50 ಕೋಟಿ ಸುಲಿಗೆ ಆರೋಪ ಕೇಸ್​​; ಕೇಂದ್ರ ಸಚಿವ ಹೆಚ್​​.ಡಿ ಕುಮಾರಸ್ವಾಮಿ ವಿರುದ್ಧ ಎಫ್​ಐಆರ್

author-image
Gopal Kulkarni
Updated On
ಬಿಜೆಪಿ ಪಾದಯಾತ್ರೆಗೆ ಬಿಗ್ ಶಾಕ್; ಜೆಡಿಎಸ್ ಬೆಂಬಲ ಹಿಂಪಡೆದಿದ್ದು ಯಾಕೆ?
Advertisment
  • ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿಗೆ ಮತ್ತೊಂದು ಕಾನೂನು ಸಂಕಷ್ಟ
  • ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕುಮಾರಸ್ವಾಮಿ ವಿರುದ್ಧ FIR ದಾಖಲು
  • ಉದ್ಯಮಿ ವಿಜಯ್ ಟಾಟಾ ಬಳಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಕೇಸ್

ಬೆಂಗಳೂರು: ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಉದ್ಯಮಿ ವಿಜಯ್ ಟಾಟಾ ದೂರಿನನ್ವಯ ಅಮೃತಹಳ್ಳಿ ಪೊಲೀಸರು ಹೆಚ್​.ಡಿ.ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಿಯಲ್ ಎಸ್ಟೇಟ್​ ಉದ್ಯಮಿ ವಿಜಯ್ ಟಾಟಾ ಬಳಿ ಹೆಚ್​.ಡಿ.ಕುಮಾರಸ್ವಾಮಿ 50 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ಎಫ್​ಐಆರ್ ದಾಖಲಾಗಿದೆ.

ಇದನ್ನೂ ಓದಿ: ‘ಸಿಎಂ ರಾಜೀನಾಮೆ ಅಗತ್ಯವಿಲ್ಲ’ ಎಂದಿದ್ದೇಕೆ ಜಿಟಿಡಿ? ಈ ಹೇಳಿಕೆ ಹಿಂದಿನ 5 ಸೀಕ್ರೆಟ್ ರಿವೀಲ್

ಪ್ರಕರಣದಲ್ಲಿ ರಮೇಶ್​ಗೌಡ ಎ1 ಆರೋಪಿಯಾಗಿದ್ದು, ಹೆಚ್​.ಡಿ.ಕುಮಾರಸ್ವಾಮಿ ಎ2 ಆರೋಪಿಯಾಗಿದ್ದಾರೆ. ಬಿಎನ್​ಎಸ್​ ಸೆಕ್ಷನ್ 3(05), 308(02), 351(02) ಅಡಿಯಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಅಮೃತಹಳ್ಳಿ ಪೊಲೀಸರು ಕುಮಾರಸ್ವಾಮಿಯವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಮುಂದಿನ 5 ವರ್ಷಗಳಲ್ಲೂ ಕೂಡ ನಾನೇ ಮುಖ್ಯಮಂತ್ರಿ -ದಸರಾ ಕಾರ್ಯಕ್ರಮದಲ್ಲಿ ಸಿದ್ದು ಕೌಂಟರ್

308 ಬಿಎನ್​ಎಸ್​​ ಸೆಕ್ಷನ್ ಸುಲಿಗೆ ಆರೋಪದ ಕೇಸ್ ಆಗಿದ್ದು 7 ವರ್ಷದ ತನಕ ಶಿಕ್ಷೆಯಾಗುವ ಸಾಧ್ಯತೆ ಇದೆ. ಅದು ಅಲ್ಲದೇ ಇದು ಜಾಮೀನುರಹಿತ ಸೆಕ್ಷನ್ ಆಗಿರುವುದರಿಂದ ಕುಮಾರಸ್ವಾಮಿಯವರ ಬಂಧನ ಸಾಧ್ಯತೆ ಇದೆ. 351 ಸೆಕ್ಷನ್ ಜಾಮೀನು ಸಿಗುವ ಕೇಸ್ ಆಗಿದ್ದು ಇದರಲ್ಲಿ ಎರಡು ವರ್ಷದ ತನಕ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment