/newsfirstlive-kannada/media/post_attachments/wp-content/uploads/2025/06/YASH_DAYAL.jpg)
ಆರ್ಸಿಬಿ ಸ್ಟಾರ್ (RCB), ಟೀಂ ಇಂಡಿಯಾದ ವೇಗಿ ಯಶ್ ದಯಾಳ್ (Yash Dayal) ವಿರುದ್ಧ ಎಫ್ಐಆರ್ ದಾಖಲಾಗಿದೆ. ಯುವತಿಯೊಬ್ಬಳು ಮಾಡಿದ ಗಂಭೀರ ಆರೋಪದ ಮೇಲೆ ಬಿಎನ್ಎಸ್ (Bharatiya Nyaya Sanhita) ಸೆಕ್ಷನ್ 69ರ ಅಡಿಯಲ್ಲಿ ಘಾಜಿಯಾಬಾದ್ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಘಾಜಿಯಾಬಾದ್ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ದಯಾಳ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಕಚೇರಿಗೂ ಸಂತ್ರಸ್ತೆ ಪತ್ರದ ಮೂಲಕ ದೂರು ನೀಡಿದ್ದಳು. ಸಿಎಂ ಕಚೇರಿ ಸೂಚನೆ ಮೇರೆಗೆ ಪೊಲೀಸರು ದಯಾಳ್ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ದಯಾಳ್ ಅವರ ಮಾಜಿ ಪ್ರಿಯತಮೆ ಎನ್ನಲಾದ ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾರೆ. ದಯಾಳ್ ಮತ್ತು ನಾನು ಕಳೆದ ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವು. ಈ ಅವಧಿಯಲ್ಲಿ ದಯಾಳ್, ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು, ಈಗ ದೂರ ಮಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಡಿಯೋ ಹಾಗೂ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದಾಳೆ.
ಇದನ್ನೂ ಓದಿ: RCB ಬೌಲರ್ ಯಶ್ ದಯಾಳ್ ಅರೆಸ್ಟ್ ಆಗ್ತಾರಾ, ಎಫ್ಐಆರ್ನಲ್ಲಿ ಏನಿದೆ..? ಸಿಎಂ ಕಚೇರಿಯಿಂದ ತನಿಖೆಗೆ ಆದೇಶ!
ಈಗಾಗಲೇ ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದ ಪೊಲೀಸರು, ಇದೀಗ ದಯಾಳ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇದರಿಂದ ದಯಾಳ್ಗೆ ಬಂಧನದ ಭೀತಿ ಎದುರಾಗಿದೆ. ಯಾವುದೇ ಕ್ಷಣದಲ್ಲಾದರೂ ಆರ್ಸಿಬಿ ಸ್ಟಾರ್ ಯಶ್, ಬಂಧನ ಆಗಬಹುದು. ಇನ್ನು, ಯುವತಿ ಆರೋಪಕ್ಕೆ ದಯಾಳ್ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: RCB ಬೌಲರ್ ವಿರುದ್ಧ ಸಿಎಂಗೆ ದೂರು.. ಒಬ್ರಲ್ಲ, ಇಬ್ರಲ್ಲ ಹಲವು ಯುವತಿಯರಿಗೆ ವಂಚಿಸಿದ್ರಾ ಯಶ್ ದಯಾಳ್?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ