/newsfirstlive-kannada/media/post_attachments/wp-content/uploads/2025/07/BNG-BYRATHI.jpg)
ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ನೆತ್ತರ ಕೋಡಿ ಹರಿದಿದೆ. ಹಲಸೂರು ಕೆರೆ ಬಳಿಯ ವಾರ್​ ಮೆಮೋರಿಯಲ್​ ಸರ್ಕಲ್​ನಲ್ಲಿ ರೌಡಿಶೀಟರ್​ ಶಿವಕುಮಾರ್ ಅಲಿಯಾಸ್​ ಬಿಕ್ಲು ಶಿವನ ಭೀಕರವಾಗಿ ಕೊಚ್ಚಿ ಹಾಕಲಾಗಿದೆ. ಕಾರಿನಲ್ಲಿ ಬಂದ ನಾಲ್ಕೈದು ದುಷ್ಕರ್ಮಿಗಳು ಬಿಕ್ಲು ಶಿವನನ್ನ ಆತನ ಮನೆಯ ಮುಂದೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಮುಗಿಸಿದ್ದಾರೆ. ಸ್ಥಳಕ್ಕೆ ಭಾರತೀನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ರೌಡಿ ಬಿಕ್ಲು ಶಿವನ ಬರ್ಬರ ಹತ್ಯೆ; ಮನೆ ಮುಂದೆಯೇ ಅಡ್ಡಗಟ್ಟಿ ಕೊಚ್ಚಿ ಕೊಲೆ
ಬೈರತಿ ಬಸವರಾಜ್ ವಿರುದ್ಧ ಎಫ್​ಐಆರ್​..!
ಪ್ರಕರಣ ಸಂಬಂಧ ಶಾಸಕ ಬೈರತಿ ಬಸವರಾಜ್ ವಿರುದ್ಧ FIR ದಾಖಲಾಗಿದೆ. ಶಾಸಕ ಬೈರತಿ ಬಸವರಾಜ್ A5 ಎಂದು ಉಲ್ಲೇಖ ಮಾಡಲಾಗಿದೆ. ಮಗನ ಜೀವ ತೆಗೆಯಲು ಶಾಸಕ ಬೈರತಿ ಬಸವರಾಜ್ ಕುಮ್ಮಕ್ಕು ನೀಡಿದ್ದಾರೆ ಅಂತಾ ಆರೋಪಿಸಿ ರೌಡಿಶೀಟರ್ ತಾಯಿ ವಿಜಯಲಕ್ಷ್ಮಿ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಶಾಸಕರ ವಿರುದ್ಧ ಎಫ್​ಐಆರ್ ದಾಖಲಾಗಿದೆ.
ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಜಗದೀಶ್, ವಿಮಲ್, ಕಿರಣ್, ಅನಿಲ್ ಹಾಗೂ ಶಾಸಕರ ವಿರುದ್ಧ FIR ಆಗಿದೆ. ರೌಡಿಶೀಟರ್​ ಮೇಲಿನ ದಾಳಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಮೆಲ್ನೋಟಕ್ಕೆ ಹಳೆ ವೈಷ್ಯಮದ ಹಿನ್ನೆಲೆ ಕೊಲೆಯಾಗಿದೆ ಅನ್ನೋದು ಗೊತ್ತಾಗಿದೆ ಎನ್ನಲಾಗುತ್ತಿದೆ. ನಿನ್ನೆ ರಾತ್ರಿ 8.30 ಸುಮಾರಿಗೆ ಕೃತ್ಯ ನಡೆದಿದೆ.
ಇದನ್ನೂ ಓದಿ: ಸಿದ್ದು ಅಧ್ಯಕ್ಷತೆಯಲ್ಲಿ ಕಾಂಗ್ರೆಸ್​ ಒಬಿಸಿ ಟೀಂ ಮೊದಲ ಸಭೆ; ಇಂದು 3 ಪ್ರಮುಖ ನಿರ್ಣಯ ಸಾಧ್ಯತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ