/newsfirstlive-kannada/media/post_attachments/wp-content/uploads/2025/03/DKS-MEETING.jpg)
ಲೋಕಸಭಾ ಕ್ಷೇತ್ರ ಮರುವಿಂಗಡನೆಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ನಡೆಗಳನ್ನು ಮುಲಾಜಿಲ್ಲದೇ ಖಂಡಿಸಲು ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ (Joint Action Committee) ತೀರ್ಮಾನಿಸಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಚೆನ್ನೈನಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಒಟ್ಟು 14 ರಾಜ್ಯಗಳ ನಾಯಕರು ಭಾಗವಹಿಸಿದ್ದರು.
ಸಭೆಯಲ್ಲಿ ಸ್ಟಾಲಿನ್ ಏನಂದ್ರು..?
ನಮ್ಮ ಕಳವಳವನ್ನು ಬಿಜೆಪಿ ನಿರಾಕರಿಸಿದೆ. ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿದಂತೆ ಕ್ಷೇತ್ರ ಪುನರ್ವಿಂಗಡಣೆಯಾದರೆ ಉತ್ತರ ಭಾರತದ ಲೋಕಸಭೆಯ ಸಂಖ್ಯಾ ಬಲ ಹೆಚ್ಚಾಗಲಿದೆ. ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ವಿಂಗಡಣೆ ಆಗಬಾರದು. ನಾವೆಲ್ಲರೂ ಅದನ್ನು ವಿರೋಧಿಸಬೇಕು. ಸಂಸತ್ತಿನಲ್ಲಿ ಜನಪ್ರತಿನಿಧಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ, ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಶಕ್ತಿ ಕೂಡ ಕಡಿಮೆ ಆಗಲಿದೆ.
ಪ್ರಜಾಪ್ರಭುತ್ವ ಪ್ರಾತಿನಿಧ್ಯವನ್ನು ಬಲಪಡಿಸುವ ಯಾವುದನ್ನೂ ನಾವು ವಿರೋಧಿಸುವುದಿಲ್ಲ. ಆದರೆ ಆ ಕ್ರಮವು ನ್ಯಾಯಯುತವಾಗಿರಬೇಕು. ಈ ಪ್ರತಿಭಟನೆ ಗಡಿ ನಿರ್ಣಯದ ವಿರುದ್ಧವಲ್ಲ, ಬದಲಾಗಿ ನ್ಯಾಯಯುತ ಗಡಿ ನಿರ್ಣಯಕ್ಕಾಗಿ ಒತ್ತಾಯಿಸುವುದಾಗಿದೆ. ಲೋಕಸಭೆ ಪುನರ್ ವಿಂಗಡನೆ ವೇಳೆ 1971ರ ಜಾತಿಗಣತಿ ಆಧಾರದ ಮೇಲೆ ವಿಂಗಡನೆ ಮಾಡಬೇಕು. ಇಲ್ಲದಿದ್ದರೆ ಜನಸಂಖ್ಯೆ ನಿಯಂತ್ರಣ ಮಾಡಿರುವ ದಕ್ಷಿಣ ರಾಜ್ಯಗಳ ಸಂಸತ್ ಸ್ಥಾನ ಕಡಿಮೆಯಾಗಲಿದ್ದು, ಲೋಕಸಭೆಯಲ್ಲಿ ಪಾತಿನಿಧ್ಯ ಕಡಿಮೆ ಆಗಲಿದೆ-ಎಂಕೆ ಸ್ಟಾಲಿನ್, ತಮಿಳುನಾಡಿನ ಮುಖ್ಯಮಂತ್ರಿ
ದೇಶದಲ್ಲಿ 2026ರ ವೇಳೆಗೆ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ ಎನ್ನಲಾಗುತ್ತಿದೆ. ಜನ ಸಂಖ್ಯೆಗೆ ಅನುಗುಣವಾಗಿ ಏರಿಕೆಯಾಗಲಿದ್ದು, ಕರ್ನಾಟಕದಲ್ಲಿ 28 ರಿಂದ 36ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಸದ್ಯ ದೇಶದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 543. ಮುಂದಿನ ದಿನಗಳಲ್ಲಿ ಅದರ ಸಂಖ್ಯೆ 753ಕ್ಕೆ ಏರಿಕೆಯಾಗಲಿದೆ. ತೆಲಂಗಾಣದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 17 ರಿಂದ 20ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ.
ಯಾವೆಲ್ಲ ರಾಜ್ಯದಲ್ಲಿ ಏರಿಕೆ ಸಾಧ್ಯತೆ?
ಕರ್ನಾಟಕ: 28 ರಿಂದ 36ಕ್ಕೆ ಏರಿಕೆ ಸಾಧ್ಯತೆ
ತೆಲಂಗಾಣ: 17 ರಿಂದ 20ಕ್ಕೆ ಏರಿಕೆ ಸಾಧ್ಯತೆ
ಆಂಧ್ರಪ್ರದೇಶ: 25 ರಿಂದ 28ಕ್ಕೆ ಏರಿಕೆ ಸಾಧ್ಯತೆ
ತಮಿಳುನಾಡು: 39 ರಿಂದ 41ಕ್ಕೆ ಏರಿಕೆ ಸಾಧ್ಯತೆ
ಕೇರಳ: 20 ರಿಂದ 19ಕ್ಕೆ ಏರಿಕೆ ಸಾಧ್ಯತೆ
ಉತ್ತರ ಪ್ರದೇಶ: 80ರಿಂದ 128ಕ್ಕೆ ಏರಿಕೆ ಸಾಧ್ಯತೆ
ಬಿಹಾರ: 40 ರಿಂದ 70ಕ್ಕೆ ಏರಿಕೆ ಸಾಧ್ಯತೆ
ಮಧ್ಯ ಪ್ರದೇಶ: 29 ರಿಂದ 47ಕ್ಕೆ ಏರಿಕೆ ಸಾಧ್ಯತೆ
ಮಹಾರಾಷ್ಟ್ರ: 48 ರಿಂದ 68ಕ್ಕೆ ಏರಿಕೆ ಸಾಧ್ಯತೆ
ರಾಜಸ್ಥಾನ: 25 ರಿಂದ 44ಕ್ಕೆ ಏರಿಕೆ ಸಾಧ್ಯತೆ
ಇದನ್ನೂ ಓದಿ: 2026 ರಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ; ಕರ್ನಾಟಕದಲ್ಲಿ ಕ್ಷೇತ್ರಗಳ ಸಂಖ್ಯೆ ಎಷ್ಟು ಹೆಚ್ಚಾಗಲಿದೆ..?
ಸಮಸ್ಯೆ ಆಗೋದು ಎಲ್ಲಿ..?
ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಭಾರತದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಭಾರೀ ಏರಿಕೆ ಆಗಲಿದೆ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಚ್ರ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಭಾರೀ ಏರಿಕೆ ಆಗಲಿದೆ. ಸದ್ಯ ಲೋಕಸಭೆಯಲ್ಲಿ ದಕ್ಷಿಣ ಭಾರತವು ಶೇ.24 ರಷ್ಟು ಲೋಕಸಭಾ ಕ್ಷೇತ್ರ ಹೊಂದಿದೆ.
ಕ್ಷೇತ್ರ ಪುನರ್ ವಿಂಗಡಣೆ ಬಳಿಕ ದಕ್ಷಿಣ ಭಾರತದ ಪಾಲು ಲೋಕಸಭೆಯಲ್ಲಿ ಶೇಕಡಾ 19ಕ್ಕೆ ಕುಸಿತವಾಗಲಿದೆ. ದಕ್ಷಿಣ ಭಾರತದ ಕ್ಷೇತ್ರಗಳನ್ನು ಗೆಲ್ಲದೇ ಉತ್ತರ ಭಾರತದ ಕ್ಷೇತ್ರಗಳನ್ನು ಗೆದ್ದು ಯಾವುದೇ ಪಕ್ಷ ಬಹುಮತ ಸಾಧಿಸಬಹುದು. ಲೋಕಸಭೆಯಲ್ಲಿ ಬಹುಮತಕ್ಕೆ ದಕ್ಷಿಣ ಭಾರತ ಅನಿವಾರ್ಯವಾಗಲ್ಲ. ಹೀಗಾಗಿ ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆಗೆ ಡಿಎಂಕೆ, ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಉತ್ತರ ಭಾರತದ ರಾಜ್ಯಗಳನ್ನು ಕ್ಲೀನ್ಸ್ವೀಪ್ ಮಾಡಿದರೆ ಸಾಕಾಗುತ್ತದೆ.
ಇದನ್ನೂ ಓದಿ: ವಿಧಾನಸಭೆ ಕಲಾಪದಲ್ಲಿ 18 ಬಿಜೆಪಿ ಸದಸ್ಯರ ಅಮಾನತಿಗೆ ಕಾರಣ ಏನೇನು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್