/newsfirstlive-kannada/media/post_attachments/wp-content/uploads/2023/06/Train-Odisha.jpg)
ಒಡಿಶಾ: ಬ್ರೇಕ್ ಪ್ಯಾಡ್ನಲ್ಲಿ ದೋಷ ಕಂಡುಬಂದ ಕಾರಣ ಪುರಿ-ದುರ್ಗ್ ಎಕ್ಸ್ಪ್ರೆಸ್ನ ಎಸಿ ಕೋಚ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರೈಲು ನುಪಾಡ ಜಿಲ್ಲೆಯ ಖರಿಯಾರ್ ಬಳಿ ತಲುಪುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ.
ಗುರುವಾರ ಸಂಝೆ ಈ ಘಟನೆ ಬೆಳಕಿಗೆ ಬಂದಿದೆ. ಖರಿಯಾರ್ ನಿಲ್ದಾಣ ತಲುಪುತ್ತಿದ್ದಂತೆಯೇ ರೈಲಿನ ಬಿ3 ಕೋಚ್ನಲ್ಲಿ ಹೊಗೆ ಕಾಣಿಸಿಕೊಂಡಿದೆ.
ಈ ಬಗ್ಗೆ ಮಾತನಾಡಿದ ರೈಲ್ವೆ ಅಧಿಕಾರಿಗಳು, ಬ್ರೇಕ್ ಪ್ಯಾಡ್ ಘರ್ಷಣೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.
https://twitter.com/Cric_gal/status/1666893664021278721?s=20
‘‘18426ರ ಬಿ3 ಕೋಚ್ನಲ್ಲಿ 22.07 ಸಮಯಕ್ಕೆ ಆಗಮನವಾಗಿದೆ. ಅಲಾರ್ಮ್ ಚೈನ್ ಎಳೆದ ಬಳಿಕ ಬ್ರೇಕ್ಗಳನ್ನು ಬಿಡುಗಡೆ ಮಾಡಲಾಗಿಲ್ಲ. ಹಾಗಾಗಿ ಬ್ರೇಕ್ ಪ್ಯಾಡ್ ಘರ್ಷಣೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ಕೋಚ್ ಒಳಗಡೆಗೆ ಬೆಂಕಿ ಕಾಣಿಸಿಕೊಂಡಿಲ್ಲ. ಬ್ರೇಕ್ ಪ್ಯಾಡ್ನಲ್ಲಿ ಮಾತ್ರ ಬೆಂಕಿ ಕಾಣಿಸಿಕೊಂಡಿದೆ ಎಂದು ಈಶ್ಟ್ ಕೋಸ್ಟ್ ರೈಲ್ವೆ ಹೇಳಿದೆ.
ಇನ್ನು ಈ ಘಟನೆಯಿಂದ ಹಾವುದೇ ಹಾನಿ ಸಂಭವಿಸಿಲ್ಲ. ಕೂಡಲೇ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಬಳಿಕ 23 ಗಂಟೆಗೆ ರೈಲು ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ