ಲಕ್ಷ್ಮೀ ನಿವಾಸ ಸೀರಿಯಲ್ ನಟನ ದಾಂಪತ್ಯದಲ್ಲಿ ಗಲಾಟೆ.. FIR ದಾಖಲು; ಪತ್ನಿ ಹೇಳಿದ್ದೇನು?

author-image
admin
Updated On
ಲಕ್ಷ್ಮೀ ನಿವಾಸ ಸೀರಿಯಲ್ ನಟನ ದಾಂಪತ್ಯದಲ್ಲಿ ಗಲಾಟೆ.. FIR ದಾಖಲು; ಪತ್ನಿ ಹೇಳಿದ್ದೇನು?
Advertisment
  • ಮದುವೆಯಾದ 6 ತಿಂಗಳಿಗೆ ಸೀರಿಯಲ್‌ ಸ್ಟಾರ್ ದಾಂಪತ್ಯದಲ್ಲಿ ಕಲಹ
  • ಬೇರೆ ಹುಡುಗಿಯ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪ
  • ವಿಪರೀತ ಕುಡಿದು ಬಂದು ಮನಬಂದಂತೆ ಹಲ್ಲೆ ಮಾಡಿ ಬೆದರಿಕೆ ದೂರು

ಬೆಂಗಳೂರು: ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಅಭಿನಯಿಸಿದ್ದ ನಟ ಮಿಥುನ್ ಕುಮಾರ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಮಾನಸಿಕ ಹಿಂಸೆ ನೀಡಿದ್ದಾರೆಂದು ನಟನ ವಿರುದ್ಧ ಸೀರಿಯಲ್ ನಟಿ, ಪತ್ನಿ ದೂರು ನೀಡಿದ್ರೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ನಟ ಮಿಥುನ್​ ಪ್ರತಿದೂರು ದಾಖಲಿಸಿದ್ದಾರೆ.

ಪ್ರೀತಿ ಮಾಡುವಾಗ ಸುಂದರ, ಮದ್ವೆಯಾದ್ಮೇಲೆ ಹರೋಹರ!
2024ರ ಅಕ್ಟೋಬರ್‌ 7ರಂದು ಸೀರಿಯಲ್ ನಟಿ ಹಾಗೂ ನಟ ಮಿಥುನ್ ಕುಮಾರ್‌ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ನಂತರ ಇಬ್ಬರು ಪಟ್ಟಿಗಾರಪಾಳ್ಯದ ಮನೆಯಲ್ಲಿ ವಾಸವಾಗಿದ್ದರು. ಪ್ರೀತಿ ಮಾಡುವಾಗ ಸುಂದರವಾಗಿದ್ದ ಬದುಕಿನಲ್ಲಿ ಮದುವೆಯಾದ 6 ತಿಂಗಳಿಗೆ ಬಿರುಗಾಳಿ ಎದ್ದಿದೆ. ಗಂಡ‌ ಮಿಥುನ್ ಕುಮಾರ್ ವಿರುದ್ಧ ಸೀರಿಯಲ್​ ನಟಿ ವಿಜಯನಗರ ಮಹಿಳಾ‌ ಠಾಣೆಯಲ್ಲಿ FIR ದಾಖಲಿಸಿದ್ದಾರೆ.

publive-image

ಪತ್ನಿ ಕೊಟ್ಟ ದೂರಿನಲ್ಲಿ ಏನಿದೆ?
ನಾವಿಬ್ಬರು ಬಾಡಿಗೆ ಮನೆ ಮಾಡಿಕೊಂಡು ಸಂಸಾರ ಪ್ರಾರಂಭಿಸಿರುತ್ತೇವೆ. ಆದರೆ ನನ್ನ ಗಂಡ ಕೆಲ ದಿನಗಳು ಮಾತ್ರ ಚೆನ್ನಾಗಿ ನೋಡಿಕೊಂಡಿದ್ದರು. ಒಂದು ದಿನ ಸ್ನೇಹಿತ ಆಸ್ಪತ್ರೆಯಲ್ಲಿದ್ದಾನೆ ಎಂದು ಹೋದವರು ನಂತರ ನಾನು ಫೋನ್​ ಮಾಡಿದರು ನನ್ನ ಕಾಲ್​ ರಿಸೀವ್ ಮಾಡಿಲ್ಲ.

publive-image

ಒಂದು ವಾರ ಕಳೆದರೂ ಅವರು ಮನೆಗೆ ಬಂದಿರುವುದಿಲ್ಲ. ಬಳಿಕ ಬೇರೆ ಹುಡುಗಿಯ ಜೊತೆ ಸಂಬಂಧದ ಬಗ್ಗೆ ತಿಳಿಯುತ್ತದೆ. ಈ ಬಗ್ಗೆ ಪಶ್ನಿಸಿದಾಗ ನನಗೆ ಬೈದು ನನ್ನ ಮೇಲೆ ಹಲ್ಲೆ ಮಾಡಿರುತ್ತಾರೆ. ಇಷ್ಟೆಲ್ಲಾ ಆದರೂ ಎಲ್ಲವನ್ನೂ ಸಹಿಸಿಕೊಂಡು ನಾನು ಸುಮ್ಮನಿದ್ದೆ. ವಿಪರೀತ ಕುಡಿದು ಬಂದು ನನಗೆ ಮಾನಸಿಕ ಹಿಂಸೆ ನೀಡಿರುತ್ತಾರೆ. ಈ ಬಗ್ಗೆ ಅತ್ತೆ-ಮಾವನಿಗೆ ಹೇಳಿದ್ರೂ ಏನು ಪ್ರಯೋಜನವಾಗಲಿಲ್ಲ.

ಇದನ್ನೂ ಓದಿ: ಲಾಸ್ಯ ನಾಗರಾಜ್ ಕುಟುಂಬದಲ್ಲಿ ಕಲಹ.. ಅಮ್ಮನ ಮೇಲೆ ಚಿಕ್ಕಮ್ಮನಿಂದ ಮಾರಣಾಂತಿಕ ಹಲ್ಲೆ ಎಂದ ನಟಿ..! 

ಕಳೆದ ಮಾರ್ಚ್‌ 3ರಂದು ಮಿಥುನ್ ಕುಮಾರ್​ ವಿಪರೀತ ಕುಡಿದು ಬಂದು ಮನಬಂದಂತೆ ಹಲ್ಲೆ ಮಾಡಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು. ನಂತರ ನಾನು ಕೆ.ಸಿ ಜನರಲ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುತ್ತೇನೆ ಎಂದು ಆರೋಪಿಸಿದ್ದಾರೆ.

publive-image

ನಟ ಮಿಥುನ್ ನೀಡಿದ ದೂರಿನಲ್ಲೇನಿದೆ?
ಪತ್ನಿ ದೂರಿಗೆ ನಟ ಮಿಥುನ್ ಕುಮಾರ್ ಕೂಡ ಪ್ರತಿದೂರು ದಾಖಲಿಸಿದ್ದಾರೆ. ಮದುವೆಯಾದಾಗಿನಿಂದ ನನ್ನ ಹಂಡತಿ ಅನುಮಾನದಿಂದ ನೋಡುತ್ತಿದ್ದರು. ಕೋ ಆರ್ಟಿಸ್ಟ್ ಜೊತೆ ಸಂಬಂಧ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದರು.

publive-image

ನನಗೂ ಮತ್ತು ಆ ಸಹನಟಿಗೂ ಯಾವುದೇ ಸಂಬಂಧ ಇರೋದಿಲ್ಲ. ನಾವಿಬ್ಬರು ಸಹದ್ಯೋಗಿಗಳಾಗಿ ನಮ್ಮ ಪಾಡಿಗೆ ಕೆಲಸ ಮಾಡಿಕೊಂಡಿದ್ದೇವೆ. ತನ್ನ ಹೆಂಡತಿ ತಪ್ಪು ಕಲ್ಪನೆಯಿಂದಾಗಿ ವಿಡಿಯೋ ಅಪ್ಲೋಡ್ ಮಾಡ್ತಿದ್ದಾರೆ. ಇದರಿಂದ ನನ್ನ ಕೆಲಸಕ್ಕೆ ತೊಂದರೆ ಆಗುತ್ತಿದೆ, ಕೆಟ್ಟವನಾಗಿ ಕಾಣುತ್ತಿದ್ದೇನೆ. ಇದರಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿ ನೆಮ್ಮದಿ ಇಲ್ಲದಂತ್ತಾಗಿದೆ. ಆದ್ದರಿಂದ ನನ್ನ ಹೆಂಡತಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment