/newsfirstlive-kannada/media/post_attachments/wp-content/uploads/2024/04/Hassan-Prajwal-Revanna.jpg)
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸನ ಸೆನ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರ ಶಿಷ್ಯ ನವೀನ್ ಗೌಡ ಸೇರಿ ಜೊತೆಗಾರರ ಮೇಲೆ ಕೇಸ್ ಹಾಕಲಾಗಿದೆ.
ಇದನ್ನೂ ಓದಿ:2,876 ಸಂತ್ರಸ್ತೆಯರು.. ಹಾಸನ ಅಶ್ಲೀಲ ವಿಡಿಯೋ ಕೇಸ್‌ನ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಹಿಳಾ ಆಯೋಗ
ಹಾಸನ ಸೆನ್ ಪೊಲೀಸ್ ಠಾಣೆಯಲ್ಲಿ ಪೂರ್ಣಚಂದ್ರ ತೇಜಸ್ವಿ ಎಂಬುವವರು ದೂರು ನೀಡಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರ ಶಿಷ್ಯ ನವೀನ್ ಗೌಡ ಹಾಗೂ ಜೊತೆಗಾರರು ಫೋಟೋ ಮಾರ್ಫ್ ಮಾಡಿ ವಿಡಿಯೋ ರೆಡಿ ಮಾಡಿದ್ದಾರೆ. ವಿಡಿಯೋವನ್ನು ಪೆನ್ ಡ್ರೈವ್ ಮತ್ತು ಸಿಡಿ ಮೂಲಕ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸಲಾಗಿದೆ. ಅಶ್ಲೀಲ ವಿಡಿಯೋಗಳನ್ನು ಪೆನ್‌ಡ್ರೈವ್‌ನಲ್ಲಿ ಹಾಸನದ ಮನೆ ಮನೆಗೂ ಹಂಚಿಕೆ ಮಾಡಿದ್ದಾರೆ. ಹೀಗಾಗಿ ನವೀನ್ ಗೌಡ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ