newsfirstkannada.com

×

ಗುಡ್​​ನ್ಯೂಸ್​ ಕೊಟ್ಟ ಕೇಂದ್ರ ಸರ್ಕಾರ; ಕೃಷ್ಣಾ-ಗೋದಾವರಿ ಕಣಿವೆಯಲ್ಲಿ ಕಚ್ಚಾ ತೈಲ ಉತ್ಪಾದನೆ..!

Share :

Published January 9, 2024 at 7:11am

Update January 9, 2024 at 9:43am

    ಆಳ ಸಮುದ್ರದಲ್ಲಿ 26 ಬಾವಿಗಳ ಮೂಲಕ ಕಾರ್ಯಾಚರಣೆ

    ‘ಆತ್ಮನಿರ್ಭರ್ ಭಾರತ್’ ಅಭಿಯಾನಕ್ಕೆ ಸಿಕ್ಕ ಯಶಸ್ಸು ಇದು

    ದೇಶದ ಬಿಗ್ ಪ್ರಾಜೆಕ್ಟ್​​ಗೆ ದೊಡ್ಡ ಹೊಡೆತ ಕೊಟ್ಟ ಕೊರೊನಾ

ಕೃಷ್ಣಾ ಗೋದಾವರಿ ಕಣಿವೆಯಲ್ಲಿ ಮೊದಲ ಬಾರಿಗೆ ಕಚ್ಚಾ ತೈಲ ಹೊರ ತೆಗೆಯಲಾಗುತ್ತಿದೆ. ಈ ವರ್ಷದ ಮೇ, ಜೂನ್ ತಿಂಗಳಿಗೆ ಪ್ರತಿ ನಿತ್ಯ 45 ಸಾವಿರ ಬ್ಯಾರೆಲ್​​ ಕಚ್ಚಾ ತೈಲ ಉತ್ಪಾದನೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.

ಆಂಧ್ರ ಪ್ರದೇಶದ ಕಾಕಿನಾಡ ಕರಾವಳಿಯಿಂದ 30 ಕಿಲೋಮೀಟರ್ ದೂರದಲ್ಲಿರುವ ಆಳ ಸಮುದ್ರದಲ್ಲಿ 26 ಬಾವಿಗಳನ್ನು ತೆಗೆಯಲಾಗಿದ್ದು, ಕಚ್ಚಾ ತೈಲದ ಉತ್ಪಾದನೆ ಈಗಾಗಲೇ ಆರಂಭವಾಗಿದೆ. ಕೃಷ್ಣಾ ಗೋಧಾವರಿ ಡೀಪ್-ವಾಟರ್ ಬ್ಲಾಕ್ 98/2ನಲ್ಲಿ ಮೊದಲ ಬಾರಿಗೆ ‘ಫಸ್ಟ್ ಆಯಿಲ್’ ಉತ್ಪಾದನೆ ಮಾಡುತ್ತಿದ್ದೇವೆ ಎಂದು ONGC ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಅವರು ಮೋದಿ ಸರ್ಕಾರದ ‘ಆತ್ಮನಿರ್ಭರ್ ಭಾರತ್’ ಅಭಿಯಾನದ ಸಾಧನೆಯನ್ನು ಕೊಂಡಾಡಿದ್ದಾರೆ. 45 ಸಾವಿರ ಬ್ಯಾರೆಲ್ ಕಚ್ಚಾ ತೈಲದ ಜೊತೆಗೆ ಹೆಚ್ಚುವರಿಯಾಗಿ 10 ಮಿಲಿಯನ್ ಕ್ಯೂಬಿಕ್ ಮೀಟರ್ಸ್​ ಅನೀಲವನ್ನು ನಿರೀಕ್ಷೆ ಮಾಡಲಾಗಿದೆ. ಇದು ಆತ್ಮನಿರ್ಭರ್ ಭಾರತ್​ದ ಕೊಡುಗೆ ಎಂದು ತಿಳಿಸಿದ್ದಾರೆ.

ಈ ಯೋಜನೆಯು ರಾಷ್ಟ್ರೀಯ ತೈಲ ಉತ್ಪಾದನೆಗೆ ಶೇಕಡಾ 7 ರಷ್ಟು ಹಾಗೂ ರಾಷ್ಟ್ರೀಯ ನೈಸರ್ಗಿಕ ಅನೀಲ ಉತ್ಪಾದನೆಗೆ ಶೇಕಡಾ 7 ರಷ್ಟು ಕೊಡುಗೆ ನೀಡಲಿದೆ. 2016-2017ರ ಅವಧಿಯಲ್ಲಿ ಪ್ರಾಜೆಕ್ಟ್​ಗೆ ಚಾಲನೆ ನೀಡಲಾಗಿತ್ತು. ಇದರ ಮಧ್ಯೆ ಕೊರೊನಾ ಬಂದ ಹಿನ್ನೆಲೆಯಲ್ಲಿ ಕೆಲಸದಲ್ಲಿ ವಿಳಂಬವಾಯಿತು. ಇದೀಗ ಪ್ರಾಜೆಕ್ಟ್ ಸಂಪೂರ್ಣ ರೆಡಿಯಾಗಿದ್ದು, ಈಗಾಗಲೇ 26 ಬಾವಿಗಳಿಂದ ಕಚ್ಚಾ ತಲೈ ಉತ್ಪಾದನೆ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗುಡ್​​ನ್ಯೂಸ್​ ಕೊಟ್ಟ ಕೇಂದ್ರ ಸರ್ಕಾರ; ಕೃಷ್ಣಾ-ಗೋದಾವರಿ ಕಣಿವೆಯಲ್ಲಿ ಕಚ್ಚಾ ತೈಲ ಉತ್ಪಾದನೆ..!

https://newsfirstlive.com/wp-content/uploads/2024/01/GAS.jpg

Load More