ಸ್ಯಾಂಡಲ್‌ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್; ಅಸಲಿ ಕಾರಣವೇನು?

author-image
admin
Updated On
ಸ್ಯಾಂಡಲ್‌ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್; ಅಸಲಿ ಕಾರಣವೇನು?
Advertisment
  • ನಿರ್ಮಾಪಕ ಸೌಂದರ್ಯ ಜಗದೀಶ್ ಮನೆಯಲ್ಲಿ ಡೆತ್‌ನೋಟ್ ಪತ್ತೆ
  • ಡೆತ್‌ನೋಟ್‌ನಲ್ಲಿ ಕೆಲವೇ ಕೆಲವು ಸಾಲು ಬರೆದಿರುವ ಸೌಂದರ್ಯ ಜಗದೀಶ್
  • ಡೆತ್ ನೋಟ್ ಆಧರಿಸಿಯೇ ಪತ್ನಿ ಶಶಿರೇಖಾ ಅವರಿಂದ ದೂರು ದಾಖಲು

ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಕೇಸ್‌ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಸೌಂದರ್ಯ ಜಗದೀಶ್ ಸಾವನ್ನಪ್ಪಿದಾಗ ಅವರ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ಆ ಡೆತ್‌ನೋಟ್‌ನಲ್ಲಿ ಜಗದೀಶ್ ಅವರು ಕೆಲವೇ ಕೆಲವು ಸಾಲುಗಳನ್ನು ಬರೆದಿದ್ದು, ಪೊಲೀಸರ ತನಿಖೆಯಲ್ಲಿ ಸಾವಿನ ಅಸಲಿ ಕಾರಣವೇನು ಅನ್ನೋದು ಬಯಲಾಗಿದೆ.

publive-image

ಆತ್ಮಹತ್ಯೆಗೂ ಮುನ್ನ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಡೆತ್‌ನೋಟ್‌ ಬರೆದಿದ್ದರು. ಅದನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಸೌಂದರ್ಯ ಜಗದೀಶ್ ಅವರು ಡೆತ್‌ನೋಟ್‌ನಲ್ಲಿ ತನ್ನ ಬ್ಯುಸಿನೆಸ್​​ ಲಾಸ್​ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಸೌಂದರ್ಯ ಕನ್ಸ್​ಟ್ರಕ್ಷನ್ ಕಂಪನಿ ನಡೆಸುತ್ತಿದ್ದರು. ಸೌಂದರ್ಯ ಕನ್ಸ್‌ಟ್ರಕ್ಷನ್‌ನ್ಲಿ ನಷ್ಟ ಅನುಭವಿಸಿದ್ದು ಆ ನಷ್ಟಕ್ಕೆ ಪಾಲುದಾರರೇ ಕಾರಣ ಎಂದು ಜಗದೀಶ್ ಅವರು ಉಲ್ಲೇಖ ಮಾಡಿದ್ದಾರೆ.

publive-image

ಡೆತ್ ನೋಟ್​ನಲ್ಲಿ 60 ಕೋಟಿ ರೂಪಾಯಿ ನಷ್ಟವಾಗಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ಡೆತ್ ನೋಟ್ ಆಧರಿಸಿಯೇ ಪತ್ನಿ ಶಶಿರೇಖಾ ಅವರು ಮಹಾಲಕ್ಷ್ಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಶಶಿರೇಖಾ ದೂರಿನನ್ವಯ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಸೌಂದರ್ಯ ಜಗದೀಶ್​ ಬ್ಯುಸಿನೆಸ್​ ಪಾರ್ಟ್ನರ್ ಆಗಿದ್ದ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಎಂಬುವರ ಮೇಲೆ FIR ದಾಖಲಾಗಿದೆ.

ಇದನ್ನೂ ಓದಿ:ತವರು ಮನೆಗೆ ಹೋದ ಹೆಂಡತಿ ವಾಪಸ್‌ ಬರಲೇ ಇಲ್ಲ.. ಬಾಮೈದರ ಹೆಸರು ಬರೆದು ಪ್ರಾಣ ಬಿಟ್ಟ ಗಂಡ 

ಜಗದೀಶ್ ಕನ್ಸ್‌ಟ್ರಕ್ಷನ್‌ ನಷ್ಟಕ್ಕೆ ಪಾಲುದಾರರೇ ಕಾರಣ ಎಂದು ಸೌಂದರ್ಯ ಜಗದೀಶ್‌ ಅವರು ಡೆತ್​ನೋಟಲ್ಲಿ ಉಲ್ಲೇಖ ಮಾಡಿದ್ದಾರೆ. 60 ಕೋಟಿ ರೂಪಾಯಿ ನಷ್ಟದಲ್ಲಿದ್ದು ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ಡೆತ್‌ ನೋಟ್‌ನಿಂದ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment