Advertisment

ಹುಲಿ ಕಾರ್ತಿಕ್​ ಮೇಲೆ ದಾಖಲಾಯ್ತು FIR.. ವಿಚಾರಣೆಗೆ ಹಾಜರಾಗಲು ನೋಟಿಸ್

author-image
AS Harshith
Updated On
ಗಿಚ್ಚಿ ಗಿಲಿಗಿಲಿ ವಿನ್ನರ್ ಹುಲಿ ಕಾರ್ತಿಕ್‌ ವಿರುದ್ಧ FIR.. ‘ಅನುಬಂಧ ಅವಾರ್ಡ್’ ಇಡೀ ತಂಡಕ್ಕೂ ಸಂಕಷ್ಟ!
Advertisment
  • ಗಿಚ್ಚಿ ಗಿಲಿಗಿಲಿ ಖ್ಯಾತಿಯ ಹುಲಿ ಕಾರ್ತಿಕ್​ ಮೇಲೆ ಕೇಸ್​​
  • ಅಟ್ರಾಸಿಟಿ ಕೇಸ್​ನಲ್ಲಿ ಕಿರುತೆರೆ ನಟ ಹುಲಿ ಕಾರ್ತಿಕ್
  • ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು

ಕಿರುತೆರೆ ನಟ ಹುಲಿ ಕಾರ್ತಿಕ್​ ಮೇಲೆ FIR ದಾಖಲಾಗಿದೆ. ಜಾತಿ ನಿಂದನೆ ಮಾಡಿದ್ದಾನೆಂದು ಕೇಸ್​ ದಾಖಲಾಗಿದೆ. ಸಮುದಾಯವೊಂದನ್ನ ಹಿಯಾಳಿಸುವ ರೀತಿಯಲ್ಲಿ ಮಾತನಾಡಿದ್ದ ಆರೋಪ ಅವರ ಮೇಲೆ ಕೇಳಿಬಂದಿದೆ.

Advertisment

ಹುಲಿ ಕಾರ್ತಿಕ್ ಕಿರುತೆರೆ ರಿಯಾಲಿಟಿ ಶೋನಲ್ಲಿ ಗೆದ್ದು ಹಿರಿ ತೆರೆಯಲ್ಲಿ ಮಿಂಚುತ್ತಿದ್ದಾರೆ. ಆದರೀಗ ಜಾತಿ ನಿಂದನೆ ಮಾಡಿದ್ದಾನೆಂದು ನಟನ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿದೆ.

publive-image

ಇದನ್ನೂ ಓದಿ: BBK11: ಹಂಸಾಗೆ ‘I Love U’ ಎಂದ ಜಗದೀಶ್​​.. ಲಾಯರ್​ ಎದೆ ಮೇಲೆ ಕಾಲಿಟ್ಟ ಮನೆ ಲೇಡಿ ಕ್ಯಾಪ್ಟನ್​

'ಯಾವುದೋ ರೋಡಲ್ಲಿ ಬಿದ್ದಿರುವ ವಡ್ಡನ ತರ ಇದ್ಯಾ' ಎಂದು ಕಾರ್ಯಕ್ರಮದಲ್ಲಿ ಹುಲಿ ಕಾರ್ತಿಕ್ ಹೇಳಿದ್ದರು. ಖಾಸಗಿ ಚಾನಲ್​ನ ಅವಾರ್ಡ್ ನೀಡುವ ಕಾರ್ಯಕ್ರಮದಲ್ಲಿ ಈ ಡೈಲಾಗ್​ ಹೊಡೆದಿದ್ದರು. ಈ ಪದ ಬಳಕೆ ಬೋವಿ ಜನಾಂಗಕ್ಕೆ ನೋವುಂಟು ಮಾಡಿದೆ. ಹೀಗಾಗಿ ಜಾತಿಯನ್ನ ನಿಂದಿಸಿ ಮಾತನಾಡಿದ ನಟನ ಮೇಲೆ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ.

Advertisment

ಇದನ್ನೂ ಓದಿ: ತರುಣ್ ಸುಧೀರ್​ ಪತ್ನಿ ಸೋನಲ್ ಬಗ್ಗೆ ಎಲ್ಲರಿಂದ ಮೆಚ್ಚುಗೆ ಮಾತು; ಏನಿರಬಹುದು ಗೆಸ್​ ಮಾಡಿ?

publive-image

ಹುಲಿ ಕಾರ್ತಿಕ್ ಮಾತ್ರವಲ್ಲದೆ ಸಂಭಾಷಣೆಕಾರ, ಕಾರ್ಯಕ್ರಮದ ನಿರ್ಮಾಪಕ, ನಿರ್ದೇಶಕನ ಮೇಲೆ ಕೂಡ ಕೇಸ್ ದಾಖಲಾಗಿದೆ. ಮೊದಲನೇ ಆರೋಪಿಯಾಗಿ ಹುಲಿ ಕಾರ್ತಿಕ್ ಹೆಸರು ಉಲ್ಲೇಖಿಸಲಾಗಿದೆ. ಲೋಕೇಶ್ ಎಂಬುವವರು ದೂರು ನೀಡಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆಂಗೇರಿ ಉಪವಿಭಾಗ ಎಸಿಪಿಯಿಂದ ವಿಚಾರಣೆಗೆ ಹಾಜರಾಗಲು ಕಾರ್ತಿಕ್​ಗೆ ನೋಟಿಸ್ ನೀಡಲಾಗಿದೆ. ನಿರ್ದಿಷ್ಟ ಸಮುದಾಯದ ಹೆಸರನ್ನ ನೆಗೆಟೀವ್ ಆಗಿ ಬಳಸಿರುವ ಕಾರಣ ನಟನನ್ನು ಪೊಲೀಸರು ತನಿಖೆಗೆ ನಡೆಸಲು ಕರೆದಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment