/newsfirstlive-kannada/media/post_attachments/wp-content/uploads/2025/01/Presidential-Awards.jpg)
ಭಾರತದ ಇತಿಹಾಸದಲ್ಲಿಯೇ ಇಂತಹದೊಂದು ಘಟನೆ ಮೊದಲ ಬಾರಿಗೆ ನಡೆದಿದೆ. ತಾಯಿ ಮಗನ ಬಗ್ಗೆ ಹೆಮ್ಮೆ, ಮಗನ ಬಗ್ಗೆ ತಾಯಿಗೆ ಹೆಮ್ಮೆ ಏಕಕಾಲಕ್ಕೆ ಮೂಡುವ ಅಪರೂಪದ ಘಟನೆಯಿದು. ಭಾರತೀಯ ಸಶಸ್ತ್ರ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ತಾಯಿ ಹಾಗೂ ಮಗ ಒಂದೇ ಬಾರಿ ಒಂದೇ ವರ್ಷದಲ್ಲಿ ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಲೆಫ್ಟಿನೆಂಟ್ ಜನರಲ್ ಸಾಧನಾ ಎಸ್ ನಾಯರ್​ ಗಣರಾಜ್ಯೋತ್ಸವ ಅಂಗವಾಗಿ ನೀಡಲ್ಪಡುವ ವಿಶಿಷ್ಟ ಸೇವಾ ಮೆಡಲ್​ನ್ನು ಅವರ ಜೀವಮಾನ ಸಾಧನೆಗೆ ಹಾಗೂ ಸೇನೆಯಲ್ಲಿ ನಾಯಕತ್ವದ ನಿರ್ವಹಣೆಗೆ ನೀಡಲಾಗುತ್ತಿದೆ. ಮತ್ತೊಂದು ಕಡೆ ಅವರ ಪುತ್ರ ಸ್ಕ್ವಾಡನ್ ಲೀಡರ್ ತರುಣ್ ನಾಯರ್ ಅವರಿಗೆ ವಾಯುಸೇನಾ ಮೆಡಲ್ ನೀಡಲಾಗುತ್ತಿದೆ.
ಇದನ್ನೂ ಓದಿ:ಇಂದು ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿ ಪ್ರಧಾನ; 2 ಕೀರ್ತಿ ಚಕ್ರ, 14 ಶೌರ್ಯ ಚಕ್ರ ಸೇರಿ 93 ಪ್ರಶಸ್ತಿ
ಇದೊಂದು ಅತ್ಯಂತ ಅಪರೂಪದ ಸನ್ನಿವೇಶ. ಇಬ್ಬರೂ ಕೂಡ ದೇಶಕ್ಕಾಗಿ ತಮ್ಮ ಮೌಲ್ಯವಾದ ಸೇವೆ ಹಾಗೂ ತ್ಯಾಗವನ್ನು ಮಾಡಿದ ಸೇನಾನಿಗಳು. ದೇಶಕ್ಕೆ ಈ ತಾಯಿ ಮತ್ತು ಮಗ ನೀಡಿದ ಕೊಡುಗೆ ಮುಂಬರುವ ಪೀಳಿಗೆಗೆ ನಿಜಕ್ಕೂ ಪ್ರೇರಣದಾಯಕ. ಲೆಫ್ಟಿನೆಂಟ್​ ಜನರಲ್ ಸಾಧನಾ ಅವರು ತಮ್ಮ ಶ್ರದ್ಧೆ ಹಾಗೂ ಕಾರ್ಯಚರಣೆಯ ಸಿದ್ಧತೆಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರೆ. ತರುಣ್ ನಾಯರ್​ ತಮ್ಮ ಭಾರತೀಯ ವಾಯುದಳದಲ್ಲಿ ತಮ್ಮ ಶೌರ್ಯ ಹಾಗೂ ಕೌಶಲ್ಯತೆಯಿಂದ ಗಮನ ಸೆಳೆದ ಸೇನಾನಿನ
ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪ್ರತಿಗಳಾದ ದ್ರೌಪದಿ ಮುರ್ಮ ಅವರು ಒಟ್ಟು 93 ಶೌರ್ಯ ಪ್ರಶಸ್ತಿಗಳ ಪ್ರಧಾನಕ್ಕೆ ಅನುಮೋದನೆ ನೀಡಿದ್ದಾರೆ. ಅವುಗಳಲ್ಲಿ 14 ಶೌರ್ಯ ಚಕ್ರ, ಹಾಗೂ 2 ಕೀರ್ತಿ ಚಕ್ರ ಪ್ರಶಸ್ತಿಗಳು ಕೂಡ ಸೇರಿವೆ. ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸಿದ ಯೋಧರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us