95 ಪ್ರಯಾಣಿಕರಿದ್ದ ವಿಮಾನದಲ್ಲಿ ದಿಢೀರ್ ಬೆಂಕಿ.. ಭಯಾನಕ ದೃಶ್ಯ ಇಲ್ಲಿದೆ.. Video

author-image
Ganesh
Updated On
95 ಪ್ರಯಾಣಿಕರಿದ್ದ ವಿಮಾನದಲ್ಲಿ ದಿಢೀರ್ ಬೆಂಕಿ.. ಭಯಾನಕ ದೃಶ್ಯ ಇಲ್ಲಿದೆ.. Video
Advertisment
  • ಸುಖೋಯ್ ಸೂಪರ್‌ಜೆಟ್-100 ವಿಮಾನದಲ್ಲಿ ಬೆಂಕಿ
  • ಲ್ಯಾಂಡಿಂಗ್ ಆಗ್ತಿದ್ದ ವೇಳೆ ಎಂಜಿನ್​​ನಲ್ಲಿ ಕಾಣಿಸಿಕೊಂಡ ಬೆಂಕಿ
  • ವಿಮಾನದಲ್ಲಿದ್ದ ಪ್ರಯಾಣಿಕರ ಕತೆ ಏನಾಯ್ತು..?

95 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಭೀಕರ ಅಪಘಾತಕ್ಕೆ ಸಿಲುಕಿದ ಘಟನೆ ಟರ್ಕಿಯ ಅಂಟಲ್ಯ ವಿಮಾನ (Antalya Airport) ನಿಲ್ದಾಣದಲ್ಲಿ ನಡೆದಿದೆ.

ವಿಮಾನ ಅಪಘಾತದಿಂದ ಪ್ರಯಾಣಿಕರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮವಾರ ರಷ್ಯಾದಿಂದ ಸುಖೋಯ್ ಸೂಪರ್‌ಜೆಟ್-100 ವಿಮಾನ (Sukhoi Superjet 100) ಟೇಕಾಫ್ ಆಗಿತ್ತು. ಇದು ಅಂಟಲ್ಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಇದ್ದಕ್ಕಿದ್ದಂತೆ ವಿಮಾನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ಇಡೀ ವಿಮಾನಕ್ಕೆ ವ್ಯಾಪಿಸಿತು.

ತಕ್ಷಣ ಸ್ಪಂದಿಸಿದ ಅಧಿಕಾರಿಗಳು 89 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ರಾತ್ರಿ 9:34ಕ್ಕೆ ವಿಮಾನ ಲ್ಯಾಂಡ್ ಆದ ಬಳಿಕ ಪೈಲಟ್ ತುರ್ತು ಕರೆ ಮಾಡಿದ್ದಾರೆ. ವಿಮಾನ ನಿಲ್ದಾಣದ ರಕ್ಷಣಾ ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ವಿಮಾನದ ಕೆಲವು ಭಾಗಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ವಿಮಾನದಿಂದ ಪ್ರಯಾಣಿಕರ ರಕ್ಷಣೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment