/newsfirstlive-kannada/media/post_attachments/wp-content/uploads/2024/12/CT-RAVI-AMBULANCE.jpg)
ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸದನದಲ್ಲಿ ಆಕ್ಷೇಪಾರ್ಹ ಶಬ್ದಗಳನ್ನು ಬಳಸಿದ ಆರೋಪದಲ್ಲಿ ಸಿ.ಟಿ.ರವಿ ಜಾಮೀನನ್ನು ಪಡೆದು ಆಚೆ ಬಂದಿದ್ದು ಈಗ ಹಳೆ ಪ್ರಕರಣವಾಯ್ತು. ಈಗ ಅದೇ ಪ್ರಕರಣ ಮತ್ತೊಂದಿಷ್ಟು ಸಂಕಷ್ಟಗಳನ್ನು ತಂದಿದೆ. ಜಾಮೀನಿನ ಮೇಲೆ ಆಚೆ ಬಂದ ಸಿ.ಟಿ.ರವಿಯವರ ಸ್ವಾಗತಕ್ಕೆ ಚಿಕ್ಕಮಗಳೂರಿನಲ್ಲಿ ಕಾರ್ಯಕರ್ತರು ಅದ್ಧೂರಿ ಸ್ವಾಗತವನ್ನು ಹಮ್ಮಿಕೊಂಡಿದ್ದು ಈ ವೇಳೆ ಮಾಡಿದ ಒಂದು ಯಡವಟ್ಟು ಈಗ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲು ಆಗುವ ಮಟ್ಟಕ್ಕೆ ಹೋಗಿದೆ.
ಇದನ್ನೂ ಓದಿ: ಬಾಡೇ ನಮ್ಮ ಮನೆ ಗಾಡು, ಬೇಳೆ ಜೊತೆ ಮೂಳೆಯೂ ಬೇಕು; ಮಂಡ್ಯದಲ್ಲಿ ಡಿಸಿ ಕಚೇರಿ ಎದುರು ಪ್ರತಿಭಟನೆ!
ಸಿ.ಟಿ.ರವಿ ಸ್ವಾಗತಕ್ಕೆ ಕೈಮರದಿಂದ ಸೈರನ್ ಹಾಕಿಕೊಂಡು ಬಂದಿದ್ದ 7 ಆ್ಯಂಬುಲೆನ್ಸ್ ಮೇಲೆ ಈಗ ಪ್ರಕರಣ ದಾಖಲಾಗಿದೆ. ಆ್ಯಂಬುಲೆನ್ಸ್​ನಲ್ಲಿ ರೋಗಿಗಳಲ್ಲಿದೆ ಸೈರನ್ ಹಾಕಿಕೊಂಡು ಹಾಗೂ ಟಾಪ್​ನಲ್ಲಿ ಲೈಟ್ ಹಾಕಿಕೊಂಡು ಬಂದಿದ್ದ 7 ಆ್ಯಂಬ್ಯುಲೆನ್ಸ್ ಮೇಲೆ ಈಗ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರಿಗೆ ಕಿರಿಕಿರಿ ನೀಡಿದ್ದಾರೆಂದು ಪ್ರಕರಣ ದಾಖಲಾಗಿದ್ದು. ನಗರ ಠಾಣೆಯಲ್ಲಿ ಏಳೂ ಆ್ಯಂಬುಲೆನ್ಸ್​ ಮೇಲೆ ಎಫ್​ಐಆರ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us