ಕನ್ನಡಿಗರ ಆಗ್ರಹ ಬೆನ್ನಲ್ಲೇ ವಿಂಗ್ ಕಮಾಂಡರ್ ವಿರುದ್ಧ FIR, ಇನ್ನೂ ಏನ್ ಕೇಳ್ತಿದ್ದಾರೆ ಗೊತ್ತಾ?

author-image
Ganesh
Updated On
ಕನ್ನಡಿಗರ ಆಗ್ರಹ ಬೆನ್ನಲ್ಲೇ ವಿಂಗ್ ಕಮಾಂಡರ್ ವಿರುದ್ಧ FIR, ಇನ್ನೂ ಏನ್ ಕೇಳ್ತಿದ್ದಾರೆ ಗೊತ್ತಾ?
Advertisment
  • ವಿಂಗ್ ಕಮಾಂಡರ್​ನ ಅಸಲಿ ಬಣ್ಣ ಬಯಲು
  • ವಿಂಗ್ ಕಮಾಂಡರ್​ನ ಮುಖವಾಡ ಕಳಚಿದ CCTV
  • ನಿಜಕ್ಕೂ ಅಲ್ಲಿ ಆಗಿದ್ದೇನು..? ವಿಂಗ್ ಕಮಾಂಡರ್​ ಹೇಳಿದ್ದೇನು?

ಕನ್ನಡಿಗರ ಆಗ್ರಹದ ಬೆನ್ನಲ್ಲೇ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಂಗ್ ಕಮಾಂಡರ್ ಶೀಲಾಧಿತ್ಯ ಬೋಸೆ​ ವಿರುದ್ಧ FIR ದಾಖಲಾಗಿದೆ. ಕಾರಿನ‌‌ ನಂಬರ್ ಆಧಾರದಲ್ಲಿ ಎಫ್ಐಆರ್ ದಾಖಲಾಗಿದೆ. ಆದರೆ ಎಫ್ಐಆರ್​ನಲ್ಲಿ ಹೆಸರು ಬದಲು ವ್ಯಕ್ತಿ ಅಂತ ಉಲ್ಲೇಖಿಸಲಾಗಿದೆ.

ನಿನ್ನೆ ಬೆಳಗ್ಗೆ ಟಿನ್ ಫ್ಯಾಕ್ಟರಿ ಸಿಗ್ನಲ್ ಬಳಿ ಬೈಕ್​ಗೆ ಕಾರು ಟಚ್​ ಆಗಿದೆ. ಕಾರಿನಿಂದ ಇಳಿದು ಬಂದ ವ್ಯಕ್ತಿ ಕಾಲಿನಿಂದ ಒದ್ದು ಬೈಕ್‌ ಕೆಳಗೆ ಬೀಳಿಸ್ತಾನೆ. ಅದನ್ನ ಕೇಳಿದಾಗ ನಿರಂತರವಾಗಿ ವಿಕಾಸ್ ಮೇಲೆ ಹಲ್ಲೆ ಮಾಡಿದ್ದಾನೆ. ಸ್ನೇಹಿತನಿಗೆ ಕರೆ ಮಾಡಲು ವಿಕಾಸ್ ಮೊಬೈಲ್ ತೆಗೆದಾಗ ಮೊಬೈಲ್ ಎಸೆಯುತ್ತಾನೆ. ಜೊತೆಗೆ ಬೈಕ್​ ಕೀ ಎಸೆದು, ಕುತ್ತಿಗೆ ಹಿಡಿದು ಕೊಲೆಗೆ ಯತ್ನಿಸಿದ್ದಾನೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಹೊಸ ತಿರುವು ಪಡೆದುಕೊಂಡ ರಿಕ್ಕಿ ರೈ ಕೇಸ್​.. ದಾಳಿಗೆ ಸಂಬಂಧಿಸಿ ಓರ್ವ ವಶಕ್ಕೆ.. ಯಾರು ಆತ..?

ಇದೇ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವಿಂಗ್ ಕಮಾಂಡರ್​ನನ್ನು ಬಂಧಿಸುವಂತೆ ಕನ್ನಡಿಗರು ಆಗ್ರಹಿಸಿದ್ದಾರೆ. ಕನ್ನಡಿಗನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಲಾಗಿದೆ. ಈ ವಿಡಿಯೋ ವೈರಲ್​ ಆಗ್ತಿದ್ದಂತೆ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ವಿಂಗ್ ಕಮಾಂಡರ್ ಶಿಲಾಧಿತ್ಯ, ಟೆಕ್ಕಿ ವಿಕಾಸ್​ಗೆ ಹೊಡೆದು ಅಸ್ವಸ್ಥನಾಗಿದ್ದರೂ ಬಿಟ್ಟಿಲ್ಲ. ಆ ವೇಳೆ ಸ್ಥಳೀಯರು ಬಿಡಿಸಲು ಬಂದರೂ ಆವಾಜ್ ಹಾಕಿದ್ದಾನೆ. ವಿಂಗ್ ಕಮಾಂಡರ್ ಕೃತ್ಯ ಹೊರ ಬರ್ತಿದ್ದಂತೆ ಅವರ ಬಂಧನಕ್ಕೆ ಆಗ್ರಹ ಹೆಚ್ಚಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಖಾಸಗಿ ಕಂಪನಿ ಉದ್ಯೋಗಿ ವಿಕಾಸ್ ಸಹೋದರ ಭರತ್, ನನ್ನ ತಮ್ಮ ಭಾನುವಾರ ರಾತ್ರಿ ಜಾತ್ರೆ ಮುಗಿಸಿ ಮನೆಗೆ ಬರ್ತಿದ್ದ. ಆ ವೇಳೆ ಬೈಕ್ ಟಚ್ ಆಗಿದ್ದಕ್ಕೆ ವಿಂಗ್ ಕಮಾಂಡರ್ ತಮ್ಮನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರೇ ನನ್ನ ತಮ್ಮನ ಮೇಲೆ ಹಲ್ಲೆ ಮಾಡಿದ್ದಾರೆ. ಕೈ ಕಚ್ಚಿದ್ದಾನೆ, ಮುಖವನ್ನ ಪರಚಿದ್ದಾನೆ. ವಿಂಗ್ ಕಮಾಂಡರ್ ತಪ್ಪಿದ್ರೂ ಅವರ ಮೇಲೆ ಯಾವುದೇ ಆ್ಯಕ್ಷನ್ ತೆಗೆದುಕೊಳ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಲ್ಲೆ ಕೇಸ್​ಗೆ ಬಿಗ್​ ಟ್ವಿಸ್ಟ್; ವಿಂಗ್ ಕಮಾಂಡರ್​ನ ಅಸಲಿ ಬಣ್ಣ ಬಯಲು, ಕೆರಳಿದ ಕನ್ನಡಿಗರು..!

ವಿಂಗ್ ಕಮಾಂಡರ್ ಆರೋಪ ಏನು?

ಇದೇನಾ ಕರ್ನಾಟಕದಲ್ಲಿ ಆಗ್ತಿರೋದು.. ನನಗೆ ಕನ್ನಡದ ಮೇಲೆ ನಂಬಿಕೆ ಇದೆ. ನೈಜ ಸ್ಥಿತಿ ನೋಡಿದ್ರೆ ಕರ್ನಾಟಕ ಹಾಟ್​ಲ್ಯಾಂಡ್ ಆಗಿದೆ. ನನಗೆ ನಂಬೋಕೆ ಆಗ್ತಿಲ್ಲ.. ಆ ದೇವರು ಕಾಪಾಡಿದ.. ದೇವರು ಶಕ್ತಿ ಕೊಟ್ಟಿರೋದು ಪ್ರತೀಕಾರ ತೀರಿಸಿಕೊಳ್ಳೋದಕ್ಕಲ್ಲ. ನಾಳೆ ಇಲ್ಲಿನ ಲಾ ಅಂಡ್ ಆರ್ಡರ್ ನನಗೆ ಖಂಡಿತ ಸಹಾಯ ಮಾಡಲ್ಲ - ಶಿಲಾದಿತ್ಯ ಬೋಸ್, ವಿಂಗ್ ಕಮಾಂಡರ್

ಆಗಿದ್ದೇನು..?

ದೃಶ್ಯ 01 : ಯುವಕ ಹೆಲ್ಮೆಟ್​ ಬಿಚ್ಚೂದಕ್ಕೂ ಮುಂಚೆನೇ ಹಲ್ಲೆ
ದೃಶ್ಯ 02 : ರಸ್ತೆ ಮೇಲೆ ಫುಟ್​ಬಾಲ್​ನಂತೆ ಯುವಕನಿಗೆ ಥಳಿತ
ದೃಶ್ಯ 03 : ಹಲ್ಲೆ ಮಾಡಿದ್ದು ಸಾಲ್ದು ಅಂತಾ ಫೋನ್​ ಕಿತ್ತೆಸೆದ
ದೃಶ್ಯ 04 : ಹೊಡೀತಿರೋದು ಗಂಡ.. ರೆಕಾರ್ಡ್​ ಮಾಡ್ತಿರೋದು ಹೆಂಡ್ತಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment