/newsfirstlive-kannada/media/post_attachments/wp-content/uploads/2025/01/Maha_Kumbh_Mela.jpg)
ಜನವರಿ 13ರಂದು ಆರಂಭವಾದ ಮಹಾ ಕುಂಭಮೇಳವು ಫೆಬ್ರವರಿ 26ರ ವರೆಗೆ ನಡೆಯಲಿದೆ. ಈಗಾಗಲೇ 7.72 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ನಿನ್ನೆ ಒಂದೇ ದಿನ ಸುಮಾರು 46.95 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಆದ್ರೆ ಈ ಮಧ್ಯೆ ಮಹಾ ಕುಂಭದಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿ, ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಅಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗಾಹುತಿ
ಪ್ರಯಾಗ್ರಾಜ್ನಲ್ಲಿ ಮಹಾಕುಂಭಮೇಳದಲ್ಲಿ ನಡೆದ ಅಗ್ನಿ ಅವಘಡ ಕುಂಭಮೇಳಕ್ಕೆ ಬಂದಿದ್ದ ಭಕ್ತರನ್ನ ಭಯ ಭೀತರನ್ನಾಗಿ ಮಾಡಿತ್ತು. ಮಹಾ ಕುಂಭಮೇಳದ ಸೆಕ್ಟರ್ 19ರಲ್ಲಿ 6 ಅಡುಗೆ ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಟೆಂಟ್ಗಳು ಮಾತ್ರ ಬೆಂಕಿಗೆ ಆಹುತಿಯಾಗಿವೆ.
ಇನ್ನೂ 300 ಟೆಂಟ್ಗಳು ಸುಟ್ಟು ಭಸ್ಮವಾದರೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದೇವರಿದ್ದಾನೆ ಅನ್ನೋದಕ್ಕೆ ಎಲ್ಲರೂ ಸುರಕ್ಷಿತವಾಗಿರೋದೆ ಪ್ರತ್ಯಕ್ಷ ಸಾಕ್ಷಿ. ಈ ಅವಘಡದಲ್ಲಿ ಯಾರಿಗೂ ಕೂಡ ಗಾಯಗಳಾಗಿಲ್ಲ. ಪರಿಸ್ಥಿತಿ ಹತೋಟಿಗೆ ತರಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಘಟನೆ ಕುರಿತಾಗಿ ಸದ್ಗುರು ಜಗ್ಗಿ ವಾಸುದೇವ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಒಂದೇ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದಾಗ, ನಿರ್ಲಕ್ಷ್ಯ ಮತ್ತು ಅತಿಯಾದ ಉತ್ಸಾಹದಿಂದಾಗಿ ಬೆಂಕಿ ಮತ್ತು ಕಾಲ್ತುಳಿತಗಳಂತಹ ಅವಘಡಕ್ಕೆ ಕಾರಣವಾಗುತ್ತೆ ಎಂದಿದ್ದಾರೆ.
ಹೆಚ್ಚಿನ ಸಂಖ್ಯೆಯ ಜನರು ಒಂದೇ ಸ್ಥಳದಲ್ಲಿ ಸೇರಿದಾಗ, ನಿರ್ಲಕ್ಷ್ಯ ಮತ್ತು ಅತಿಯಾದ ಉತ್ಸಾಹವು ಬೆಂಕಿ ಮತ್ತು ಕಾಲ್ತುಳಿತಗಳಿಗೆ ಕಾರಣವಾಗಬಹುದು. 144 ವರ್ಷಗಳಿಗೊಮ್ಮೆ ನಡೆಯುವ ಈ ಅದ್ಭುತ ಮತ್ತು ಮಹತ್ವಪೂರ್ಣ ಘಟನೆಯನ್ನ ನಾಶಪಡಿಸುವುದು ಮತ್ತು ಅಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು. ಅಲ್ಲಿಗೆ ಹೋಗುವ ಎಲ್ಲಾ ಭಕ್ತರ ಜವಾಬ್ದಾರಿ ಸಹಜವಾಗಿ ಆಡಳಿತದ್ದಾಗಿರುತ್ತೆ. ಮಹಾಕುಂಭವು ಭಯಭೀತ ಸ್ಥಳಕ್ಕಿಂತ ಹೆಚ್ಚಾಗಿ ಲಕ್ಷಾಂತರ ಮಾನವರ ಆಧ್ಯಾತ್ಮಿಕ ವಿಕಾಸಕ್ಕೆ ಕೇಂದ್ರಬಿಂದುವಾಗಲಿ. ಅನೇಕ ತಲೆಮಾರುಗಳಲ್ಲಿ ಒಮ್ಮೆ ನಡೆಯುವ ಕಾರ್ಯಕ್ರಮದ ಯಶಸ್ಸಿಗಾಗಿ ಎಲ್ಲರೂ ಶ್ರಮಿಸಬೇಕು.
ಸದ್ಗುರು ಜಗ್ಗಿ ವಾಸುದೇವ್, ಇಶಾ ಫೌಂಡೇಶನ್ ಸಂಸ್ಥಾಪಕ
ಇದನ್ನೂ ಓದಿ: ಶೀತಲ ಸಮರದ ಮಧ್ಯೆ ಡಿ.ಕೆ ಶಿವಕುಮಾರ್- ಜಾರಕಿಹೊಳಿ ಮುಖಾಮುಖಿ.. ಒಂದೇ ವೇದಿಕೆಯಲ್ಲಿ ಹೇಗಿದ್ದರು?
ಸಿಎಂ ಯೋಗಿ ಆದಿತ್ಯನಾಥ್‌ಗೆ ಪ್ರಧಾನಿ ಮೋದಿ ಕರೆ
ಇನ್ನು ಘಟನಾ ಸ್ಥಳಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಸಿಎಂ ಆದಿತ್ಯನಾಥ್‌ಗೆ ಪ್ರಧಾನಿ ಮೋದಿ ಕರೆ ಮಾಡಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ಹಿರಿಯ ಅಧಿಕಾರಿಗಳನ್ನ ಸ್ಥಳಕ್ಕೆ ಕಳುಹಿಸಿ. ಘಟನಾವಳಿಯ ಬಗ್ಗೆ ಮಾಹಿತಿ ನೀಡಿ ಎಂದು ಯೋಗಿ ಆದಿತ್ಯನಾಥ್‌ಗೆ ಮೋದಿ ತಿಳಿಸಿದ್ದಾರೆ.
ಆಡಳಿಯ ಮಂಡಳಿಯು ರಕ್ಷಣಾ ಕ್ರಮ ಕೈಗೊಳ್ಳುವ ಜೊತೆಗೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೇ ಪ್ರತಿಯೊಬ್ಬರ ಸುರಕ್ಷತೆಗಾಗಿ ನಾವು ಗಂಗಾ ದೇವಿಯನ್ನ ಪ್ರಾರ್ಥಿಸುತ್ತೇವೆ ಎಂದು ಕುಂಭಮೇಳದ ಆಡಳಿತ ಮಂಡಳಿ ತಿಳಿಸಿದೆ. ಗಂಗೆ ಪೂಜೆ ಮಾಡಲು ಬಂದಿರುವ ಭಕ್ತರನ್ನ ಆ ತಾಯಿ ಗಂಗಾ ಮಾತೆಯೇ ಕಾಪಾಡಿದ್ದಾಳೆ ಅನ್ನೋದು ಭಕ್ತರ ಮನದಾಳದ ಮಾತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ