Advertisment

BBK11: ಹನುಮಂತುಗೆ ಸಿಕ್ತು ಕಿಚ್ಚನಿಂದ ಫೈಯರ್​ ಡೈಲಾಗ್​; ಮನೆ ಮಂದಿ ಫುಲ್ ಶಾಕ್​!

author-image
Veena Gangani
Updated On
BBK11: ಹನುಮಂತುಗೆ ಸಿಕ್ತು ಕಿಚ್ಚನಿಂದ ಫೈಯರ್​ ಡೈಲಾಗ್​; ಮನೆ ಮಂದಿ ಫುಲ್ ಶಾಕ್​!
Advertisment
  • ವೀಕ್ಷಕರಿಗೆ ಮನರಂಜನೆ ನೀಡುತ್ತಿರೋ ಹನುಮಂತ ಫುಲ್ ಫೇಮಸ್
  • ಹನುಮಂತನ ಆಟ ನೋಡಿ ಶಾಕ್​ ಆದ ಬಿಗ್​ಬಾಸ್​ ಮನೆಯ ಸದಸ್ಯರು
  • ಮತ್ತೆ ರಾಕ್ ಆಟಕ್ಕೆ ಮರಳಿದ ಹಳ್ಳಿ ಹೈದನಿಗೆ ಕಿಚ್ಚನಿಂದ ಸಿಕ್ತು ಚಪ್ಪಾಳೆ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಸ್ಪರ್ಧಿ ಹನುಮಂತ ಅವರು ಗ್ರ್ಯಾಂಡ್​ ಫಿನಾಲೆಗೆ ಎಂಟ್ರಿ ಕೊಡುತ್ತಿರೋ ಮೊದಲ ಸ್ಪರ್ಧಿಯಾಗಿದ್ದಾರೆ. ಇನ್ನೇನು ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆಗೆ ಮೂರು ವಾರಗಳು ಬಾಕಿ ಇರುವ ಹೊತ್ತಲ್ಲೇ ಟಿಕೆಟ್​ ಟು ಫಿನಾಲೆ ಪಾಸ್​ ಅನ್ನು ತಮ್ಮದಾಗಿಸಿಕೊಂಡಿದ್ದಾರೆ ಹಳ್ಳಿ ಹೈದ ಹನುಮಂತ.

Advertisment

ಇದನ್ನೂ ಓದಿ:BBK11: ಜಸ್ಟ್​ 2 ಸೆಕೆಂಡ್​ನಲ್ಲಿ ಬಿಗ್​ಬಾಸ್​ ಫಿನಾಲೆ ಟಿಕೆಟ್​ ಮಿಸ್​ ಮಾಡಿಕೊಂಡ ಸ್ಪರ್ಧಿ ಯಾರು?

publive-image

ಇಷ್ಟು ದಿನ ಬಿಗ್​ಬಾಸ್​ ಮನೆಯಲ್ಲಿ ಹಾಡು ಹಾಡುತ್ತಲ್ಲೇ ಸ್ಪರ್ಧಿಗಳಿಗೆ ಟಾಂಗ್​ ಕೊಡುತ್ತಿದ್ದ ಹನುಮಂತ ಈಗ ಮಸ್ತ್​ ಆಗಿ ಆಟ ಆಡುವ ಮೂಲಕ ಮತ್ತೆ ದಾಖಲೆ ನಿರ್ಮಿಸಿದ್ದಾರೆ. ವೈಲ್ಡ್ ಕಾರ್ಡ್​ ಸ್ಪರ್ಧಿಯಾಗಿ ಬಿಗ್​ಬಾಸ್​ ಮನೆಗೆ ಬಂದ ಹನುಮಂತ ಉತ್ತಮವಾಗಿ ಆಟ ಆಡುತ್ತಿದ್ದರು. ಹನುಮಂತನ ತುಂಟಾಟ, ಟಾಸ್ಕ್​ ಆಡುವ ಶೈಲಿಗೆ ಎಲ್ಲರೂ ಫಿದಾ ಆಗಿದ್ದಾರೆ.

publive-image

ಇದಕ್ಕೆ ಸಾಕ್ಷಿ ಎಂಬಂತೆ ಕಿಚ್ಚ ಸುದೀಪ್​ ಕೂಡ ವೇದಿಕೆ ಮೇಲೆ ಚಪ್ಪಾಳೆ ತಟ್ಟಿ ಭೇಷ್ ಎಂದಿದ್ದಾರೆ. ಹೌದು, ಆಮೆ ತರ ಬಿಗ್​ಬಾಸ್​ಗೆ ಬಂದ್ರಿ ಯಾರು ನೋಡಲಿಲ್ಲ ಅದೊಂದು ಮೊಲ ಅಂತ ಎಂದು ಹೊಗಳಿದ್ದಾರೆ. ಲೈಟ್ ಆಗಿ ಬಂದವರು ಎಲ್ಲಾ ಲೇಟೆಸ್ಟ್ ಆಗಿ ಬರೋದು ಹನುಮಂತು ಚೆನ್ನಾಗಿ ಆಡುತ್ತಿದ್ದೀರಾ ಅಂತ ಚಪ್ಪಾಳೆ ತಟ್ಟಿದ್ದಾರೆ. ಹನುಮಂತ 2 ನಿಮಿಷ 27 ಸೆಕೆಂಡ್​ನಲ್ಲಿ ಇದೇ ಟಾಸ್ಕ್​ನಲ್ಲಿ ಗೆದ್ದು ಟಿಕೆಟ್​ ಟು ಫಿನಾಲೆಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿಯಾಗಿದ್ದಾರೆ. ಜೊತೆಗೆ ಈ ವಾರದ ಕೊನೆಯ ಕ್ಯಾಪ್ಟನ್​ ಆಗಿ ಹೊರ ಹೊಮ್ಮಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment