newsfirstkannada.com

VIDEO: 31 ವರ್ಷದ ಬಳಿಕ ಜ್ಞಾನವಾಪಿ ಶಿವಲಿಂಗಕ್ಕೆ ಮೊದಲ ಪೂಜೆ; ಈ ಅದ್ಭುತ ಕ್ಷಣ ಹೇಗಿತ್ತು ಗೊತ್ತಾ?

Share :

Published February 1, 2024 at 6:04pm

Update February 1, 2024 at 6:05pm

    ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಂದ ವಿಶೇಷ ಪೂಜೆ

    ಬಿಗಿ ಭದ್ರತೆಯಲ್ಲಿ ಮಹದೇವನ ದರ್ಶನ ಪಡೆದ ಹಿಂದೂಗಳು

    7 ದಿನಗಳ ಒಳಗಾಗಿ ಪೂಜೆಗೆ ವ್ಯವಸ್ಥೆ ಮಾಡಲು ಕೋರ್ಟ್ ಆದೇಶ

ವಾರಾಣಸಿ: ಕಳೆದ 31 ವರ್ಷಗಳಿಂದ ಕಾಯುತ್ತಿದ್ದ ಆ ಕಾಲ ಕೂಡಿ ಬಂದಿದೆ. ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಂದ ಪೂಜೆ, ಆರತಿ ಮಾಡಲಾಗಿದೆ. ಮಧ್ಯರಾತ್ರಿ ಬಿಗಿ ಭದ್ರತೆಯಲ್ಲಿ 31 ವರ್ಷದ ಬಳಿಕ ಮೊದಲ ಪೂಜೆ ನೆರವೇರಿಸಲಾಗಿದೆ.

ವಾರಾಣಸಿಯ ಜಿಲ್ಲಾ ನ್ಯಾಯಲಯ ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿದೆ. ಈ ಅನುಮತಿ ಜೊತೆಗೆ 7 ದಿನಗಳ ಒಳಗಾಗಿ ಹಿಂದೂಗಳ ಪೂಜೆಗೆ ವ್ಯವಸ್ಥೆ ಮಾಡಲು ಕೋರ್ಟ್ ಸೂಚಿಸಿತ್ತು. ಕೋರ್ಟ್ ಆದೇಶ ನೀಡಿದ ಮರುದಿನವೇ ವಿಶೇಷ ಪೂಜೆಯನ್ನು ನೆರವೇರಿಸಲಾಗಿದೆ.

ವಿವಾದಿತ ಜ್ಞಾನವಾಪಿ ಮಸೀದಿಯ ಬೇಸ್​​​ಮೆಂಟ್​​ನಲ್ಲಿರುವ ‘ವ್ಯಾಸ್​​​​ ಕಾ ತಹಖಾನಾ’ದಲ್ಲಿ ಮಧ್ಯರಾತ್ರಿ 12 ಗಂಟೆಗೆ ಪೂಜಾ ಕಾರ್ಯ ಆರಂಭವಾಗಿದೆ. ರಾತ್ರಿ 2 ಗಂಟೆಗೆ ಪೂಜೆ, ಮಹಾಮಂಗಾಳರತಿ ಕಂಡು ಭಕ್ತರು ಧನ್ಯರಾಗಿದ್ದಾರೆ. ಭಕ್ತರು ಮಹಾದೇವನ ಆಶೀರ್ವಾದ ಪಡೆದ್ರೆ, ಟ್ರಸ್ಟ್​ನ ಸದಸ್ಯರು, ಕುಟುಂಬಸ್ಥರು ಪೂಜೆಯಲ್ಲಿ ಭಾಗಿಯಾಗಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಜ್ಞಾನವಾಪಿ ಮಸೀದಿಯ ಸುತ್ತಾ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ: 31 ವರ್ಷಗಳ ಬಳಿಕ ಜ್ಞಾನವಾಪಿಯಲ್ಲಿ ಪೂಜೆ; ಇಲ್ಲಿ ಪೂಜೆ ಸಲ್ಲಿಸ್ತಿದ್ದ ಕುಟುಂಬ ಯಾವುದು ಗೊತ್ತಾ..?

ಜ್ಞಾನವಾಪಿ ಮಸೀದಿಯಲ್ಲಿ ಮಧ್ಯರಾತ್ರಿ ಪೂಜೆ, ಆರತಿ ನಡೆಯುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಲಾಗಿದೆ. ದಕ್ಷಿಣ ದ್ವಾರದ ಮೂಲಕ ಭಕ್ತರು ಜ್ಞಾನವಾಪಿ ಮಸೀದಿಗೆ ಭೇಟಿ ನೀಡಿದ್ದು, ವಿವಾದಿತ ಮಸೀದಿ ಬೇಸ್​​​ಮೆಂಟ್​​ನಲ್ಲಿರುವ ‘ವ್ಯಾಸ್​​​​ ಕಾ ತಹಖಾನಾ’ದಲ್ಲಿ ಪೂಜಾರಿ ಆರತಿ ಬೆಳಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: 31 ವರ್ಷದ ಬಳಿಕ ಜ್ಞಾನವಾಪಿ ಶಿವಲಿಂಗಕ್ಕೆ ಮೊದಲ ಪೂಜೆ; ಈ ಅದ್ಭುತ ಕ್ಷಣ ಹೇಗಿತ್ತು ಗೊತ್ತಾ?

https://newsfirstlive.com/wp-content/uploads/2024/02/Gyanavapi-Pooje.jpg

Load More