ನ್ಯೂಜಿಲೆಂಡ್​ ವಿರುದ್ಧದ ಮೊದಲ ದಿನದ ಪಂದ್ಯ ದಿಢೀರ್​ ರದ್ದು; ಟೀಮ್​ ಇಂಡಿಯಾ ಕನಸು ಭಗ್ನ!

author-image
Ganesh Nachikethu
Updated On
ನ್ಯೂಜಿಲೆಂಡ್​​ಗೆ ಟೀಮ್​ ಇಂಡಿಯಾದ ಈ ಜೋಡಿಯನ್ನ ಕಂಡ್ರೆ ಭಯ ಎಂದ ರಚಿನ್​​.. ಈ ಬಗ್ಗೆ ಏನಂದ್ರು?
Advertisment
  • ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ತಂಡದ ನಡುವಿನ ಮೊದಲ ಟೆಸ್ಟ್​ ಪಂದ್ಯ
  • ಭಾರೀ ಮಳೆಯಿಂದಾಗಿ ಭಾರತ, ನ್ಯೂಜಿಲೆಂಡ್​ ನಡುವಿನ ಮೊದಲ ಟೆಸ್ಟ್​ ರದ್ದು
  • ಟಾಸ್ ಹಾಕೋ ಮುನ್ನವೇ ಮೊದಲ ಟೆಸ್ಟ್​ ಪಂದ್ಯ ರದ್ದಾಗಿದ್ದು ಭಾರೀ ನಿರಾಸೆ!

ಬೆಂಗಳೂರು: ಇಂದು ಶುರುವಾಗಬೇಕಿದ್ದ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ತಂಡದ ನಡುವಿನ ಮೊದಲ ಟೆಸ್ಟ್​ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಹಾಗಾಗಿ ಟಾಸ್​​ಗೆ ಮುನ್ನವೇ ಮೊದಲ ಟೆಸ್ಟ್​ ಪಂದ್ಯ ರದ್ದು ಮಾಡಲಾಗಿದೆ.

ಅಕ್ಟೋಬರ್​ 16ನೇ ತಾರೀಕು ಎಂದರೆ ಇಂದಿನಿಂದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಮ್​​ನಲ್ಲಿ ಟೀಮ್​ ಇಂಡಿಯಾ, ನ್ಯೂಜಿಲೆಂಡ್​​ ಮಧ್ಯೆ ಮೊದಲ ಟೆಸ್ಟ್‌ ಪಂದ್ಯ ನಡೆಯಬೇಕಿತ್ತು. ಆದರೆ, ಮೊದಲ ದಿನವೇ ಪಂದ್ಯಕ್ಕೆ ಮಳೆ ಕಾಟ ಕೊಟ್ಟಿದೆ. ಟೀಮ್​ ಇಂಡಿಯಾದ ಆಟಗಾರರು ಮೈದಾನಕ್ಕಿಳಿಯೋ ಮುನ್ನವೇ ಪಂದ್ಯ ರದ್ದಾಗಿದ್ದು, ಹೋಟೆಲ್​​ ಕಡೆ ಮುಖ ಮಾಡಿದ್ದಾರೆ.

ವರ್ಷದ ಕೊನೆಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿ ನಡೆಯಲಿದೆ. ಇದರ ಭಾಗವಾಗಿ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ನಡುವಿನ ಟೆಸ್ಟ್​ ಸೀರೀಸ್ ನಡೆಯುತ್ತಿದ್ದು, ಎಲ್ಲರ ಕಣ್ಣು ಈ ಸರಣಿ ಮೇಲೆ ನೆಟ್ಟಿದೆ.

ಟೀಮ್​ ಇಂಡಿಯಾ ಕನಸು ಭಗ್ನ

ಹೇಗಾದ್ರೂ ಮಾಡಿ ಮೊದಲ ಟೆಸ್ಟ್​ ಪಂದ್ಯ ಗೆಲ್ಲಲೇಬೇಕು ಎಂದಿದ್ದ ಟೀಮ್​ ಇಂಡಿಯಾಗೆ ಮಳೆ ಆಘಾತ ನೀಡಿದೆ. ಮೊದಲ ದಿನದ ಪಂದ್ಯ ನಡೆಯದೇ ಇದ್ದಿದ್ದರಿಂದ ಕ್ಲೀನ್​ ಸ್ವೀಪ್​ ಮಾಡಬೇಕು ಅನ್ನೋ ಟೀಮ್​ ಇಂಡಿಯಾ ಕನಸು ಭಗ್ನಗೊಂಡಿದೆ. ಇನ್ನು ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯೋ ಸಾಧ್ಯತೆ ಇದೆ. ಪಂದ್ಯದ 2ನೇ ದಿನ ಎಂದರೆ ಶುಕ್ರವಾರ ಕೊಂಚ ರಿಲೀಫ್​​ ಸಿಗಬಹುದು.

ಇದನ್ನೂ ಓದಿ:ಮುಂಬೈ ಇಂಡಿಯನ್ಸ್​ನಲ್ಲಿ ಮೇಜರ್​ ಸರ್ಜರಿ; ರೋಹಿತ್​​ ಆಪ್ತನಿಗೆ ಮಹತ್ವದ ಜವಾಬ್ದಾರಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment