newsfirstkannada.com

ಇಂಡಿಯನ್​ ಏರ್​ಫೋರ್ಸ್​ಗೆ ಆನೆ ಬಲ.. ಮೊದಲ C-295 ಏರ್​​ಕ್ರಾಫ್ಟ್​ ಭಾರತಕ್ಕೆ ಹಸ್ತಾಂತರ; ಇದರ ಫೀಚರ್ ಏನೇನು?

Share :

Published September 13, 2023 at 4:14pm

Update September 13, 2023 at 4:04pm

    2021ರ ಒಪ್ಪಂದದಂತೆ ಇಂದು ಮೊದಲ ವಿಮಾನ ಹಸ್ತಾಂತರ

    C-295 ಏರ್​​ಕ್ರಾಫ್ಟ್​ನ ಅದ್ಭುತ ಫೀಚರ್​ ಕೇಳಿದ್ರೆ ಶಾಕ್ ಆಗ್ತೀರಾ

    Avro ವಿಮಾನದ ಸ್ಥಾನ ಈ C-295 ಏರ್​ಕ್ರಾಫ್ಟ್​ ತುಂಬಲಿದೆ

ನವದೆಹಲಿ: 2021ರ ಒಪ್ಪಂದದಂತೆ ಸ್ಪೇನ್ ರಾಷ್ಟ್ರವು ಮೊದಲ C-295 ಟ್ರಾನ್ಸ್​ಪೋರ್ಟ್​​ ವಿಮಾನವನ್ನು ಇವತ್ತು ಭಾರತಕ್ಕೆ ಹಸ್ತಾಂತರ ಮಾಡಿದೆ. ಭಾರತದ ಪರವಾಗಿ ಇಂಡಿಯನ್​ ಏರ್​ಫೋರ್ಸ್​ನ ಮುಖ್ಯಸ್ಥ ವಿ.ಆರ್ ಚೌಧರಿ ಅವರು C-295 ಏರ್​​ಕ್ರಾಫ್ಟ್​ ಅನ್ನು ಸ್ಪೇನ್​ನ ಸೆವಿಲ್ಲೆ ನಗರದಲ್ಲಿ ಸ್ವೀಕಾರ ಮಾಡಿದ್ದು ಇದರಿಂದ ಇಂಡಿಯನ್​ ಏರ್​ಫೋರ್ಸ್​ಗೆ ಆನೆ ಬಲ ಬಂದಂತಾಗಿದೆ.

ಸದ್ಯ ಭಾರತಕ್ಕೆ ಹಸ್ತಾಂತರ ಮಾಡಿರುವ C-295 ಏರ್​​ಕ್ರಾಫ್ಟ್​ ಅನ್ನು ಸ್ಪೇನ್​ನ ಸೆವಿಲ್ಲೆ ನಗರದಲ್ಲಿ ತಯಾರು ಮಾಡಲಾಗಿದೆ. ಇಂತಹ 56 ವಿಮಾನಗಳನ್ನು ಖರೀದಿ ಮಾಡುವುದಾಗಿ 2021ರಲ್ಲಿ ಭಾರತವು ಸ್ಪೇನ್​ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ 16 ವಿಮಾನಗಳನ್ನು ಸ್ಪೇನ್​ನಲ್ಲಿ ತಯಾರಿಸಿ ಕೊಡುವುದಾಗಿ ಹೇಳಲಾಗಿತ್ತು. ಉಳಿದ 40 ವಿಮಾನಗಳನ್ನು ಟಾಟಾ ಮತ್ತು ಏರ್​ಬಸ್ ಸಂಯೋಗದಲ್ಲಿ​ ಗುಜರಾತ್​ನ ವಡೋದರದಲ್ಲಿ ತಯಾರಿಸಲಾಗುವುದು ಎಂದು ತಿಳಿದು ಬಂದಿದೆ. 16 ವಿಮಾನಗಳನ್ನು ಮುಂದಿನ 48 ತಿಂಗಳಲ್ಲಿ ಸ್ಪೇನ್​ ಭಾರತಕ್ಕೆ ಹಸ್ತಾಂತರ ಮಾಡಬಹುದು ಎಂದು ಹೇಳಲಾಗಿದೆ.

C-295 ಏರ್​ಕ್ರಾಫ್ಟ್​ ಫೀಚರ್​ ಏನೇನು..?

  • C-295 ಟ್ರಾನ್ಸ್​ಪೋರ್ಟ್​​ ವಿಮಾನವು 5 ರಿಂದ 10 ಟನ್​ ಭಾರ ಎತ್ತುಕೊಂಡು ಹೋಗಬಲ್ಲದು. ಅಂದರೆ ಒಂದು ಬಾರಿ 70 ಸೈನಿಕರು ಇದರಲ್ಲಿ ಪ್ರಯಾಣಿಸಬಹುದು.
  • ಈ ಹಿಂದೆ ಇಂಡಿಯನ್​ ಏರ್​ಫೋರ್ಸ್​ನಲ್ಲಿದ್ದ Avro ವಿಮಾನದ ಸ್ಥಾನವನ್ನು ಈ C-295 ಏರ್​ಕ್ರಾಫ್ಟ್​ ತುಂಬಲಿದೆ.
  • ಸೇನಾ ಪಡೆಯ ಯಾವುದೇ ವಸ್ತುಗಳನ್ನು ಎತ್ತುಕೊಂಡು ಹೋಗಲು ಹಾಗೂ ಲ್ಯಾಂಡ್​ ಆಗಿದ್ದ ವೇಳೆ ಕೆಳಗಿಳಿಸಲು ಹಿಂಭಾಗದಲ್ಲಿ ಡೋರ್ ಅನ್ನು ಹೊಂದಿದೆ.
  • ಒಪ್ಪಂದದ ಪ್ರಕಾರ 56 ವಿಮಾನಗಳು ಕೂಡ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್​​ ಅನ್ನು ಅಳವಡಿಸಲಾಗುತ್ತದೆ.
  • ಟೇಕ್​ ಆಫ್ ಮತ್ತು ಲ್ಯಾಂಡ್​ ಆಗುವ ವೇಳೆ ರನ್​ವೇಯಲ್ಲಿ ಕಡಿಮೆ ಸ್ಥಳ ಸಾಕು. 670 ಮೀಟರ್​ ರನ್​ ವೇಯಲ್ಲಿ ಟೇಕ್​ ಆಫ್​ ಮತ್ತು 320 ಮೀಟರ್ ಅಂತರದಲ್ಲಿ ಲ್ಯಾಂಡಿಂಗ್ ಆಗುತ್ತದೆ. ಗುಡ್ಡಗಾಡು ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ಸುಲಭವಾಗಿ ತಲುಪಿಸಬಹುದು.
  • C-295 ಟ್ರಾನ್ಸ್​ಪೋರ್ಟ್​​ ವಿಮಾನವು ಸುಮಾರು 480 ಕಿ.ಮೀ ವೇಗದಲ್ಲಿ ಸುಮಾರು 11 ಗಂಟೆಗಳವರೆಗೆ ಹಾರಬಲ್ಲದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಡಿಯನ್​ ಏರ್​ಫೋರ್ಸ್​ಗೆ ಆನೆ ಬಲ.. ಮೊದಲ C-295 ಏರ್​​ಕ್ರಾಫ್ಟ್​ ಭಾರತಕ್ಕೆ ಹಸ್ತಾಂತರ; ಇದರ ಫೀಚರ್ ಏನೇನು?

https://newsfirstlive.com/wp-content/uploads/2023/09/AIR_CRAFT.jpg

Load More