/newsfirstlive-kannada/media/post_attachments/wp-content/uploads/2025/06/TMK_PROTEST_ARREST.jpg)
ತುಮಕೂರಿನ ಹೇಮಾವತಿ ಲಿಂಕ್​ ಕಾಲುವೆ ಯೋಜನೆ ವಿರೋಧಿ ಹೋರಾಟ ತೀವ್ರಗೊಂಡಿದೆ. ಪ್ರತಿಭಟನೆಗೆ ರಾಜಕೀಯ ಸ್ವರೂಪ ಸಿಕ್ಕಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರ ಮೇಲೆ ಸರ್ಕಾರ ಬಂಧನ ಅಸ್ತ್ರ ಹೂಡಿದೆ. ಅತ್ತ ಹೋರಾಟಗಾರರು ಮತ್ತೊಂದು ಸಭೆ ನಡೆಸಿ ಸರ್ಕಾರಕ್ಕೆ ಮತ್ತೆ ಸೆಡ್ಡು ಹೊಡೆದು ಉಗ್ರ ಪ್ರತಿಭಟನೆ ಎಚ್ಚರಿಕೆ ಕೊಟ್ಟಿದ್ದಾರೆ.
ಹೇಮಾವತಿ ನೀರನ್ನು ರಾಮನಗರ ಜಿಲ್ಲೆಗೆ ಹರಿಸುವ ಎಕ್ಸ್​​ಪ್ರೆಸ್​​ ಕೆನಾಲ್​ ಯೋಜನೆ ತುಮಕೂರಿನಲ್ಲಿ ಕಿಡಿ ಹೊತ್ತಿಸಿದೆ. ಕೆನಾಲ್​​ ವಿಚಾರವಾಗಿ ಕಲ್ಪತರು ನಾಡಿನಲ್ಲಿ ಹೋರಾಟದ ಕಿಚ್ಚು ಹೆಚ್ಚಾಗಿದ್ದು, ಉಗ್ರ ಹೋರಾಟದಲ್ಲಿ ಭಾಗಿಯಾಗಿದ್ದವರ ವಿರುದ್ಧ ಸರ್ಕಾರ ಬಂಧನದ ಅಸ್ತ್ರ ಹೂಡಿದೆ.
/newsfirstlive-kannada/media/post_attachments/wp-content/uploads/2025/06/TMK_PROTEST_ARREST_1.jpg)
ಹೋರಾಟದಲ್ಲಿ ಭಾಗಿಯಾಗಿದ್ದವರ ಮೇಲೆ ಬಂಧನದ ಅಸ್ತ್ರ
ಹೇಮಾವತಿ ಎಕ್ಸ್​ಪ್ರೆಸ್​ ಲಿಂಕ್ ಕೆನಾಲ್ ವಿರೋಧಿಸಿ ರೈತರ ಆಕ್ರೋಶ ಭುಗಿಲೆದಿತ್ತು, ಶನಿವಾರ ರೈತರು ಉಗ್ರ ಹೋರಾಟ ನಡೆಸಿದರು. ಈ ಭುಗಿಲೆದ್ದ ಹೇಮಾವತಿ ಕಿಚ್ಚಿನ ವಿರುದ್ಧ ಸರ್ಕಾರ, ಹೋರಾಟದಲ್ಲಿ ಭಾಗಿಯಾಗಿದ್ದವರ ಮೇಲೆ ಬಂಧನ ಅಸ್ತ್ರ ಹೂಡಿದೆ. ಹೋರಾಟದಲ್ಲಿ ಭಾಗಿಯಾಗಿದ್ದ ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷ ಚೇತನ್​​ರನ್ನ ಬಂಧಿಸಲಾಗಿದೆ.
ಹೇಮಾವತಿ ಕಿಚ್ಚು!
- ಸರ್ಕಾರ, ಪೊಲೀಸರ ನಡೆಗೆ ಹೋರಾಟಗಾರರಲ್ಲಿ ಹೆಚ್ಚಾದ ಕಿಚ್ಚು
- ಲಿಂಕ್ ಕೆನಾಲ್ ವಿರೋಧಿಸಿದವರ ವಿರುದ್ಧ ಎಫ್ಐಆರ್ ದಾಖಲು
- ಗುಬ್ಬಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 13 ಎಫ್ಐಆರ್
- ಜನರ ಆಸ್ತಿ-ಪಾಸ್ತಿ ನಷ್ಟ, ಕರ್ತವ್ಯಕ್ಕೆ ಅಡ್ಡಿ ಸೇರಿ ಕೇಸ್ ದಾಖಲು
- ಪೊಲೀಸ್ ಇನ್‌ಸ್ಪೆಕ್ಟರ್‌ಗಳು, ಕೆಎಸ್ಆರ್​ಟಿಸಿ ಬಸ್ ಚಾಲಕರು,
- ಕಾಮಗಾರಿ ಗುತ್ತಿಗೆದಾರ ಕಂಪನಿಯ ಕಾರ್ಮಿಕನಿಂದ ದೂರು ದಾಖಲು
- ಪ್ರತಿ ಎಫ್​​ಐಆರ್​ನಲ್ಲಿ 8 ರಿಂದ 10 ಜನರ ವಿರುದ್ಧ ದೂರು ದಾಖಲು
- ಮೊನ್ನೆ ಹೋರಾಟಗಾರರ ವಿರುದ್ಧ FIR, ನಿನ್ನೆ ಹೋರಾಟಗಾರ ಅರೆಸ್ಟ್​​
- ತುಮಕೂರು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಚೇತನ್ ಬಂಧನ
ಇದನ್ನೂ ಓದಿ: RCBಗೆ ಶುಭ ಹಾರೈಸಿದ ಕೇಂದ್ರ ಸಚಿವ ಹೆಚ್​​.ಡಿ ಕುಮಾರಸ್ವಾಮಿ.. ತಂಡದ ಬಗ್ಗೆ ಏನು ಹೇಳಿದರು?
/newsfirstlive-kannada/media/post_attachments/wp-content/uploads/2025/06/TMK_PROTEST_ARREST_2.jpg)
ಮತ್ತೊಂದೆಡೆ, ಹೋರಾಟಗಾರರ ವಿರುದ್ಧ ಎಫ್​ಆರ್​ಐ ಖಂಡಿಸಿ ಹೋರಾಟಗಾರರು, ನಿನ್ನೆ ಮಹತ್ವದ ಸಭೆ ನಡೆಸಿದ್ದಾರೆ. ಮುಂದಿನ ರೂಪುರೇಷೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಸರ್ಕಾರಕ್ಕೆ ಯಾವ ರೀತಿ ಪಾಠ ಕಲಿಸಬೇಕು. ರೈತರೋ ಇಲ್ಲ, ಸರ್ಕಾರವೋ ನೋಡಿಯೇ ಬಿಡೋಣಾ ಎಂಬ ನಿರ್ಧಾರಕ್ಕೆ ಮುಂದಾಗಿದ್ದಾರೆ. ಹೋರಾಟಗಾರರ ಬಂಧನ ಹೇಮಾವತಿ ಹೋರಾಟಕ್ಕೆ ಮತ್ತಷ್ಟು ಕಿಚ್ಚು ಹೊತ್ತಿಸಿದೆ. ಸರ್ಕಾರದ ನಡೆಗೆ ರೈತರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us