/newsfirstlive-kannada/media/post_attachments/wp-content/uploads/2025/06/TRAIN.jpg)
ಮಹಾರಾಷ್ಟ್ರದ ಪುಣೆಯಿಂದ ದೌಂಡ್​ಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಶಟಲ್ ಡಿಸೇಲ್ ಮಲ್ಟಿಪಲ್ ಯುನಿಟ್ (DEMU) ರೈಲು ಬೆಂಕಿ ಅಪಘಾತಕ್ಕೆ ಒಳಗಾಗಿದೆ.
ವರದಿಗಳ ಪ್ರಕಾರ, ಟ್ರೈನ್​​ನಲ್ಲಿರುವ ಟಾಯ್ಲೆಟ್​​ನಲ್ಲಿ ಶಾರ್ಟ್​ ಸರ್ಕ್ಯೂಟ್ ಸಂಭವಿಸಿ ಅನಾಹುತ ಆಗಿದೆ ಎನ್ನಲಾಗುತ್ತಿದೆ. ರೈಲಿನಲ್ಲಿ ದಟ್ಟ ಹೊಗೆಯೊಂದಿಗೆ ಬೆಂಕಿ ಕಾಣಿಸಿಕೊಂಡಿದ್ದು, ಹಲವು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಪ್ರಯಾಣಿಕರು ಹೊಗೆಯನ್ನು ನೋಡಿ ಗಾಬರಿಯಿಂದ ರಕ್ಷಣೆಗಾಗಿ ಕಿರುಚಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ವಿಮಾನ ದುರಂತ ಬೆನ್ನಲ್ಲೇ ಖ್ಯಾತ ಸಿನಿಮಾ ನಿರ್ಮಾಪಕ ನಾಪತ್ತೆ.. ಆತಂಕದಲ್ಲಿ ಕುಟುಂಬಸ್ಥರು..
A passenger aged 55, hailing from Madhya Pradesh, reportedly discarded a lit 'bidi' in a dustbin aboard the Daund-Pune DEMU train, which subsequently caused a fire incident. pic.twitter.com/1NOZ12u1ak
— Arvind Chauhan (@Arv_Ind_Chauhan) June 16, 2025
ಸುದ್ದಿ ತಿಳಿಯುತ್ತಿದ್ದಂತೆಯೇ ರೈಲು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. 30 ನಿಮಿಷದೊಳಗೆ ಅಗ್ನಿಶಾಮಕ ಸಿಬ್ಬಂದಿ ಕೂಡ ಆಗಮಿಸಿ, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಒಟ್ಟು ಮೂರು ಫೈರ್​ ಎಂಜಿನ್​​ಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ. ದುರ್ಘಟನೆಯಲ್ಲಿ ಗಾಯಗೊಂಡಿರುವವರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಆದರೆ ಮೊದಲು ಟಾಯ್ಲೆಟ್​ನಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಸಂಭವಿಸಿತ್ತು. ನಂತರ ಇಡೀ ಟ್ರೈನ್​ಗೆ ಬೆಂಕಿ ಆವರಿಸುತ್ತಿತ್ತು. ಇನ್ನು ಟಾಯ್ಲೆಟ್​ನಲ್ಲಿ ಸಿಕ್ಕಿಕೊಂಡಿದ್ದ ಓರ್ವ ಪ್ರಯಾಣಿಕನನ್ನು ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ: ಲಾರಿ-ಬೈಕ್ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಇಬ್ಬರು ಡ್ಯಾನ್ಸರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ