Advertisment

ವಾಲ್ಮೀಕಿ ಹಗರಣದ ತನಿಖೆಗೆ ಬಿಗ್ ಟ್ವಿಸ್ಟ್.. ಸಿಎಂ ಸಿದ್ದರಾಮಯ್ಯ ಮೇನ್​ ಟಾರ್ಗೆಟ್​; FIR ದಾಖಲು

author-image
Bheemappa
Updated On
ವಾಲ್ಮೀಕಿ ಹಗರಣದ ತನಿಖೆಗೆ ಬಿಗ್ ಟ್ವಿಸ್ಟ್.. ಸಿಎಂ ಸಿದ್ದರಾಮಯ್ಯ ಮೇನ್​ ಟಾರ್ಗೆಟ್​; FIR ದಾಖಲು
Advertisment
  • ಮಹರ್ಷಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂಪಾಯಿ ಅಕ್ರಮ ತನಿಖೆ
  • ಜಾರಿನಿರ್ದೇಶನಾಲಯದ ಅಧಿಕಾರಿಗಳಿಗೆ ಶಾಕ್ ನೀಡಿರೋದು ಯಾರು.?
  • ಇಡಿಯಿಂದ ಸರ್ಕಾರ ಟಾರ್ಗೆಟ್​, ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಅಸ್ತ್ರ

ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಇಡಿ ಅಖಾಡಕ್ಕೆ ಇಳಿದು ಶಾಕ್ ಕೊಟ್ಟಿತ್ತು. ಮಾಜಿ ಸಚಿವ ನಾಗೇಂದ್ರರನ್ನ ಬಂಧಿಸಿ ಜೈಲಿಗಟ್ಟಿತ್ತು. ಆದ್ರೀಗ ಕೈ ನಾಯಕರಿಗೆ ಕಾಡಿದ್ದ ಇಡಿ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ. ಸರ್ಕಾರದ ವಿರುದ್ಧವೇ ಷಡ್ಯಂತ್ರ ಮಾಡಿರೋ ಆರೋಪ ಕೇಳಿಬಂದಿದೆ. ಇದೇ ವಿಚಾರಕ್ಕೆ ಜಾರಿನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ.

Advertisment

ಇದನ್ನೂ ಓದಿ:ಮಳೆ ಆರ್ಭಟ; ಮತ್ತೆ ಗುಡ್ಡ ಕುಸಿಯೋ ಆತಂಕ.. ಕೃಷ್ಣೆಗೆ ಭಾಗಿನ ಅರ್ಪಿಸಲು ಹೋಗಿ ಯುವಕ ನೀರು ಪಾಲು

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂಪಾಯಿ ಅಕ್ರಮ ನಡೆದೋಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ನಿಗಮದ ಅಧಿಕಾರಿಗಳೇ ಹಣವನ್ನ ಹರಿದು ಹಂಚಿಕೊಂಡಿದ್ದಾರೆ. ನುಂಗಿ ನೀರು ಕುಡಿದಿದ್ದಾರೆ. ಹೀಗೆ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ. ಆದ್ರೀಗ ಸರ್ಕಾರಿ ಅಧಿಕಾರಿಯೊಬ್ಬರು ಇಡಿಗೆ ಶಾಕ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: ಸಿನಿಮಾ ಹೀರೋ, ಹೀರೋಯಿನ್ ಥರಾ ನೀವು ಕಾಣಬೇಕಾ? ಅದು IV ಬ್ಯೂಟಿ ಥೆರಪಿಯಿಂದ ಮಾತ್ರ ಸಾಧ್ಯ!

Advertisment

publive-image

‘ವಾಲ್ಮೀಕಿ’ ಅಕ್ರಮದಲ್ಲಿ ಸಿದ್ದರಾಮಯ್ಯರನ್ನ ಸಿಲುಕಿಸಲು ತಂತ್ರ

ವಾಲ್ಮೀಕಿ ನಿಗಮದ ಅಕ್ರಮದ ಬಗ್ಗೆ ಇ.ಡಿ ತನಿಖೆ ನಡೆಸ್ತಿದೆ. ಮಾಜಿ ಸಚಿವ ನಾಗೇಂದ್ರ, ಶಾಸಕ ಬಸನಗೌಡ ದದ್ದಲ್‌ಗೂ ವಿಚಾರಣೆ ಮಾಡಿದೆ. ಆದ್ರೀಗ ಅಕ್ರಮ ಹಣ ವರ್ಗಾವಣೆ ತನಿಖೆ ಹೊಸ ತಿರುವು ಪಡೆದಿದೆ. ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸ್ತಿರೋ ಇಡಿ ವಿರುದ್ಧವೇ ಗಂಭೀರ ಆರೋಪ ಕೇಳಿ ಬಂದಿದೆ. ವಿಚಾರಣೆಗೆ ಕರೆಸಿ ನಾಗೇಂದ್ರ ಹಾಗೂ ಸಿಎಂ ವಿರುದ್ಧ ಹೇಳಿಕೆ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕ ಕಲ್ಲೇಶ್‌ಗೆ ಒತ್ತಡ ಹೇರಿರುವ ಆರೋಪ ಕೇಳಿ ಬಂದಿದೆ. ಇದೇ ವಿಚಾರವಾಗಿ ವಿಲ್ಸನ್ ಗಾರ್ಡನ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಡಿ ವಿಚಾರಣಾಧಿಕಾರಿಗಳಾದ ಮಿತ್ತಲ್ ಹಾಗು ಕಣ್ಣನ್ ಮೇಲೆ ಎಫ್‌ಐಆರ್ ದಾಖಲಾಗಿದೆ.

ಎಫ್‌ಐಆರ್‌ನಲ್ಲಿ ಏನಿದೆ?

ವಾಲ್ಮೀಕಿ ನಿಗಮದ ಅಕ್ರಮ ಸಂಬಂಧ ಜು. 16ರಂದು ನಾನು ಇಡಿ ವಿಚಾರಣೆಗೆ ಹೋಗಿದ್ದೆ. ಈ ವೇಳೆ ಇಡಿ ವಿಚಾರಣಾಧಿಕಾರಿಗಳಾದ ಮರುಳಿ ಕಣ್ಣನ್‌ ಹಾಗೂ ಮಿತ್ತಲ್‌ ನನ್ನನ್ನು ಪ್ರಶ್ನಿಸಿದರು. ಖಜಾನೆಯ ಮೂಲಕ ನಿಗಮದ ಎಂಜಿ ರಸ್ತೆ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಲು ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ನಾಗೇಂದ್ರ, ಆರ್ಥಿಕ ಇಲಾಖೆ ಸೂಚನೆಯಿತ್ತು ಎಂದು ಬರೆದುಕೊಡುವಂತೆ ನನ್ನ ಮೇಲೆ ಒತ್ತಡ ಹೇರಿದ್ದರು. ಮತ್ತೆ ಜುಲೈ 18ರಂದು ವಿಚಾರಣೆಗೆ ಹೋದಾಗ ಮತ್ತೆ ಒತ್ತಡ ಹೇರಿದ್ರು. ಬರೆದುಕೊಟ್ಟರೆ ಬಚಾವ್‌ ಮಾಡುತ್ತೇವೆ. ಇಲ್ಲದಿದ್ರೆ ಬಂಧಿಸುತ್ತೇವೆ. 2 ವರ್ಷ ಜಾಮೀನು ಸಿಗಲ್ಲ. 7 ವರ್ಷ ಶಿಕ್ಷೆ ಕೊಡಿಸುವ ತನಕ ಬಿಡಲ್ಲ ಎಂದು ನಿಂದಿಸಿ ಬೆದರಿಕೆ ಒಡ್ಡಿದ್ದರು.

-ಬಿ. ಕಲ್ಲೇಶ್‌, ಅಪರ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ

ಇದನ್ನೂ ಓದಿ: ಗಂಭೀರ್​ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದ ಕನ್ನಡಿಗ ಯಾರು.. ಆ ಯುವ ಪ್ಲೇಯರ್ ಈಗ ಏನಾಗಿದ್ದಾರೆ?

Advertisment

publive-image

ವಾಲ್ಮೀಕಿ ನಿಗಮದ ಅಕ್ರಮದ ತನಿಖೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈಗಾಗಲೇ ಇಡಿ ಸರ್ಕಾರವನ್ನ ಟಾರ್ಗೆಟ್ ಮಾಡ್ತಿದೆ ಅಂತ ಕೆಂಡಕಾರುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಇದನ್ನೇ ಹಿಡಿದು ಬಿಜೆಪಿ ಮತ್ತು ಇಡಿ ವಿರುದ್ಧ ವಾಗ್ದಾಳಿ ನಡೆಸೋದು ಪಕ್ಕಾ ಆಗಿದೆ. ಆದ್ರೀಗ ಎಫ್ಐಆರ್ ಹಾಕಿರೋ ಪೊಲೀಸರ ಮುಂದಿನ ನಡೆ ಏನು ಅನ್ನೋದೆ ಸದ್ಯದ ಕೌತುಕ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment