗೊಮ್ಮೆ ಬರ್ತಾರೆ. ರಾಜಿ ಪಾತ್ರದ ಶೂಟಿಂಗ್​ ಮಾಡಬಹುದು ಅನ್ನೋ ಯೋಚನೆಯಲ್ಲೇ ನಾವು ಇದ್ವಿ. ಬಿಗ್​ ಬಾಸ್​ಗೆ ಹೋಗ್ತಿದ್ದೀನಿ ಅಂತ ನಮಗೆ ಹೇಳೇ ಇಲ್ಲ. ಪ್ರೊಫೇಶನಲ್​ ಎಥಿಕ್ಸ್​ ಇಲ್ಲ. ಹೀಗಾಗಿ ನಾವು ನಮ್ಮ ಪ್ರೊಡ್ಯೂಸರ್​ ಅಸೋಸಿಯೇಷನ್​ಗೆ, ಕರ್ನಾಟಕ ಟೆಲಿವಿಷನ್​ ಅಸೋಸಿಯೇಷನ್​ಗೆ ದೂರು ಕೊಟ್ಟಿದ್ದೀವಿ. ಅವರು ಏನು ಡಿಸಿಶನ್​ ತಗೊಂಡ್ರು ಅಂತ ಗೊತ್ತಾಗಿಲ್ಲ. ಬಿಗ್​ ಬಾಸ್​ ಥರನೇ ಪುಟ್ಟಕ್ಕನ ಮಕ್ಕಳು ಒಂದ್​ ಪ್ರಾಜೆಕ್ಟ್​. ನೀವೂ ಸೀರಿಯಲ್​ ಬೀಡೋದಾದ್ರೇ ಬಿಡಿ. ಆದ್ರೇ ಹೇಳ್ಬಿಟ್ಟು ಬೀಡಬೇಕಿತ್ತು. ಎಥಿಕ್ಸ್​ ಇಟ್ಕೊಳ್ಳಿ ಅಂತ ಹಂಸ ಅವರ ಬಗೆ ಸಂದರ್ಶನದಲ್ಲಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್​ನಲ್ಲಿ ವಿಶೇಷ ಅತಿಥಿಗಳು.. ಚಾರುನ ಇಂಪ್ರೆಸ್ ಮಾಡಲು ಹನುಮಂತಗೆ ‘ಕೆಂಗುಲಾಬಿ ಟಾಸ್ಕ್’

publive-image

ಸದ್ಯ ಹಂಸ ಅವರು ಬಿಗ್​ ಬಾಸ್​​ ಮನೆಯಿಂದ ಎಲಿಮಿನೇಟ್​ ಆಗಿ ಹೊರಬಂದಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ರೀ ಎಂಟ್ರಿ ಕೊಡ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿ ಅವ್ರು, ಬಿಗ್​ ಬಾಸ್​ ಮನೆಯಿಂದ ಹೊರ ಬಂದ ತಕ್ಷಣನೇ ನಾವು ಕಾಲ್​ ಮಾಡಿ ಕೇಳಿದ್ವಿ. ಮತ್ತೇ ಪಾತ್ರಕ್ಕೆ ಬನ್ನಿ ಅಂತ. ಆದ್ರೇ ಅವರು ಬಿಗ್​ ಬಾಸ್​ ಕಮಿಟ್ಮೆಂಟ್​ ಇದೆ ಅಂದ್ರು. ಅಗ್ರಿಮೆಂಟ್​ ಸೈನ್​ ಆಗಿದೆ. ನಾನು ಬರಲ್ಲ ಅಂದ್ರು. ರಾಜಿನ ಯಾಕೆ ಚೇಂಜ್​ ಮಾಡಿದ್ರಿ, ರಾಜಿ ಯಾಕೆ ಸೀರಿಯಲ್​ಗೆ ಬರ್ತಿಲ್ಲ ಅಂತ ಜನ ನನಗೆ ಬೈತಾರೆ. ಇಂತಹ ಪರಿಸ್ಥಿತಿಗಳು ಬರ್ತಾ ಇರ್ತಾವೆ. ಹಂಸ ಅವರು ಒಳ್ಳೆ ಕಲಾವಿದೆ. ನಮಗೂ ಅವ್ರಿಗೂ ಒಳ್ಳೆ ಬಾಂಧವ್ಯ ಇದೆ. ಆದ್ರೇ ಅವರು ಹೇಳ್ದೇ ಹೋಗಿದ್ದು ಬೇಜಾರಾಗಿದೆ. ಪಾತ್ರಕ್ಕೆ ಒಂದು​ ಎಂಡ್​ ಕೊಟ್ಟೇ ಹೋಗ್ಬಹುದಿತ್ತು ಅಂತ ಹಂಸ ಅವರ ಬಗ್ಗೆ ಬೇಸರ ಹೊರ ಹಾಕಿದ್ದಾರೆ ನಿರ್ದೇಶಕ ಆರೂರು ಜಗದೀಶ್​.

ಈಗಾಗಲೇ ಸ್ನೇಹ ಪಾತ್ರ ಮುಕ್ತಾಯ ವೀಕ್ಷಕರಲ್ಲಿ ತಳಮಳ ಉಂಟು ಮಾಡಿದೆ. ರಾಜಿ ಪಾತ್ರ ನೆಗೆಟಿವ್​ ಆದ್ರೂ ಎಂಟರ್​ಟೈನಿಂಗ್​ ಆಗಿತ್ತು. ಹಂಸ ಅವರು ಅದ್ಭುತವಾಗಿ ಪಾತ್ರವನ್ನ ನಿಭಾಯಿಸಿದ್ರು. ಅವರು ಮತ್ತೇ ರಾಜಿ ಪಾತ್ರಕ್ಕೆ ಬರ್ತಾರೆ ಅಂತ ಕಾಯ್ತಾಯಿದ್ದ ವೀಕ್ಷಕರಿಗೆ ಶಾಕಿಂಗ್​ ನ್ಯೂಸ್​ ಇದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment