/newsfirstlive-kannada/media/post_attachments/wp-content/uploads/2025/03/JUSTICE-YASHWANT-VERMA.jpg)
ದೆಹಲಿಯ ಹೈಕೋರ್ಟ್​ ನ್ಯಾಯಮೂರ್ತಿ ಯಶ್ವಂತ್ ವರ್ಮರನ್ನ ಸುಪ್ರೀಂ ಕೋರ್ಟ್​ ಕೊಲಿಜಿಯಂ, ಅವರನ್ನು ಪೆರೇಂಟ್​ ಕೋರ್ಟ್​ಗೆ ವರ್ಗಾವಣೆ ಮಾಡಿದ್ದಾರೆ. ಇತ್ತೀಚೆಗೆ ಅವರ ಮನೆಯಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾದ ಕಾರಣದಿಂದಾಗಿ ಅವರನ್ನು ವಾಪಸ್ ಅಲಹಾಬಾದ್​ನ ಪೇರೆಂಟ್​ ಕೋರ್ಟ್​ಗೆ ವರ್ಗಾವಣೆ ಮಾಡಲಾಗಿದೆ.
ಮೂಲಗಳ ಪ್ರಕಾರ ಇತ್ತೀಚೆಗೆ ನ್ಯಾಯಮೂರ್ತಿ ವರ್ಮಾ ಅವರ ಅಧಿಕೃತ ನಿವಾಸಕ್ಕೆ ಬೆಂಕಿ ಬಿದ್ದಿತ್ತು. ಅವರ ಕುಟುಂಬದವರು ಕೂಡಲೇ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದರು. ಬೆಂಕಿಯನ್ನು ಆರಿಸಿದ ಬಳಿಕ, ಅಗ್ನಿಶಾಮಕ ದಳದ ಸಿಬ್ಬಂದಿ ‘ವರ್ಮಾ ಅವರ ಬಂಗಲೆಯಲ್ಲಿ ಅಪಾರ ಪ್ರಮಾಣದ ನಗದು ಇರುವುದನ್ನು ಪತ್ತೆ ಮಾಡಿದ್ದರು. ಈ ಒಂದು ವಿಷಯ ದೊಡ್ಡ ಪ್ರಮಾಣದಲ್ಲಿ ಸುದ್ದಿ ಮಾಡಿತ್ತು.
ಈ ಮಾಹಿತಿಯನ್ನು ಪಡೆದ ಸುಪ್ರೀಂ ಕೋರ್ಟ್​ನ ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಕೊಲಿಜಿಯಂ ಸಭೆ ಕರೆದು ಸರ್ವಾನುಮತದಿಂದ ಜಸ್ಟಿಸ್ ವರ್ಮಾ ಅವರನ್ನು ಈ ಹಿಂದೆ 2021ರವರೆಗೆ ಸೇವೆ ಸಲ್ಲಿಸುತ್ತಿದ್ದ ಅಲಹಾಬಾದ್ ಹೈಕೋರ್ಟ್​​ಗೆ ಮರಳಿ ವರ್ಗಾವಣೆ ಮಾಡಲು ತೀರ್ಮಾನ ತೆಗೆದುಕೊಂಡು ಆದೇಶ ನೀಡಲಾಗಿದೆ.
ಇಷ್ಟು ಮಾತ್ರವಲ್ಲ ಜಸ್ಟಿಸ್​ ಯಶ್ವಂತ್ ವರ್ಮಾ ವಿರುದ್ಧ ತನಿಖೆ ಆಗ್ರಹ ಹಾಗೂ ಅವರ ಮೇಲೆ ಮಹಾಭಿಯೋಗ ನಡೆಸುವ ಬಗ್ಗೆಯೂ ಆರಂಭಿಕ ಚರ್ಚೆಗಳು ಕೂಡ ಆರಂಭವಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ