BBK11: ಯಾರು ಯಾರನ್ನ ಮನೆಗೆ ಕಳಿಸುತ್ತಾರೆ.. ಬಿಗ್​ಬಾಸ್​ ಮನೆಯಲ್ಲಿ ಮಾರಿಹಬ್ಬ ಶುರು!

author-image
Veena Gangani
Updated On
BBK11: ಯಾರು ಯಾರನ್ನ ಮನೆಗೆ ಕಳಿಸುತ್ತಾರೆ.. ಬಿಗ್​ಬಾಸ್​ ಮನೆಯಲ್ಲಿ ಮಾರಿಹಬ್ಬ ಶುರು!
Advertisment
  • ಟಿಕೆಟ್‌ ಟು ಫಿನಾಲೆ ವಾರದ ಮೊದಲ ದಿನವೇ ಜಿದ್ದಾಜಿದ್ದಿ ಶುರು
  • ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್​ ಪಡೆದುಕೊಳ್ತಿದೆ ಬಿಗ್​ಬಾದ್
  • ಬಿಗ್​ಬಾಸ್​ 11 ಗ್ರ್ಯಾಂಡ್ ಫಿನಾಲೆಗೆ ಇನ್ನೂ 3 ವಾರಗಳಷ್ಟೇ ಬಾಕಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11, 100ನೇ ದಿನಕ್ಕೆ ಕಾಲಿಟ್ಟಿದೆ. ಬಿಗ್​ಬಾಸ್​ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಇನ್ನೂ 3 ವಾರಗಳು ಬಾಕಿ ಉಳಿದಿವೆ. ಸ್ಪರ್ಧಿಗಳಿಗೆ ಈ ಮೂರು ವಾರ ತುಂಬಾನೆ ಮುಖ್ಯವಾಗಿದೆ.

ಇದನ್ನೂ ಓದಿ:ನಮ್ಮ ಮೆಟ್ರೋ ಗುಡ್ ನ್ಯೂಸ್‌.. R.V ರಸ್ತೆಯಿಂದ ಬೊಮ್ಮಸಂದ್ರ ಯೆಲ್ಲೋ ಲೇನ್‌ಗೆ ಬಂತು ಮೊದಲ ರೈಲು!

publive-image

ಇಷ್ಟು ವಾರದ ಆಟ ಒಂದು ಲೆಕ್ಕಾವಾದರೆ, ಈಗಿನಿಂದ ಒಂದು ಲೆಕ್ಕಾ ಶುರುವಾಗಿದೆ. ಈ ವಾರ ಮನೆಯಲ್ಲಿರೋ ಸ್ಪರ್ಧಿಗಳಿಗೆ ಆಟ ಸಖತ್‌ ಟಫ್‌ ಆಗಿರಲಿದೆ. ಅಲ್ಲದೇ 9 ಸ್ಪರ್ಧಿಗಳಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್‌ ಟು ಫಿನಾಲೆ ಸಿಗಲಿದೆ. ಅಂದರೆ ಒಬ್ಬರಿಗೆ ಮಾತ್ರ ಫಿನಾಲೆಗೆ ನೇರವಾಗಿ ಹೋಗಬಹುದಾಗಿದೆ. ಹೀಗಾಗಿ ಸ್ಪರ್ಧಿಗಳ ಮಧ್ಯೆ ಬಿಗ್​ ಫೈಟ್ ನಡೆದಿದೆ.

ಇದೀಗ ದೊಡ್ಮನೆಯಲ್ಲಿ ಶುರುವಾಗ್ತಿದೆ ಮಾರಿಹಬ್ಬ. ರಿಲೀಸ್ ಆದ ಹೊರ ಪ್ರೋಮೋದಲ್ಲಿ ಬಿಗ್​ಬಾಸ್​ ಟಿಕೆಟ್‌ ಟು ಫಿನಾಲೆ ಇಂದಿನಿಂದ ಒಂದು ಹಬ್ಬ ಆರಂಭವಾಗುತ್ತಿದೆ. ಅದುವೆ ಮಾರಿಹಬ್ಬ. ಈ ಮನೆಯಲ್ಲಿ ಪ್ರತಿ ಕ್ಷಣ ಒಂದೊಂದು ಯುದ್ಧ ನಡೆಯುತ್ತೆ. ರಣರಂಗ ಆಗಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ವಾರದ ಮೊದಲ ದಿನವೇ ಬಿಗ್​ಬಾಸ್​ ಮನೆ ನಿಜಕ್ಕೂ ರಣರಂಗವಾಗಿ ಬದಲಾಗಿದೆ. ಇಷ್ಟು ದಿನ ಗೆಳಯರಾಗಿದ್ದ ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಪರ್ಧಿಗಳು ಏಕವಚನದಲ್ಲಿ ಮಾತಾಡೋಕೆ ಶುರು ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment