ಅಧಿಕೃತ ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ.. ಗಡಿಯಲ್ಲಿ ಪಾಕ್​​ ಡ್ರೋಣ್ ಪುಡಿಪುಡಿ..! VIDEO

author-image
Ganesh
Updated On
ಪಾಕ್ ವಿರುದ್ಧ ಮತ್ತೆ ಗುಡುಗಿದ ಭಾರತೀಯ ಸೇನೆ.. ಇದೀಗ ಬಂದ ಅಧಿಕೃತ ಮಾಹಿತಿ ಏನು..?
Advertisment
  • ಪಾಕ್ ಮೇಲೆ ದಾಳಿ.. ಸೇನೆಯಿಂದ ವಿಡಿಯೋ ರಿಲೀಸ್
  • ಭಾರತೀಯ ಸೇನೆಯಿಂದಲೇ ಮೊದಲ ವಿಡಿಯೋ ರಿಲೀಸ್
  • ನಿಗದಿತ ಟಾರ್ಗೆಟ್ ಮೇಲೆ ಸೇನೆಯಿಂದ ಡ್ರೋಣ್ ದಾಳಿ

ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಬಿಕ್ಕಟ್ಟು ನೆಕ್ಟ್ಸ್​​ ಲೆವೆಲ್​​ಗೆ ತಲುಪಿದೆ. ಆಪರೇಷನ್ ಸಿಂಧೂರ ನಂತರ ನಡೆದ ಬೆಳವಣಿಗೆಗಳಿಂದಾಗಿ ಭಾರತವು ತನ್ನ ರಕ್ಷಣೆಗಾಗಿ ಪಾಕ್​ ಮೇಲೆ ದಾಳಿ ಮಾಡಬೇಕಾದ ಪ್ರಸಂಗ ಎದುರಾಯಿತು. ಅಂತೆಯೇ ನಿನ್ನೆ ಎರಡೂ ದೇಶಗಳ ಮಧ್ಯೆ ಘರ್ಷಣೆ ಆಗಿದೆ.

ಭಾರತದ ಉಡಾಯಿಸಿದ್ದ ಡ್ರೋಣ್​ಗಳು, ಮಿಸೈಲ್​​ಗಳು ಮತ್ತು ಶೆಲ್​​ಗಳು ಪಾಕಿಸ್ತಾನದ ಕೆಲವು ಭಾಗಗಳನ್ನು ಪುಡಿಪುಡಿ ಮಾಡಿವೆ ಎಂದು ವರದಿಗಳು ಹೇಳಿವೆ. ಪರಿಣಾಮ ಪಾಕಿಸ್ತಾನದ ಪ್ರಮುಖ ಸೇನಾ ನೆಲೆಗಳು ಧ್ವಂಸಗೊಂಡಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಭಾರತೀಯ ಸೇನೆ ಮೊದಲ ಬಾರಿಗೆ ವಿಡಿಯೋ ಹಂಚಿಕೊಂಡಿದೆ.

ಇದನ್ನೂ ಓದಿ: ಐಪಿಎಲ್ ಟೂರ್ನಿ ಸ್ಥಗಿತ ಸಾಧ್ಯತೆ.. ಸುಳಿವು ಕೊಟ್ಟ IPL ಮುಖ್ಯಸ್ಥ ಅರುಣ್ ಧಮಾಲ್..!

ಈ ಬಗ್ಗೆ ಮಾಹಿತಿ ನೀಡಿರುವ ಸೇನೆಯು, ಪಾಕಿಸ್ತಾನ ಸೇನೆಯು ಭಾರತದ ಪಶ್ಚಿಮ ಗಡಿಗಳನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿ ಮಾಡಿತು. ವಿವಿಧ ಡ್ರೋಣ್ ಸೇರಿಂದಂತೆ ಭಾರತದ ಮೇಲೆ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಿ ಮೇ 8 ಮತ್ತು 9 ರಂದು ದಾಳಿ ಮಾಡಿತು. ಮಾತ್ರವಲ್ಲ ಜಮ್ಮು-ಕಾಶ್ಮೀರದಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡ್ತಿದೆ. ಪಾಕಿಸ್ತಾನ ನಮ್ಮ ಮೇಲೆ ಡ್ರೋಣ್ ದಾಳಿಗೆ ಪ್ರಯತ್ನಿಸಿತ್ತು. ಅದನ್ನು ಯಶಸ್ವಿಯಾಗಿ ಹಿಮ್ಮೆಟ್ಟಿದ್ದೇವೆ. ಭಾರತೀಯ ಸೇನೆ ರಾಷ್ಟ್ರದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆ ಕಾಪಾಡಲು ಬದ್ಧವಾಗಿದೆ. ಜೊತೆಗೆ ನಮ್ಮ ಮೇಲೆ ಬಂದವರಿಗೆ ಕಠಿಣ ಉತ್ತರ ನೀಡ್ತೀವಿ ಎಂದು ತಿಳಿಸಿದೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಮತ್ತೊಂದು ಮರ್ಮಾಘಾತ; AWACS ಛಿದ್ರಛಿದ್ರ.. ಏನಿದು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment