ಸ್ಯಾಂಡಲ್​​ವುಡ್​ ನಟ ಮಯೂರ್ ಪಾಟೀಲ್ ವಿರುದ್ಧ ಎಫ್​ಐಆರ್; ಆಗಿದ್ದೇನು..?

author-image
Ganesh
Updated On
ಸ್ಯಾಂಡಲ್​​ವುಡ್​ ನಟ ಮಯೂರ್ ಪಾಟೀಲ್ ವಿರುದ್ಧ ಎಫ್​ಐಆರ್; ಆಗಿದ್ದೇನು..?
Advertisment
  • ಶಾಲಿನಿ ಎಂಬ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಕೇಸ್
  • ಹೆಚ್​ಎಸ್​ಆರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು
  • ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಆರೋಪದ ಮೇಲೆ ಕೇಸ್

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಮಯೂರ್ ಪಾಟೀಲ್ ವಿರುದ್ಧ ಹೆಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಏನಿದು ಪ್ರಕರಣ..?
ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಶಾಲಿನಿ ಎಂಬ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಾಗಿದೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅತಿಕ್ರಮ ಪ್ರವೇಶ ಮಾಡಿರುವ ಆರೋಪ ನಟನ ವಿರುದ್ಧ ಕೇಳಿ ಬಂದಿದೆ. ಮಯೂರ್​ ಪಾಟೀಲ್, ರೌಡಿಗಳೊಂದಿಗೆ ಬಂದು ದೌರ್ಜನ್ಯ ನಡೆಸಿದ್ದಾರೆ ಅಂತ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಎಫ್​ಐಆರ್​​ನಲ್ಲಿ ಏನಿದೆ..?
ಶಾಲಿನಿ ಎಂಬ ಗೃಹಿಣಿ ಹೆಸ್​​ಎಸ್​ಆರ್​​ ಲೇಔಟ್​ನ ಸೋಮಸುಂದ್ರಪಾಳ್ಯದ ನಿವಾಸಿ. ಸರ್ವೇ ನಂ.55/10 ರಲ್ಲಿ ಇರುವ 14 1/4 ಗುಂಟೆ ಜಮೀನು ಶಾಲಿನಿ ಅವರ ಗಂಡನಾದ ಮಂಜುನಾಥ ರೆಡ್ಡಿಗೆ ನೊಂದಾಯಿತ ದಾನ ಪತ್ರದ ಮೂಲಕ ಬಂದಿದೆ. ಸದರಿ ಸ್ವತ್ತಿನಲ್ಲಿ ಕಟ್ಟಡ ಕಾಂಪೌಂಡ್ ಮತ್ತು ಖಾಲಿ ಜಾಗವಿರುತ್ತದೆ. ಈ ಹಿಂದೆ ಎನ್.ಆರ್ ಭಟ್ಟ ಹಾಗೂ ಮಯೂರ್ ಪಾಟೀಲ್ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.

ಇದನ್ನೂ ಓದಿ: ‘ಥಿಯೇಟರ್‌ನಲ್ಲಿ ಆ ಸ್ಟಾರ್​ ನಟನ ಸಿನಿಮಾ ಮಾತ್ರ ತೋರಿಸಿದ್ದೆ’ ಅನು ಪ್ರಭಾಕರ್ ಪುತ್ರಿ ನೋಡಿದ ಮೊದಲ ಚಿತ್ರ ಯಾವುದು?

ವಿಚಾರಣೆ ನಡೆಸಿದ್ದ ನ್ಯಾಯಾಲಯವು ಸ್ವತ್ತಿನ ಯಥಾಸ್ಥಿತಿ ಮತ್ತು ಸ್ವಾಧೀನಕ್ಕೆ ತೊಂದರೆ ಕೊಡಬಾರದೆಂದು ಆದೇಶ ನೀಡಿರುತ್ತದೆ. ಹೀಗಿರುವಾಗ ಸುಬ್ರಮಣ್ಯಂ MAS, ಎನ್.ಆರ್ ಭಟ್ಟ ಮತ್ತು ಮಯೂರ್ ವಾಟೀಲ್ ಅವರು ಕೋರ್ಟ್ ಆದೇಶ ಉಲಂಘನೆ ಮಾಡಿದ್ದಾರೆ. 50 ರಿಂದ 75 ಜನ ಅಪರಿಚಿತ ವ್ಯಕ್ತಿಗಳನ್ನು ಕರೆದುಕೊಂಡು ಬಂದು ಏಕಾಏಕಿ ಜಮೀನಿನ ಕಾಂಪೌಂಡ್ ಅನ್ನು ಜೆಸಿಬಿಯಿಂದ ಉರುಳಿಸಿದ್ದಾರೆ. ಖಾಲಿ ಜಾಗದಲ್ಲಿ ಶೆಡ್​ಗಳ ನಿರ್ಮಾಣ ಮಾಡುತ್ತಿರುತ್ತಾರೆ. ನಮ್ಮ ಸ್ವತ್ತಿಗೆ ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್ ಒಡೆದು ಹಾಕಿ ಸುಮಾರು 5 ರಿಂದ 10 ಲಕ್ಷ ನಷ್ಟ ಉಂಟು ಮಾಡಿ, ಶೆಡ್ ನಿರ್ಮಾಣ ಮಾಡುತ್ತಿರುವ ಸುಬ್ರಮಣ್ಯಂ MAS, ಎನ್.ಆರ್ ಭಟ್ಟ ಮತ್ತು ಮಯೂರ್ ಪಾಟೀಲ್ ಹಾಗೂ 50 ರಿಂದ 75 ಜನ ಅಪರಿಚಿತ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಲಾಗಿದೆ ಎಂದು ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ದುರಂತ.. ಸಿಲ್ಲಿ ರೀಸನ್‌ಗೆ ಜೀವ ಕಳೆದುಕೊಂಡ BBA ವಿದ್ಯಾರ್ಥಿನಿ; ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment