newsfirstkannada.com

ಯುವ ಉದ್ದಿಮೆದಾರರಿಗೆ ಗುಡ್‌ನ್ಯೂಸ್‌.. ಕನ್ನಡದ ಪ್ರಪ್ರಥಮ ಹಣಕಾಸು ವಾರಪತ್ರಿಕೆ ‘ವಿಕ ಮನಿ’ ಬಿಡುಗಡೆ

Share :

Published May 3, 2024 at 4:07pm

Update May 3, 2024 at 8:37pm

  ವಾಣಿಜ್ಯ, ಮಾರುಕಟ್ಟೆ ಸಂಬಂಧ ಮಾಹಿತಿಯ ಹಸಿವು ನೀಗಿಸುವ ‘ವಿಕ ಮನಿ’

  ಕನ್ನಡ ಪತ್ರಿಕೋದ್ಯಮದಲ್ಲಿ ಈವರೆಗೆ ಪ್ರತ್ಯೇಕ ವಾಣಿಜ್ಯ ಪತ್ರಿಕೆ ಇರಲಿಲ್ಲ

  ವಿಕ ಮನಿ ವಾಣಿಜ್ಯಾಸಕ್ತರ ಅಗತ್ಯಗಳನ್ನು ಪೂರೈಸುವ ಮಾಹಿತಿಗೆ ಸಹಾಯ

ಬೆಂಗಳೂರು: ಹಣಕಾಸು, ಆರ್ಥಿಕ ಬೆಳವಣಿಗೆಗಳ ಬಗ್ಗೆ ಜನರಿಗೆ ಹೆಚ್ಚಿನ ವಿಚಾರಗಳನ್ನು ತಿಳಿಸಬೇಕಿದೆ. ಅದಕ್ಕೆ ‘ವಿಕ ಮನಿ’ಯಂತಹ ಪತ್ರಿಕೆಗಳ ಅಗತ್ಯ ಬಹಳಷ್ಟಿದೆ. ವಿದ್ಯಾರ್ಥಿಗಳನ್ನು ವಿವಿಧ ಬಗೆಯ ಉದ್ಯೋಗಗಳಿಗೆ ಸಜ್ಜುಗೊಳಿಸುವಲ್ಲಿ ಮತ್ತು ಜನರಿಗೆ ಅಗತ್ಯ ಆರ್ಥಿಕ ಮಾಹಿತಿ ಒದಗಿಸಿ ಅವರನ್ನು ಸಬಲರನ್ನಾಗಿ ಮಾಡುವಲ್ಲಿ ವಿಕ ಮನಿ ನಿರ್ಣಾಯಕ ಪಾತ್ರ ವಹಿಸಲಿ ಎಂದು ಹೆಸರಾಂತ ಉದ್ಯಮಿ ಹಾಗೂ ಆರಿನ್ ಕ್ಯಾಪಿಟಲ್ ಅಧ್ಯಕ್ಷ ಮೋಹನ್ ದಾಸ್ ಪೈ ಹೇಳಿದರು. ವಿಕ ಮನಿ ಹಣಕಾಸು ವಾರ ಪತ್ರಿಕೆ ಪ್ರತಿ ಭಾನುವಾರ ಮಾರುಕಟ್ಟೆಗೆ ಬರಲಿದೆ.

‘ವಿಜಯ ಕರ್ನಾಟಕ’ ಸಮೂಹದ ಸೋದರ ಪತ್ರಿಕೆ ‘ವಿಕ ಮನಿ’ಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ನಮ್ಮ ಜನತೆಗೆ ಆರ್ಥಿಕ ವಿಚಾರಗಳ ಬಗ್ಗೆ ಅಷ್ಟೊಂದು ಅರಿವಿಲ್ಲ. ಅವರು ಆರ್ಥಿಕ ಸ್ಥಿತಿಗತಿಯ ಬಗ್ಗೆ ಚಿಂತನೆ ಮಾಡುವಂತೆ ಮಾಡಬೇಕಿದೆ. ಜಿಡಿಪಿ, ಹಣದುಬ್ಬರ ಮತ್ತಿತರ ವಿಚಾರಗಳು ಕನ್ನಡ ಭಾಷೆಯಲ್ಲೇ ಅವರಿಗೆ ತಿಳಿಯಬೇಕು. ಈ ನಿಟ್ಟಿನಲ್ಲಿ ವಿಕ ಮನಿ ಈ ಕೊರತೆಯನ್ನು ನೀಗಿಸಲಿದೆ. ಸರಕಾರಗಳು ಮೂಲಸೌಕರ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಉನ್ನತ ಶಿಕ್ಷಣದಲ್ಲಿ ಕರ್ನಾಟಕದ ಜಿಇಆರ್ (ಗ್ರಾಸ್ ಎನ್ರೋಲ್ಮೆಂಟ್ ರೇಶಿಯೋ) ಶೇ.36ರಷ್ಟಿದೆ. ಆದರೆ, ತಮಿಳುನಾಡು ಶೇ.49, ಕೇರಳದಲ್ಲಿ ಶೇ.38ರಷ್ಟಿದೆ. ಹಾಗಾಗಿ, ನಾವು ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಜಿಇಆರ್ ಹೆಚ್ಚಳ ಮಾಡಬೇಕಿದೆ,’’ ಎಂದು ಪ್ರತಿಪಾದಿಸಿದರು.

ಬೆಂಗಳೂರಿನಲ್ಲಿ ತಲಾದಾಯ 15 ಸಾವಿರ ಡಾಲರ್ ಇದೆ. ಆದರೆ ಮೂಲಸೌಕರ್ಯಕ್ಕೆ ಹೂಡಿಕೆ ಕಡಿಮೆ ಇದೆ. ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕಿದೆ. ಸಂಚಾರ ದಟ್ಟಣೆ ನಿವಾರಣೆ ಮಾಡಬೇಕಿದೆ. ಕರ್ನಾಟಕದ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಸಾಕಾರಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಆರ್ಥಿಕ ಸ್ಥಿತಿ ದೇಶದ ಹಾಗೂ ವ್ಯಕ್ತಿಯ ಉದ್ಧಾರವನ್ನು ಸೂಚಿಸುತ್ತದೆ. 2024-25ರ ವೇಳೆಗೆ ರಾಜ್ಯದ ಜಿಡಿಪಿ 28 ಲಕ್ಷ 16 ಸಾವಿರ ಕೋಟಿ ನಿರೀಕ್ಷಿಸಲಾಗಿದೆ. ತಲಾ ಆದಾಯ 4 ಲಕ್ಷವಿದೆ. ಜಿಡಿಪಿಯಲ್ಲಿ ಶೇ.66ರಷ್ಟು ಸೇವಾ ವಲಯದ ಕೊಡುಗೆ ಇದೆ. ಇದು ಕರ್ನಾಟಕ ಇತರೆ ರಾಜ್ಯಗಳಿಗಿಂತ ಮುಂಚೂಣಿಯಲ್ಲಿರುವುದನ್ನು ಸೂಚಿಸುತ್ತದೆ. ಸದ್ಯ ಭಾರತದ ಜನಸಂಖ್ಯೆಯಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದೆ. 10 ಲಕ್ಷ ಮಕ್ಕಳು ಜನಿಸಿದರೆ 5 ಲಕ್ಷ ವಯಸ್ಕರು ಸಾವನ್ನಪ್ಪುತ್ತಿದ್ದಾರೆ. ಸದ್ಯ ಕರ್ನಾಟಕದಲ್ಲಿ 60 ವರ್ಷ ಮೀರಿದವರ ಸಂಖ್ಯೆ ಶೇ.11ರಷ್ಟಿದ್ದು,20230ರ ವೇಳೆಗೆ ಅದು ಶೇ.13 ರಿಂದ 14 ತಲುಪುತ್ತದೆ. ಹಾಗಾಗಿ, ಹೊಸ ಪೀಳಿಗೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಜತೆಗೆ ಉದ್ಯೋಗಾವಕಾಶಗಳನ್ನು ಸೃಜಿಸಲು ಆದ್ಯತೆ ನೀಡಬೇಕಿದೆ ಎಂದು ಮೋಹನ್ ದಾಸ್ ಪೈ ಹೇಳಿದರು.

ಸಮಾರಂಭದಲ್ಲಿ ಕರ್ನಾಟಕ ಸರಕಾರದ ಸ್ಟಾರ್ಟಪ್ ವಿಷನ್ ಗ್ರೂಪ್ ಮಾಜಿ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಯುವ ಉದ್ಯಮಿ ಅನಿಲ್ ಶೆಟ್ಟಿ, ಬೆಟರ್ಪ್ಲೇಸ್ ನವೋದ್ಯಮದ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಅಗರವಾಲ್, ವಿಜಯ ಕರ್ನಾಟಕ ಮತ್ತು ಬೆಂಗಳೂರು ಮಿರರ್ ಸಿಇಒ ದೀಪಕ್ ಸಲುಜ, ವಿಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಉಪಸ್ಥಿತರಿದ್ದರು.

ವಿಕ ಮನಿ ನಿರ್ಣಾಯಕ ಪಾತ್ರ ವಹಿಸಲಿ
ಬೆಂಗಳೂರು ಮೂರು ದಶಕಗಳಿಂದ ಉದ್ದಿಮೆದಾರರನ್ನು ಸೆಳೆಯುತ್ತಿದೆ. ಉದ್ಯಮಶೀಲತೆಯಲ್ಲೂ ಕನ್ನಡಿಗರು ಮುಂಚೂಣಿಗೆ ಬರಬೇಕು. ದೇಶದ ಯಾವುದೇ ಭಾಗದಲ್ಲಿ ಇಲ್ಲದ ಒಳ್ಳೆಯ ಎಂಜಿನಿಯರಿಂಗ್ ಕಾಲೇಜುಗಳು ರಾಜ್ಯದಲ್ಲಿವೆ. ಈ ಕಾಲೇಜುಗಳು ಉದ್ಯೋಗ ಆಕಾಂಕ್ಷಿಗಳ ಬದಲು ಉದ್ಯೋಗ ಸೃಷ್ಟಿಕರ್ತರನ್ನು ಹೊರಗೆ ಕಳುಹಿಸಬೇಕು. ಅತಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವನ್ನು ಅರಿಯಬೇಕಾದರೆ ಉದ್ಯಮವು ಶಿಕ್ಷಣದ ಅಂಗಳಕ್ಕೆ ಬರಬೇಕು. ಕರ್ನಾಟಕವು ಏಷ್ಯಾ ಖಂಡದ ಸ್ಟಾರ್ಟಪ್ಗಳ ರಾಜಧಾನಿಯಾಗಬೇಕು. ಈ ಕನಸು ಸಾಕಾರಗೊಳಿಸುವಲ್ಲಿ ವಿಕ ಮನಿ ನಿರ್ಣಾಯಕ ಪಾತ್ರ ವಹಿಸಬೇಕು ಎಂದು ಕರ್ನಾಟಕ ಸ್ಟಾರ್ಟಪ್ ವಿಷನ್ ಗ್ರೂಪ್ನ ಮಾಜಿ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಆಶಿಸಿದರು.

ಸಿಲಿಕಾನ್ ಸಿಟಿ ಬೆಂಗಳೂರು ನವೋದ್ಯಮ ಹಾಗೂ ಆವಿಷ್ಕಾರಗಳ ನಗರವಾಗಿದೆ. ಸ್ವಾತಂತ್ರ್ಯಾನಂತರ ಬೆಂಗಳೂರು ತಂತ್ರಜ್ಞಾನದ ತಾಣವಾಗಿ ಬೆಳೆದಿದೆ. ರಾಜ್ಯದಲ್ಲಿ ನವೋದ್ಯಮಗಳು ಈಗ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಮೈಸೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಬೇರೆಬೇರೆ ಕ್ಲಸ್ಟರ್ಗಳಲ್ಲೂ 500ರಿಂದ 1 ಸಾವಿರ ನವೋದ್ಯಮಗಳು ಆರಂಭವಾಗಿವೆ. ಆದರೆ, ಈ ಸ್ಥಳೀಯ ನವೋದ್ಯಮಗಳ ವಿಚಾರಗಳು ಆಂಗ್ಲ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿಲ್ಲ. ಈಗ ವಿಕ ಮನಿ ಕನ್ನಡದಲ್ಲೇ ಪ್ರಕಟವಾಗುವುದರಿಂದ ಸ್ಥಳೀಯ ಉದ್ಯಮಗಳಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

ಆರ್ಥಿಕ ಪತ್ರಿಕೋದ್ಯಮಕ್ಕೆ ಪ್ರವೇಶ
ರಾಜ್ಯದಲ್ಲಿ ಸದೃಢ ಮಾಧ್ಯಮ ಸಂಸ್ಥೆಯಾಗಿ ವಿಕ ಬೆಳೆದು ನಿಂತಿದೆ. ಪತ್ರಿಕೆಯು ರಾಜ್ಯದಲ್ಲಿ 30 ಕಚೇರಿಗಳು ಹಾಗೂ ಅತಿ ಹೆಚ್ಚು ಸ್ಥಳೀಯ ಆವೃತ್ತಿಗಳನ್ನು ಹೊಂದಿದ್ದು, ಪ್ರತಿ ಹೋಬಳಿ ಮಟ್ಟದ ಸುದ್ದಿಗಳನ್ನು ಸಮಗ್ರವಾಗಿ ಪ್ರಕಟಿಸುತ್ತಿದೆ. ಪತ್ರಿಕೆಯು ವ್ಯಾಪಾರಕ್ಕಾಗಿ ಮಾರುಕಟ್ಟೆಯ ಬೇಡಿಕೆಯನ್ನು ಗುರುತಿಸಿ ಓದುಗರು ಮತ್ತು ಉದ್ಯಮದ ಪ್ರಮುಖರೊಂದಿಗೆ ತೊಡಗಿಸಿಕೊಂಡಿದೆ ಎಂದು ವಿಜಯ ಕರ್ನಾಟಕ ಮತ್ತು ಬೆಂಗಳೂರು ಮಿರರ್ ಪತ್ರಿಕೆಯ ಸಿಇಒ ದೀಪಕ್ ಸಲುಜ ಹೇಳಿದರು.

ಕರ್ನಾಟಕದಲ್ಲಿ ಗಮನಾರ್ಹವಾದ ಆರ್ಥಿಕ ಹಾಗೂ ಉತ್ಪಾದನಾ ಸಂಪನ್ಮೂಲವಿದ್ದು, ರಾಜ್ಯವು ಜಿಡಿಪಿಯಲ್ಲಿ ಒಂಬತ್ತನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಏರಿದೆ. ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಉದ್ಯೋಗ ಯೋಗ್ಯ ಪ್ರತಿಭೆಗಳನ್ನು ರೂಪಿಸುತ್ತಿವೆ. ಇದರಿಂದ ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆಯಿದೆ. ಇಂದಿನ ಡಿಜಿಟಲ್ ಯುಗದಲ್ಲಿ ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹತೆಯ ಕೊರತೆಯಿದೆ. ‘ವಿಕ ಮನಿ’ ಪತ್ರಿಕೆಯು ವಿಶ್ವಾಸಾರ್ಹ ಸುದ್ದಿ, ಒಳನೋಟವುಳ್ಳ ವಿಶ್ಲೇಷಣೆಗಳು ಮತ್ತು ದೃಷ್ಟಿಕೋನಗಳನ್ನು ಒದಗಿಸುವ ಮೂಲಕ ಜನರಲ್ಲಿ ಸ್ಪಷ್ಟತೆ ತರುವ ಗುರಿ ಹೊಂದಿದೆ. ‘ಹಣ’ ಎಂಬುದು ಸಾರ್ವತ್ರಿಕವಾಗಿ ಪ್ರತಿಧ್ವನಿಸುತ್ತಿದ್ದು, ವಿಕ ಮನಿ ಪತ್ರಿಕೆ ಮೂಲಕ ನಾಡಿನ ಓದುಗರಿಗೆ ಪರಿಣಾಮಕಾರಿ ಆರ್ಥಿಕ ಪತ್ರಿಕೋದ್ಯಮವನ್ನು ತಲುಪಿಸುವ ಬದ್ಧತೆ ಹೊಂದಿದ್ದೇವೆ’’ ಎಂದರು.

ಬದಲಾವಣೆಯ ಪರ್ವ
ಪತ್ರಿಕೋದ್ಯಮ ಹಾಗೂ ನಾವೀನ್ಯತೆ ಎರಡರಲ್ಲೂ ಮುಂದಿರುವ ವಿಜಯ ಕರ್ನಾಟಕ, ನಾಡಿನ ಓದುಗರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡಿದೆ. ನಮ್ಮ ಓದುಗರಲ್ಲಿ ವಾಣಿಜ್ಯ ವಿಷಯಗಳ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯು ‘ವಿಕ ಮನಿ’ ರೂಪಿಸಲು ಒತ್ತಾಸೆಯಾಯಿತು. ‘ವಿಕ ಮನಿ’ ಓದುಗರ ವಾಣಿಜ್ಯ ಹಾಗೂ ಮಾರುಕಟ್ಟೆ ಸಂಬಂಧ ಮಾಹಿತಿಯ ಹಸಿವು ನೀಗಿಸಲಿದೆ. ಕನ್ನಡದಲ್ಲೇ ವಾಣಿಜ್ಯ ಸುದ್ದಿಗಳನ್ನು ಓದುವ ಅವಕಾಶ ಸಿಗಲಿದೆ ಎಂದು ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ತಿಳಿಸಿದರು.

ಕನ್ನಡ ಪತ್ರಿಕೋದ್ಯಮದಲ್ಲಿ ಈವರೆಗೆ ಪ್ರತ್ಯೇಕ ವಾಣಿಜ್ಯ ಪತ್ರಿಕೆ ಇರಲಿಲ್ಲ. ರಜತ ಸಂಭ್ರಮದಲ್ಲಿರುವ ವಿಕ ಈ ಸುಸಂದರ್ಭದಲ್ಲಿ ನಾಡಿನ ಜನರಿಗೆ ‘ವಿಕ ಮನಿ’ಯನ್ನು ವಿಶೇಷ ಕೊಡುಗೆಯಾಗಿ ನೀಡುತ್ತಿದೆ. ಇದರಿಂದ ವಾಣಿಜ್ಯ ಪತ್ರಿಕೋದ್ಯಮದಲ್ಲಿ ಬದಲಾವಣೆಯ ಪರ್ವ ಆರಂಭವಾಗಲಿದೆ. ವಿಕ ಮನಿ ಕೇವಲ ಪತ್ರಿಕೆಯಲ್ಲ. ಇದು ವಾಣಿಜ್ಯಾಸಕ್ತರ ಅಗತ್ಯಗಳನ್ನು ಪೂರೈಸಲಿದೆ ಎಂದು ಹೇಳಿದರು. ವಿಕ ಮನಿ ಹಣಕಾಸು ವಾರ ಪತ್ರಿಕೆ ಪ್ರತಿ ಭಾನುವಾರ ಮಾರುಕಟ್ಟೆಗೆ ಬರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವ ಉದ್ದಿಮೆದಾರರಿಗೆ ಗುಡ್‌ನ್ಯೂಸ್‌.. ಕನ್ನಡದ ಪ್ರಪ್ರಥಮ ಹಣಕಾಸು ವಾರಪತ್ರಿಕೆ ‘ವಿಕ ಮನಿ’ ಬಿಡುಗಡೆ

https://newsfirstlive.com/wp-content/uploads/2024/05/Vijaya-Karnataka-Money-Paper.jpg

Load More