/newsfirstlive-kannada/media/post_attachments/wp-content/uploads/2025/01/NON-VEG-BAN-2.jpg)
ಭಾರತ ಎಂದರೇನೆ ವೈವಿದ್ಯಮಯಕ್ಕೆ ಇನ್ನೊಂದು ಹೆಸರು. ವಿವಿಧತೆಯಲ್ಲಿ ಏಕತೆ ಎಂಬ ಶಬ್ದ ಈ ದೇಶದಿಂದಲೇ ಹುಟ್ಟಿದ್ದು. ಉಡುಗೆ ತೊಡುಗೆ, ಭಾಷೆ, ಒಂದು ರಾಜ್ಯದಿಂದ ಒಂದು ರಾಜ್ಯಕ್ಕೆ ಒಂದು ಜಿಲ್ಲೆಯಿಂದ ಒಂದು ಜಿಲ್ಲೆಗೆ ಬೇರೆ ಬೇರೆಯಾಗಿಯೇ ಇರುತ್ತದೆ. ಇನ್ನು ಆಹಾರ ಪದ್ಧತಿಗಳಲ್ಲಿ ಕೂಡ ವೈವಿದ್ಯಮಯ. ಒಂದೊಂದು ರಾಜ್ಯ ಒಂದೊಂದು ಖಾದ್ಯಕ್ಕೆ, ಒಂದೊಂದು ಊಟಕ್ಕೆ ಫೇಮಸ್ ವೆಜ್, ನಾನ್ ವೆಜ್​ ಎರಡೂ ಬಗೆಯ ಊಟಗಳು ದೇಶದ ಎಲ್ಲಾ ಭಾಗಗಗಳಲ್ಲಿ ದೊರೆಯುತ್ತವೆ. ಆದ್ರೆ ಗುಜರಾತ್​ನ ಈ ಒಂದು ಸಿಟಿಯಲ್ಲಿ ಮಾತ್ರ ನೀವು ಯಾವ ಮೂಲೆಗೆ ಹೋದರು ಕೂಡ ನಿಮಗೆ ನಾನ್​ ವೆಜ್ ಊಟ ಸಿಗುವುದಿಲ್ಲ.
/newsfirstlive-kannada/media/post_attachments/wp-content/uploads/2025/01/NON-VEG-BAN.jpg)
ಗುಜರಾತ್​​ನ ಭಾವನಗರ ಜಿಲ್ಲೆಯ ಪಾಲಿಟಾನಾದಲ್ಲಿ ಮಾಂಸದೂಟ ತಯಾರಿಸುವುದು ಹಾಗೂ ಮಾಂಸ ಮಾರಾಟ ಮಾಡುವುದು ಸಂಪೂರ್ಣವಾಗಿ ನಿಷಿದ್ಧ ಹಾಗೂ ಕಾನೂನು ಬಾಹಿತ. ಅಪ್ಪಿ ತಪ್ಪಿಯೂ ಈ ಊರಲ್ಲಿ ಮಾಂಸದೂಟದ ಘಮ ನಿಮಗೆ ಆಘ್ರಾಣಿಸಲು ಸಿಗುವುದಿಲ್ಲ. ಈ ನಗರದಲ್ಲಿ ಪ್ರಾಣಿಗಳನ್ನು ಕೊಲ್ಲುವುದು ಕ್ರಿಮಿನಲ್ ಅಪರಾಧ ಎಂದು ಘೋಷಿಸಲಾಗಿದೆ. ಮಾಂಸದೂಟ ಮಾಡುವುದು ಹಾಗೂ ಮಾಂಸದೂಟ ಮಾರುವುದು ಕೂಡ ಈ ಪಲಿಟಾನದಲ್ಲಿ ಶಿಕ್ಷಾರ್ಹ ಅಪರಾಧ.
ಪಾಲಿಟಾನಾ ಪ್ರಮುಖವಾಗಿ ಜೈನರ ತೀರ್ಥಯಾತ್ರಾ ಸ್ಥಳ. ಈ ಹಿಂದೆ ಇಲ್ಲಿ ನಡೆಯುತ್ತಿದ್ದ ಮಾಂಸ ಮಾರಾಟದ ವಿರುದ್ಧ ಸುಮಾರು 200 ಜನ ಜೈನರು ಸೇರಿ ಪ್ರತಿಭಟನೆ ಮಾಡಿ ಮುಚ್ಚಿಸಿದ್ದರು. ಅಂದಿನಿಂದ ಇಂದಿನವರೆಗೂ ಇಲ್ಲಿ ನಾನ್​ ವೆಜ್ ಊಟ ಸಿಗುವುದಿಲ್ಲ. ಮಾಂಸ ಮಾರಾಟ ನಡೆಯುವುದಿಲ್ಲ. ಈಗಾಗಲೇ ಹೇಳಿದಂತೆ ಪಾಲಿಟಾನಾ ಜೈನರ ಪ್ರಮುಖ ತೀರ್ಥಯಾತ್ರಾ ಸ್ಥಳಗಳಲ್ಲಿ ಒಂದು. ಅಹಿಂಸೆಯನ್ನು ತೀವ್ರವಾಗಿ ನಂಬುವ ಸಮುದಾಯ ಜೈನ ಸಮುದಾಯ. ಪಾಲಿಟಾನದಲ್ಲಿಯೇ ಶತ್ರುಂಜಯ ಹಿಲ್ ಟೆಂಪಲ್ ಇದೆ. ಈ ದೇವಲಾಯಕ್ಕೆ ಭೇಟಿ ನೀಡಲು ವಿಶ್ವದಾದ್ಯಂತದಿಂದ ಜನರು ಹರಿದು ಬರುತ್ತಾರೆ. ಪ್ರಾಣಿ ಹಿಂಸೆಯನ್ನು ಕಡ್ಡಾಯವಾಗಿ ವಿರೋಧಿಸುವ ಜೈನರ ಸಂಸ್ಕೃತಿಯ ಪರಿಣಾಮದಿಂದಾಗಿ ಇಲ್ಲಿ ಮಾಂಸಾಹಾರ ಹಾಗೂ ಮಾಂಸಮಾರಾಟ ನಡೆಯುವುದಿಲ್ಲ.
/newsfirstlive-kannada/media/post_attachments/wp-content/uploads/2025/01/NON-VEG-BAN-1.jpg)
ಇಲ್ಲಿ ನಾನ್ ವೆಜ್ ಬ್ಯಾನ್ ಆದ ಸಮಯದಿಂದಲೂ ಸಸ್ಯಾಹಾರಿ ಆಹಾರಗಳು ದೊಡ್ಡ ಖ್ಯಾತಿ ಪಡೆದಿವೆ. ಇಲ್ಲಿಗೆ ಬರುವ ತೀರ್ಥಾರ್ಥಿಗಳಿಗೆ ಬಗೆ ಬಗೆಯ ಸಸ್ಯಾಹಾರದ ಖಾದ್ಯಗಳು ದೊರೆಯುತ್ತವೆ. ಈ ನಗರದಲ್ಲಿ ಅತಿಹೆಚ್ಚು ಸಸ್ಯಾಹಾರಿ ರೆಸ್ಟೋರೆಂಟ್ ಹಾಗೂ ಹೋಟೆಲ್​ಗಳಿವೆ.ಇಂದಿಗೂ ಕೂಡ ಈ ನಗರ ತಾನು ಅಂದುಕೊಂಡಿರುವ ನೈತಿಕ ಮೌಲ್ಯಗಳನ್ನ ಹಾಗೂ ಧಾರ್ಮಿಕ ನಂಬಿಕೆಗಳನ್ನ ಗಟ್ಟಿಯಾಗಿ ಅಪ್ಪಿಕೊಂಡೇ ಹೊರಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us