/newsfirstlive-kannada/media/post_attachments/wp-content/uploads/2025/04/rikki5.jpg)
ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಗುಂಡಿನ ದಾಳಿಯಾಗಿದೆ. ಬಿಡದಿಯ ಮುತ್ತಪ್ಪ ರೈ ನಿವಾಸದ ಕೂಗಳತೆಯಲ್ಲೇ ಅಪರಿಚಿತರು ಫೈರಿಂಗ್ ಮಾಡಿ ಎಸ್ಕೇಪ್ ಆಗಿದ್ದಾರೆ. ರಿಕ್ಕಿ ರೈ ಮೂಗು ಹಾಗೂ ಬಲ ಭುಜಕ್ಕೆ ಗುಂಡು ತಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಭಯಾನಕ ಗುಂಡಿನ ದಾಳಿ
ರಿಕ್ಕಿ ರೈ ಮೇಲೆ ಫೈರಿಂಗ್!
2 ದಿನಗಳ ಹಿಂದಷ್ಟೇ ರಿಕ್ಕಿ ರೈ ರಷ್ಯಾದಿಂದ ಬೆಂಗಳೂರಿಗೆ ಬಂದಿದ್ದರು. ಬಿಡದಿಯ ಮುತ್ತಪ್ಪ ರೈ ನಿವಾಸಕ್ಕೆ ಆಗಮಿಸಿದ್ದ ರಿಕ್ಕಿ, ಒಬ್ಬರೇ ವಾಸವಾಗಿದ್ದರು. ತಡರಾತ್ರಿ ಬಿಡದಿಯಿಂದ ಬೆಂಗಳೂರಿನತ್ತ ಕಾರಿನಲ್ಲಿ ಹೊರಟಾಗ ದಾಳಿಯಾಗಿದೆ. ಮಧ್ಯರಾತ್ರಿ 12.50ರ ಸುಮಾರಿಗೆ ರಿಕ್ಕಿ ಮೇಲೆ ಎರಡು ಸುತ್ತು ಫೈರ್ ಮಾಡಿದ್ದಾರೆ. ಮಾಹಿತಿಗಳ ಪ್ರಕಾರ, ಮನೆ ಮುಖ್ಯ ದ್ವಾರದ ಕೂಗಳತೆ ದೂರದಲ್ಲೇ ಈ ದಾಳಿಯಾಗಿದೆ.
ನೈಟ್ ಟೈಂ.. ರಾಂಗ್ ರೂಟ್!
KA53 MC 7128 ನಂಬರ್ನ ಕಪ್ಪು ಬಣ್ಣದ ಫಾರ್ಚೂನರ್ ಕಾರಿನ ಹಿಂಬದಿ ಸೀಟಿನಲ್ಲಿ ರಿಕ್ಕಿ ರೈ ಕುಳಿತಿದ್ದರು. ಆದರೆ ಡ್ರೈವಿಂಗ್ ಸೀಟ್ ಟಾರ್ಗೆಟ್ ಮಾಡಿ ಫೈರಿಂಗ್ ಮಾಡಲಾಗಿದೆ. ಯಾಕೆಂದರೆ ಪ್ರತಿ ಬಾರಿಯೂ ರಿಕ್ಕಿ ರೈ ತಮ್ಮ ಕಾರನ್ನು ತಾವೇ ಡ್ರೈವ್ ಮಾಡುತ್ತಿದ್ದರು. ಹೀಗಾಗಿ ಡ್ರೈವಿಂಗ್ ಸೀಟ್ ಟಾರ್ಗೆಟ್ ಮಾಡಿ ಶೂಟ್ ಮಾಡಿದ್ದಾರೆ. ಫೈರಿಂಗ್ ಮಾಡ್ತಿದ್ದಂತೆಯೇ ಡ್ರೈವಿಂಗ್ ಸೀಟ್ಗೆ ಗುಂಡು ತಗುಲಿದೆ. ಸೀಟ್ಗೆ ಬಡಿದ ಗುಂಡುಗಳು ಹಿಂಬದಿಯಲ್ಲಿ ಕೂತಿದ್ದ ರಿಕ್ಕಿಗೂ ತಗುಲಿದೆ. ಇನ್ನು ಕೂದಲೆಳೆ ಅಂತರದಲ್ಲಿ ರಿಕ್ಕಿ ಕಾರು ಚಾಲಕ ರಾಜು ಪಾರಾಗಿದ್ದಾರೆ.
ಆಗಂತುಕರ ಪ್ರೀ ಪ್ಲಾನ್ ಅಟ್ಯಾಕ್ ಇದು!
ಬಿಡದಿ ಮನೆಯ ಎದುರಿನ ರಸ್ತೆಯಲ್ಲಿ ಪ್ರಕೃತಿ ಗೇಟ್ ವೇ ಲೇಔಟ್ ಇದೆ. ಇದೇ ಫ್ಯೂಚರ್ ಅರ್ಥ್ ಪ್ರಕೃತಿ ಗೇಟ್ ವೇ ಲೇಔಟ್ ಒಳಗಡೆ ಆಗಂತುಕರು ಇದ್ದರು. ಲೇಔಟ್ಗೆ ಹಾಕಿರುವ ಪೆನ್ಸಿಂಗ್ ಕಾಂಪೌಂಡ್ ಮೇಲೆ ನಿಂತು ಅಟ್ಯಾಕ್ ಮಾಡಿದ್ದಾರೆ. ಫೈರಿಂಗ್ನಲ್ಲಿ 70 MM ಬುಲೆಟ್ ಹೊಂದಿರುವ ಶಾರ್ಟ್ ಗನ್ನನ್ನು ಬಳಸಲಾಗಿದೆ. ರಿಕ್ಕಿ ರೈ ಮೇಲೆ ಆಗಂತುಕರು ಶಾರ್ಟ್ ಗನ್ನಿಂದ 2 ಸುತ್ತಿನ ಫೈರಿಂಗ್ ಮಾಡಿ ಎಸ್ಕೇಪ್ ಆಗಿದ್ದಾರೆ.
ಆಸ್ಪತ್ರೆಯಲ್ಲಿ ರಿಕ್ಕಿ ರೈ..!
ಇನ್ನೂ, ಬಿಡದಿಯ ಖಾಸಗಿ ಆಸ್ಪತ್ರೆಯಲ್ಲಿ ರಿಕ್ಕಿ ರೈಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳದಲ್ಲಿ ಸೋಕೋ, FSL ತಂಡ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಬಿಡದಿಯ ಇನ್ಸ್ಪೆಕ್ಟರ್ ಶಂಕರ್ ನಾಯಕ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ರಿಕ್ಕಿ ಕಾರು ಚಾಲಕ ರಾಜುನಿಂದ ಘಟನೆ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ