newsfirstkannada.com

ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ದಿಢೀರ್​ ಬೆಂಕಿ; 8 ಮಂದಿಗೆ ತೀವ್ರ ಗಾಯ; ಮೂವರ ಸ್ಥಿತಿ ಗಂಭೀರ

Share :

Published August 11, 2023 at 5:25pm

Update August 11, 2023 at 5:40pm

    ಬಿಬಿಎಂಪಿ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಬೆಂಕಿ

    ಕಾಮಗಾರಿಗಳ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ನಡೆದ ಘಟನೆ..!

    ಸದ್ಯ ಘಟನೆ ಬಗ್ಗೆ ಹೆಚ್ಚಿದ ಅನುಮಾನ, ಮುಂದಿನ ಕಥೆಯೇನು?

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಕಚೇರಿ ಆವರಣದ ಕಟ್ಟಡವೊಂದರಲ್ಲಿ ದಿಢೀರ್​ ಬೆಂಕಿ ಕಾಣಿಸಿಕೊಂಡಿದೆ. ಬಿಬಿಎಂಪಿ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೊತ್ತಿ ಉರಿಯುತ್ತಿದೆ.

ಸದ್ಯ ಬೆಂಕಿ ಹತೋಟಿಗೆ ಬಂದಿದ್ದು, ಈ ಘಟನೆಯಲ್ಲಿ 8 ಮಂದಿ ಬಿಬಿಎಂಪಿ ನೌಕಕರಿಗೆ ತೀವ್ರ ಗಾಯಗಳಾಗಿವೆ. ಇಬ್ಬರು ಮಹಿಳೆಯರು, ಆರು ಪುರುಷ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ಸೆಂಟೆ್​್​್ ಮಾರ್ಥಾಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಅರ್ಧ ಗಂಟೆಯಾದ್ರೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿಲ್ಲ. ಈಗ ಸ್ಥಳಕ್ಕೆ ಬಿಬಿಎಂಪಿ ಕಮಿಷನರ್​​ ತುಷಾರ್​ ಗಿರಿನಾಥ್​​​, ಹಣಕಾಸು ವಿಭಾಗದ ಆಯುಕ್ತ ಜಯರಾಮ್​​ ರಾಯ್​​ ಭೇಟಿ ನೀಡಿದ್ದಾರೆ. ಹಲವು ಮಹತ್ವದ ದಾಖಲೆಗಳು ಸುಟ್ಟು ಹೋಗಿವೆ ಎನ್ನಲಾಗಿದೆ.

ಬಿಬಿಎಂಪಿ ಕಾಮಗಾರಿಗಳ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಇನ್ನು, ಬಿಬಿಎಂಪಿ ಕಾಮಗಾರಿಗಳ‌ ಗುಣಮಟ್ಟ ನಿಯಂತ್ರಣ ದಾಖಲೆಗಳ ಸಂಗ್ರಹವಿದ್ದ ಕೊಠಡಿ ಆಗಿತ್ತು. ಹೀಗಾಗಿ ಇದರ ಸುತ್ತ ಹಲವು ಅನುಮಾನ ಹೆಚ್ಚಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ದಿಢೀರ್​ ಬೆಂಕಿ; 8 ಮಂದಿಗೆ ತೀವ್ರ ಗಾಯ; ಮೂವರ ಸ್ಥಿತಿ ಗಂಭೀರ

https://newsfirstlive.com/wp-content/uploads/2023/08/BBMP_Fire.jpg

Load More