/newsfirstlive-kannada/media/post_attachments/wp-content/uploads/2025/02/MYS-CHAMUNDI-HILL-FIRE.jpg)
ಚಾಮುಂಡಿ ಬೆಟ್ಟದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಹೊತ್ತಿ ಉರಿಯುತ್ತಿದ್ದು, ಅಗ್ನಿಯ ಕೆನ್ನಾಲಿಗೆಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಮಾಡಲಾಗುತ್ತಿದೆ.
ಬೆಂಕಿ ಕೆನ್ನಾಲಿಗೆಗೆ ಗಿಡ-ಮರಗಳು ಸುಟ್ಟು ಕರಕಲಾಗಿವೆ. ಬೆಟ್ಟದ ಸುತ್ತ ನೂರಾರು ಎಕರೆಗೆ ಬೆಂಕಿಯ ಕೆನ್ನಾಲಿಗೆ ಆವರಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಮಾಡ್ತಿದೆ. ಆದರೆ ಬೆಂಕಿ ತಹಬದಿಗೆ ಸಿಗುತ್ತಿಲ್ಲ. ಒಟ್ಟು ಮೂರು ಅಗ್ನಿಶಾಮಕ ವಾಹನ ದೌಡಾಯಿಸಿವೆ.
ಆದರೆ ಮೈಸೂರು ಅಗ್ನಿಶಾಮಕ ಅಧಿಕಾರಿ ಗುರರಾಜ್ ಈ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದು. ಸದ್ಯ ಬೆಂಕಿ ಆರಿಸಲು ಹತೋಟಿಗೆ ಸಿಗುತ್ತಿಲ್ಲ. ನಮ್ಮ ಎಲ್ಲಾ ಸಿಬ್ಬಂದಿಗಳು ಶಕ್ತಿ ಮೀರಿ ಶ್ರಮಿಸುತ್ತಿವೆ. ಇಂದು ಮಧ್ಯಾಹ್ನ 1.30ರ ವೇಳೆ ಬೆಂಕಿ ಕಾಣಿಸಿಕೊಂಡಿದೆ. 6 ಅಗ್ನಿಶಾಮಕ ವಾಹನಗಳು, ನಗರದ ಹಾಗೂ ಬೇರೇಡೆ ಇರುವ ಎಲ್ಲ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇಷ್ಟಾದರೂ ಕೂಡ ಬೆಂಕಿ ಹತೋಟಿಗೆ ಬರುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:BREAKING: ಮೈಸೂರು ಚಾಮುಂಡಿ ಬೆಟ್ಟದಲ್ಲಿ ಭಾರೀ ಬೆಂಕಿ; ಕಿಡಿಗೇಡಿಗಳ ಕೃತ್ಯಕ್ಕೆ ದೊಡ್ಡ ಅನಾಹುತ..!
ಗಾಳಿ ಪ್ರಮಾಣ ಜಾಸ್ತಿ ಆಗಿರುವ ಬೆಂಕಿ ಕಾರಣದಿಂದಾಗಿ ನಂದಿಸುವ ಕೆಲಸ ನಾವು ಅಂದುಕೊಂಡಷ್ಟು ಸುಲಭವಾಗುತ್ತಿಲ್ಲ. ಬೆಟ್ಟದ ಕೇಳಭಾಗದ ಲೇಔಟ್ನಲ್ಲಿ ಸಾರ್ವಜನಿಕರು ಕಸಕ್ಕೆ ಬೆಂಕಿ ಹಾಕಿರೋದ್ರಿಂದ ಬೆಂಕಿ ಬೆಟ್ಟಕ್ಕೆ ವ್ಯಾಪಿಸಿಕೊಂಡಿದೆ. ಬೆಟ್ಟದ ಎಲ್ಲ ಕಡೆ ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಗಿದೆ. ಬಿಸಿಲಿನ ತಾಪ, ಕುರುಚಲ ಗಿಡಗಳು ಇರುವುದಿರಂದ ಬೆಂಕಿ ನಂದಿಸಲು ಕಷ್ಟಸಾಧ್ಯವಾಗುತ್ತಿದೆ ಎಂದು ಹೇಳೀದ್ದಾರೆ ಅಧಿಕಾರಿ ಚಂದನ್ ಹಾಗೂ ಗುರುರಾಜ್
ಇದನ್ನೂ ಓದಿ:ಬೆಂಗಳೂರಲ್ಲಿ ಕೋಟಿ, ಕೋಟಿ ವಂಚಿಸಿದ ಕಿಲಾಡಿ ದಂಪತಿ ಬಂಧನ; ಖತರ್ನಾಕ್ ಪ್ಲಾನ್ ಏನು ಗೊತ್ತಾ?
ಒಂದು ಕಡೆ ಬೆಂಕಿ ಹತೋಟಿಗೆ ಸಿಗುತ್ತಿಲ್ಲ. ಮತ್ತೊಂದು ಕಡೆ ಚಾಮುಂಡಿ ಬೆಟ್ಟದ ಜನರು ಆತಂಕದಲ್ಲದ್ದಾರೆ. ಬೆಂಕಿ ಸದ್ಯ ದೇವಿಕೆರೆಯವರೆಗೂ ಹಬ್ಬಿದೆ. ಇದೇ ರೀತಿ ಮುಂದುವರಿದರೆ ಗ್ರಾಮಕ್ಕೂ ಹಬ್ಬುವ ಆತಂಕ ಜನರಲ್ಲಿ ಕಾಣಿಸಿಕೊಂಡಿದೆ. ಆದರೂ ಅಗ್ನಿಶಾಮಕ ದಳದಿಂದ ಸರ್ವಪ್ರಯತ್ನಗಳು ನಡೆಯುತ್ತಿದ್ದು.ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ