ಪುರಿ ಜಗನ್ನಾಥ ರತ್ನ ಭಂಡಾರದಲ್ಲಿ ಸಿಕ್ಕಿದ್ದೇನು? ಬಾಗಿಲು ತೆರೆದಾಗ ಏನಾಯ್ತು? ಅಸಲಿ ವಿಷ್ಯ ಇಲ್ಲಿದೆ!

author-image
admin
Updated On
ಪುರಿ ಜಗನ್ನಾಥ ರತ್ನ ಭಂಡಾರದಲ್ಲಿ ಸಿಕ್ಕಿದ್ದೇನು? ಬಾಗಿಲು ತೆರೆದಾಗ ಏನಾಯ್ತು? ಅಸಲಿ ವಿಷ್ಯ ಇಲ್ಲಿದೆ!
Advertisment
  • ಶುಭ ಮುಹೂರ್ತದಲ್ಲಿ ಭಂಡಾರದ ಬಾಗಿಲು ತೆರೆದಾಗ ವಿಸ್ಮಯ
  • ಕೋಣೆಯಲ್ಲಿದ್ದ ದೇವರ ಆಭರಣಗಳು ಸ್ಟ್ರಾಂಗ್ ರೂಮ್​ಗೆ ಶಿಫ್ಟ್
  • ಸತತ 5 ಗಂಟೆಗಳ ಕಾಲ ಕ್ಯಾಮೆರಾದಲ್ಲಿ ಕೋಣೆಯ ಚಿತ್ರೀಕರಣ

ವಿಶ್ವವಿಖ್ಯಾತ ಪುರಿ ಜಗನ್ನಾಥ ದೇವಾಲಯದಲ್ಲಿರುವ ರಹಸ್ಯ ಕೋಣೆಗಳನ್ನು ಕೊನೆಗೂ ತೆರೆಯಲಾಗಿದೆ. 46 ವರ್ಷದ ಬಳಿಕ ಕಗ್ಗತ್ತಲಿನ ರಹಸ್ಯ, ನಿಗೂಢ ಶಬ್ಧ, ಚಿನ್ನ, ವಜ್ರ, ವೈಢೂರ್ಯದ ಸೀಕ್ರೆಟ್ ತೆರೆದುಕೊಂಡಿದೆ. ಇವತ್ತು ಶುಭ ಶುಭಮುಹೂರ್ತದಲ್ಲಿ ಭಂಡಾರದ ಬಾಗಿಲು ತೆರೆದಾಗ ವಿಸ್ಮಯ ಲೋಕವೇ ಅನಾವರಣವಾಗಿದೆ.

publive-image

ಬಾಗಿಲು ತೆರೆಯುತ್ತಿದ್ದಂತೆ ಹೊರಗಿನ ಕೋಣೆಯಲ್ಲಿದ್ದ ದೇವರ ಆಭರಣಗಳನ್ನು ಸ್ಟ್ರಾಂಗ್ ರೂಮ್​ಗೆ ಶಿಫ್ಟ್ ಮಾಡಲಾಗಿದೆ. ಒಳಗಿರೋ ಕೋಣೆಯಲ್ಲಿ ಅಲ್ಮೆರಾ & ದೊಡ್ಡ ಪೆಟ್ಟಿಗೆಗಳಿವೆ. ಅವುಗಳ ಶಿಫ್ಟಿಂಗ್‌ಗೆ ಇವತ್ತು ಸಮಯ ಸಾಕಾಗಿಲ್ಲ. ದೊಡ್ಡ ಪೆಟ್ಟಿಗೆಗಳ ಶಿಫ್ಟಿಂಗ್​ಗೆ ಇನ್ನೊಂದು ದಿನಾಂಕ ನಿಗದಿ ಪಡಿಸುತ್ತೇವೆ ಎಂದು ದೇಗುಲದ ಆಡಳಿತ ಮಂಡಳಿ ಮುಖ್ಯಸ್ಥ ಅರಬಿಂದ ಪದಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಂಗಾರ, ಮುತ್ತು, ರತ್ನ, ಹವಳ.. 3 ಕೋಣೆ, 6 ಪೆಟ್ಟಿಗೆಗಳಲ್ಲಿ ರತ್ನ ಭಂಡಾರದ ಶೋಧ ಕಾರ್ಯ ಹೇಗಿದೆ? 

ಇಂದಿನ ರತ್ನ ಭಂಡಾರದ ಶೋಧ ಕಾರ್ಯ ಮುಕ್ತಾಯವಾಗಿದ್ದು, ದೇವಾಲಯದ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಬಿಸ್ವನಾಥ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇಂದು ನಿರೀಕ್ಷೆಯಂತೆ ಭಂಡಾರದ ಬಾಗಿಲನ್ನು ನಾವು ತೆಗೆದಿದ್ದೇವೆ. ಬಾಗಿಲಿಗೆ ಒಟ್ಟು ಮೂರು ಬೀಗಗಳನ್ನ ಹಾಕಲಾಗಿತ್ತು.

publive-image

ಅದರಲ್ಲಿ ಒಂದು ಸೀಲ್ ಆಗಿರೋ ಬೀಗ ಇದ್ರೆ ಇನ್ನೆರಡು ಸಾಮಾನ್ಯವಾಗಿ ಬೀಗ ಹಾಕಲಾಗಿತ್ತು. ಅವುಗಳನ್ನು ಬೀಗದಿಂದ ತೆಗೆಯಲು ಸಾದ್ಯವಾಗದ ಹಿನ್ನೆಲೆ ಬೀಗಗಳನ್ನು ಮುರಿದು ರತ್ನ ಭಂಡಾರದ ಬಾಗಿಲನ್ನ ತೆಗೆಯಲಾಗಿದೆ.

publive-image

ಇಂದು ಮಧ್ಯಾಹ್ನ 12:00 ಗಂಟೆಯ ದೇವಸ್ಥಾನಕ್ಕೆ ಪ್ರವೇಶ ಮಾಡಿದೆವು. ಮಧ್ಯಾಹ್ನ 1.28ಕ್ಕೆ ರತ್ನ ಭಂಡಾರದ ಬಾಗಿಲನ್ನು ತೆರೆದೆವು. ಕೊಠಡಿಯಲ್ಲಿ ಹೋದಾಗ ದೇವರಿಗೆ ಸಂಬಂಧಿಸಿದ ವಸ್ತುಗಳು ಇದ್ದವು. ದೇವರಿಗೆ ಸಂಬಂಧಿಸಿದ ಪೆಟ್ಟಿಗೆ, ಅಲಮಾರಾ (ಕಬೋರ್ಡ್) ಎಲ್ಲಾ ಇದ್ದವು. ಏನೆಲ್ಲ ಇದ್ದವು ಎಂಬ ಬಗ್ಗೆ ನಾವು ಸಾರ್ವಜನಿಕವಾಗಿ ಹೇಳೋದಿಲ್ಲ. ವರದಿಯಲ್ಲಿ ಈ ಎಲ್ಲದರ ಬಗ್ಗೆ ಮಾಹಿತಿ ನೀಡುತ್ತೇವೆ.

ಇದನ್ನೂ ಓದಿ:REAKING: ಪುರಿ ಜಗನ್ನಾಥನ ರತ್ನ ಭಂಡಾರದ ಬಾಗಿಲು ತೆಗೆಯುತ್ತಿದ್ದಂತೆ ಮೂರ್ಛೆ ಹೋದ ಎಸ್‌ಪಿ


">July 14, 2024

ನಾವು 5 ಗಂಟೆಗಳ ಕಾಲ ಅಲ್ಲಿರುವ ವಸ್ತುಗಳನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದೇವೆ. ಇಂದು ಎಲ್ಲಾ ವಸ್ತುಗಳ‌ ಶಿಫ್ಟ್ ಮಾಡಲು ಸಮಯವಾಗಿಲ್ಲ. ಅದಕ್ಕಾಗಿ ಮತ್ತೊಂದು ದಿನ ಸಮಯ ನಿಗದಿ ಮಾಡುತ್ತೇವೆ. ಎಲ್ಲಾ ಆಭರಣಗಳನ್ನು ಬೆರೆಡೆಗೆ ಶಿಫ್ಟ್ ಮಾಡುತ್ತೇವೆ. ಅಲ್ಲಿಯವರೆಗೆ ಹೊಸದಾಗಿ ಬೀಗವನ್ನು ಹಾಕಿ ಸೀಲ್ ಮಾಡಿದ್ದೇವೆ ಎಂದು ನಿವೃತ್ತ ನ್ಯಾಯಮೂರ್ತಿ ಬಿಸ್ವನಾಥ್ ಅವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment