/newsfirstlive-kannada/media/post_attachments/wp-content/uploads/2024/04/LISA-3.jpg)
ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಯತ್ತ ಅಮೆರಿಕಾದ ವೈದ್ಯರು ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ನ್ಯೂಜರ್ಸಿಯ ‘NYU ಲ್ಯಾಂಗೋನ್ ಹೆಲ್ತ್​​’ನಲ್ಲಿ ಮೆಕಾನಿಕಲ್ ಹಾರ್ಟ್​ ಪಂಪ್ (mechanical heart pump) ಮತ್ತು ಹಂದಿಯ ಕಿಡ್ನಿಯನ್ನು ಒಟ್ಟಿಗೆ ಕಸಿ ಮಾಡಿದ್ದಾರೆ.
ಇದನ್ನೂ ಓದಿ:IPL ಇತಿಹಾಸದಲ್ಲಿ ಆರ್​ಸಿಬಿ ಇವತ್ತು ಹೊಸ ಮೈಲಿಗಲ್ಲು; ಸ್ಪೆಷಲ್ ಮಾಹಿತಿ ಹಂಚಿಕೊಂಡ ಫ್ರಾಂಚೈಸಿ..!
/newsfirstlive-kannada/media/post_attachments/wp-content/uploads/2024/04/LISA-1.jpg)
ಸಂಯೋಜಿತ (combined) ಹಾರ್ಟ್ ಪಂಪ್ ಮತ್ತು ಹಂದಿ ಮೂತ್ರಪಿಂಡವನ್ನು ಮನುಷ್ಯರಿಗೆ ಶಸ್ತ್ರ ಚಿಕಿತ್ಸೆ ಮಾಡಿರೋದು ಇದೇ ಮೊದಲು. ನ್ಯೂಜೆರ್ಸಿಯ 54 ವರ್ಷದ ಲಿಸಾ ಪಿಸಾನೋ ( Lisa Pisano) ಹೃದಯದ ಸಮಸ್ಯೆ ಮತ್ತು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ನಿಯಮಿತ ಡಯಾಲಿಸಿಸ್ ಅಗತ್ಯ ಇತ್ತು. ಹೀಗಾಗಿ ಅವರು ತುಂಬಾ ದಿನಗಳಿಂದ ಹೃದಯದ ಪಂಪ್ ಮತ್ತು ಮೂತ್ರಪಿಂಡದ ಕಸಿ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಅಮೆರಿಕದಲ್ಲಿ ಅಂಗಾಂಗ ದಾನಿಗಳ ಕೊರತೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ.
ಮಾಹಿತಿ ಪ್ರಕಾರ ಲಿಸಾ ದೇಹಕ್ಕೆ ಏಪ್ರಿಲ್ 4 ರಂದು ಹೃದಯ ಪಂಪ್ ಅಳವಡಿಸಲಾಯಿತು. ಏಪ್ರಿಲ್ 12 ರಂದು ಹಂದಿಯ ಥೈಮಸ್ ಗ್ರಂಥಿಯೊಂದಿಗೆ ಜೀನ್ ಎಡಿಟ್ ಮಾಡಿದ ಮೂತ್ರಪಿಂಡವನ್ನು ಅಳವಡಿಸಲಾಯಿತು.
/newsfirstlive-kannada/media/post_attachments/wp-content/uploads/2024/04/LISA-2.jpg)
ನಾನು ಚಿಕಿತ್ಸೆಯಿಂದ ದಣಿದಿದ್ದೇನೆ. ಇಂತಹ ಒಂದು ಅವಕಾಶಕ್ಕಾಗಿ ನಾನು ಕಾಯುತ್ತಿದ್ದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಮಕ್ಕಳೊಂದಿಗೆ ಕಳೆಯಲು, ಆಟವಾಡಲು ಮತ್ತೆ ಅವಕಾಶ ಸಿಕ್ಕಿದೆ -ಲಿಸಾ ಪಿಸಾನೋ, ಹಂದಿಯ ಮೂತ್ರಪಿಂಡ ಕಸಿ ಮಾಡಿಸಿಕೊಂಡವರು
ಅಮೆರಿಕದಲ್ಲಿ ಅಂಗಾಂಗಳಿಗೆ ಬೇಡಿಕೆ
ಅಮೆರಿಕದಲ್ಲಿ ಅಂಗಾಂಗಳನ್ನು ಸ್ವೀಕರಿಸುವವರ ಸಂಖ್ಯೆಯು ದಾನಿಗಳಿಗಿಂತ ಹೆಚ್ಚಿದೆ. ವರದಿಗಳ ಪ್ರಕಾರ ಪ್ರತಿದಿನ 17 ಜನರು ಅಂಗಕ್ಕಾಗಿ ಕಾದು ಸಾಯುತ್ತಿದ್ದಾರೆ. ಅಲ್ಲಿ ಕಿಡ್ನಿಗಳ ಬೇಡಿಕೆ ಅತ್ಯಧಿಕವಾಗಿದ್ದು, ಪೂರೈಕೆ ಕಡಿಮೆ ಇದೆ. ಆರ್ಗನ್ ಪರ್ಸೇಸ್​ ಮತ್ತು ಟ್ರಾನ್ಸ್​ಪ್ಲಾಂಟ್ ನೆಟ್​​ವರ್ಕ್​ ಪ್ರಕಾರ, 2023ರಲ್ಲಿ ಸುಮಾರು 27 ಸಾವಿರ ಮೂತ್ರ ಪಿಂಡಗಳ ಕಸಿ ಮಾಡಲಾಗಿದೆ. ಇಲ್ಲಿಯವರೆಗೆ 89 ಸಾವಿರ ಮಂದಿ ಕಿಡ್ನಿಗಾಗಿ ಕಾಯುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/04/LISA.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us