newsfirstkannada.com

Breaking News: ರಾಮ ದೇಗುಲದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡ ರಾಮಲಲ್ಲಾನ ಫಸ್ಟ್​ಲುಕ್..!

Share :

Published January 19, 2024 at 6:41am

Update January 19, 2024 at 6:47am

    22 ರಂದು ನಡೆಯಲಿರುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ

    ನಿನ್ನೆ ಪೂಜಾ ಕೈಂಕಾರ್ಯದೊಂದಿಗೆ ಮೂರ್ತಿಯನ್ನು ನಿಲ್ಲಿಸಲಾಗಿದೆ

    51 ಇಂಚಿನ ರಾಮಲಲ್ಲಾ ಮೂರ್ತಿಯ ಸುತ್ತ ವಿಷ್ಣುವಿನ ದಶಾವತಾರ

ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಪೂಜಾ ಕೈಂಕಾರ್ಯಗಳು ಶುರುವಾಗಿವೆ. ನಿನ್ನೆ ರಾಮ ದೇಗುಲದ ಗರ್ಭಗುಡಿಯಲ್ಲಿ ಶ್ರೀರಾಮಚಂದ್ರನ ಮೂರ್ತಿಯ ಸ್ಥಾಪನೆಕಾರ್ಯ ನೆರವೇರಿದೆ. ಇದೀಗ ರಾಮಲಲ್ಲಾನ ಫೋಟೋ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಪ್ರಾಣ ಪ್ರತಿಷ್ಠಾಪನೆ ಆಗದ ಹಿನ್ನೆಲೆಯಲ್ಲಿ ಮೂರ್ತಿಯನ್ನು ಶ್ವೇತವರ್ಣದ ಬಟ್ಟೆಯಲ್ಲಿ ಮುಚ್ಚಲಾಗಿದೆ. ಮೂರ್ತಿಯ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಿನ್ನೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. 51 ಇಂಚಿನ ರಾಮಲಲ್ಲಾ ಮೂರ್ತಿಯ ಸುತ್ತ ವಿಷ್ಣುವಿನ ದಶಾವತಾರ ಇದೆ. ಮೂರ್ತಿಯ ಪ್ರಭಾವಳಿಯ ಕೆಳಗೆ ಬಲಭಾಗ ಭಕ್ತಾಂಜನೇಯ, ಎಡಭಾಗ ಗರುಡ ಮೂರ್ತಿಯನ್ನು ನಿಲ್ಲಿಸಲಾಗಿದೆ. ಬ್ರಹ್ಮಕಮಲದ ಮೇಲೆ ನಿಂತು ಶ್ರೀರಾಮಲಲ್ಲಾ ದರ್ಶನ ನೀಡಲಿದ್ದಾನೆ.

ಮಧ್ಯಾಹ್ನದದ ವೇಳೆ ರಾಮಲಲ್ಲಾನನ್ನು ಭವ್ಯ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಸಹಾಯಕ ಅರ್ಚಕ ಅರುಣ್ ದಿಕ್ಷಿತ್ ತಿಳಿಸಿದ್ದಾರೆ. ಮಂತ್ರಪಠಣೆಗಳ ಮೂಲಕ ಕಾರ್ಯಗಳು ನಡೆದವು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಇದನ್ನು ನಡೆಸಿದೆ. ಟ್ರಸ್ಟ್​​ ಸದಸ್ಯ ಅನಿಲ್ ಮಿಶ್ರಾ ಸಮ್ಮುಖದಲ್ಲಿ ಪ್ರಧಾನ ಸಂಕಲ್ಪ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ರಾಮ ದೇಗುಲದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡ ರಾಮಲಲ್ಲಾನ ಫಸ್ಟ್​ಲುಕ್..!

https://newsfirstlive.com/wp-content/uploads/2024/01/RAMLLA.jpg

Load More