newsfirstkannada.com

BREAKING: ಕಾಂಗ್ರೆಸ್ ನಾಯಕನ ಮೇಲೆ ಹಲ್ಲೆ; ಶಾಸಕ ಶ್ರೀನಿವಾಸ್ ವಿರುದ್ಧ FIR

Share :

Published March 16, 2024 at 11:02pm

Update March 16, 2024 at 11:05pm

  ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ಮೇಲೆ ಹಲ್ಲೆ

  ಹಲ್ಲೆ ನಡೆಸಿದ ಆರೋಪದ ಮೇರೆಗೆ ಶಾಸಕ ಎಸ್‌ಆರ್ ಶ್ರೀನಿವಾಸ್ ವಿರುದ್ಧ FIR

  ಐಪಿಸಿ ಸೆಕ್ಷನ್ 511, 506, 504, 143, 149 , 323, 363 ಅಡಿ ದಾಖಲಾಯ್ತು ಕೇಸ್

ತುಮಕೂರು: ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಗುಬ್ಬಿ ಶಾಸಕ ಎಸ್‌ಆರ್ ಶ್ರೀನಿವಾಸ್ ವಿರುದ್ಧ ಎಫ್​​ಐಆರ್​ ದಾಖಲಾಗಿದೆ. ಈ ಘಟನೆ ನಡೆದ 48 ಗಂಟೆಗಳ ಬಳಿಕ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ರು ಎಫ್‌ಐಆರ್ ಮಾಡಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್‌ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಗುತ್ತಿಗೆದಾರ ರಾಯಸಂದ್ರ ರವಿಕುಮಾರ್‌ ಮೇಲೆ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಹಲ್ಲೆ ನಡೆಸಿದ್ದು ಭಾರೀ ವಿವಾದ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಪೊಲೀಸ್ರು ರಾಯಸಂದ್ರ ರವಿಕುಮಾರ್ ಹೇಳಿಕೆ ಪಡೆದು ಇದರ ಆಧಾರದ ಮೇರೆಗೆ ಎಫ್‌ಐಆರ್ ದಾಖಲಿಸಿದ್ದು, ಐಪಿಸಿ ಸೆಕ್ಷನ್ 511, 506, 504, 143, 149 , 323, 363 ಅಡಿ ಕೇಸ್​ ಮಾಡಲಾಗಿದೆ.

ಅಸಲಿಗೆ ಆಗಿದ್ದೇನು..?

ಟೆಂಡರ್‌ ವಿಚಾರದಲ್ಲಿ ಅನ್ಯಾಯ ಆಗಿದೆ ಎಂದು ರಾಯಸಂದ್ರ ರವಿಕುಮಾರ್‌ ಪಿಡಬ್ಲ್ಯುಡಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಶುರು ಮಾಡಿದ್ದರು. ಗುರುವಾರ ರಾತ್ರಿ ಎಸ್‌.ಆರ್‌. ಶ್ರೀನಿವಾಸ್‌ ಮತ್ತು ಬೆಂಬಲಗರು ಪಿಡಬ್ಲ್ಯುಡಿ ಕಚೇರಿ ಆವರಣಕ್ಕೆ ನುಗ್ಗಿ ಪೊಲೀಸರ ಸಮ್ಮುಖದಲ್ಲೇ ರಾಯಸಂದ್ರ ರವಿಕುಮಾರ್‌ ಮೇಲೆ ಹಲ್ಲೆ ನಡೆಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಕಾಂಗ್ರೆಸ್ ನಾಯಕನ ಮೇಲೆ ಹಲ್ಲೆ; ಶಾಸಕ ಶ್ರೀನಿವಾಸ್ ವಿರುದ್ಧ FIR

https://newsfirstlive.com/wp-content/uploads/2024/03/Gubbi-MLA.jpg

Load More