newsfirstkannada.com

VIDEO: ಬರೋಬ್ಬರಿ 5 ತಿಂಗಳ ಬಳಿಕ ಬೆಂಗಳೂರಲ್ಲಿ ಮೊದಲ ಮಳೆ; ಜನ ಫುಲ್​ ಖುಷ್​

Share :

Published April 19, 2024 at 8:35pm

Update April 19, 2024 at 8:29pm

    ಬಿಸಿ ಗಾಳಿಯಿಂದ ಹೈರಾಣಾಗಿದ್ದ ಜನತೆಗೆ ಸಖತ್​ ಕೂಲ್ ನೀಡಿದ ಮಳೆರಾಯ​​

    ಮನೆಯಿಂದ ಹೊರ ಬರೋದಕ್ಕೂ ಭಯ ಪಡುತ್ತಿದ್ದ ಜನರ ಮುಖದಲ್ಲಿ ಮಂದಹಾಸ

    ಯಲಹಂಕ, ಕೆಂಗೇರಿ, ಮಾಗಡಿ ಸೇರಿದಂತೆ ಹಲವು ಭಾಗಗಳಲ್ಲಿ ಜಿಟಿ ಜಿಟಿ ಮಳೆ

ಬೆಂಗಳೂರು: ಮನೆಯಿಂದ ಹೊರಗೆ ಬಂದ್ರೆ ನೆತ್ತಿ ಸುಡುತ್ತಿದ್ದ ಬಿಸಿಲು. ಮಳೆ ಯಾವಾಗ ಬರುತ್ತಪ್ಪಾ ಅಂತ ಆಕಾಶದ ಕಡೆ ನೋಡುತ್ತಿದ್ದ ಸಿಲಿಕಾನ್ ಸಿಟಿ ಜನ ಇವತ್ತು ಕೂಲ್ ಆಗಿದ್ದಾರೆ. ಬರೋಬ್ಬರಿ 5 ತಿಂಗಳ ಬಳಿಕ ಉದ್ಯಾನನಗರಿಯಲ್ಲಿ ಮೊದಲ ಮಳೆ ಸುರಿದಿದೆ. ಈ ವರ್ಷದ ಮೊದಲ ಮಳೆ ಬೆಂಗಳೂರಿನ ಹಲವೆಡೆ ಬಿಸಿಲಿಗೆ ಬಸವಳಿದಿದ್ದವರಿಗೆ ತಂಪೆರೆದಿದೆ.

ಇದೇ ಮೊದಲ ಬಾರಿಗೆ ಸಿಲಿಕಾನ್​ ಸಿಟಿಯ ಜನರು ಬಿಸಿಲಿನ ತಾಪಮಾನದಿಂದ ಹೈರಾಣಾಗಿದ್ದರು. ದಿನದಿಂದ ದಿನಕ್ಕೆ ಬಿರು ಬಿಸಿಲಿನ ತಾಪಮಾನ ಹೆಚ್ಚಾಗುತ್ತಿತ್ತು. ಇದರಿಂದ ಮನೆಯಿಂದ ಹೊರ ಬರೋದಕ್ಕೂ ಜನರು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಉರಿ ಬಿಸಿಲಿಗೆ ಕಂಗಾಲಾಗಿದ್ದ ಜನರು ಇಂದು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: Rain: ಬೆಂಗಳೂರಿಗೆ ಕೊನೆಗೂ ಮಳೆರಾಯನ ಎಂಟ್ರಿ; ಇಂದು ವರುಣನ ಆರ್ಭಟ ಎಲ್ಲೆಲ್ಲಿ?

ಹೌದು, ಬರೋಬ್ಬರಿ 5 ತಿಂಗಳ ಬಳಿಕ ಬೆಂಗಳೂರಿನ ಹಲವೆಡೆ ವರ್ಷದ ಮೊದಲ ಮಳೆಯಾಗಿದೆ. ಯಲಹಂಕ, ಕೆಂಗೇರಿ, ಮಾಗಡಿ ಸೇರಿದಂತೆ ಕೆಲವು ಭಾಗದಲ್ಲಿ ಕೆಲ ಹೊತ್ತು ತುಂತುರು ಮಳೆಯಾಗಿದೆ. ಇನ್ನು ಯಾವಾಗ ಮಳೆಯಾಗುತ್ತೆ ಎಂದು ಕಾಯುತ್ತಿದ್ದ ಸಿಲಿಕಾನ್​ ಸಿಟಿಯ ಜನರಿಗೆ ಕೊಂಚ ರಿಲೀಫ್​ ಸಿಕ್ಕಿದೆ.

ಕೇವಲ ಬಿಸಿ ಬಿಸಿ ಗಾಳಿಯಿಂದ ಹೈರಾಣಾಗಿದ್ದ ಜನಕ್ಕೆ ಇಂದು ಮಳೆರಾಯ ಕೂಲ್​​ ಕೂಲ್​​ ಗಾಳಿ ನೀಡಿ ತಂಪು ಮಾಡಿದ್ದಾನೆ. ಇನ್ನು, ರಾಜಧಾನಿಯ ಕೆಲವು ಕಡೆ ಮಳೆಯಾಗಿಲ್ಲ. ಸದ್ಯ ಮಳೆಯ ನಿರೀಕ್ಷೆಯಲ್ಲೇ ಜನ ಕಾಲ ಕಳೆಯುತ್ತಿದ್ದಾರೆ. ವರ್ಷದ ಮೊದಲ ಮಳೆಯನ್ನು ಕಂಡು ಜನರು ವಿಡಿಯೋ ಮಾಡಿ ಟ್ವಿಟರ್​ ಖಾತೆಯಲ್ಲಿ ಶೇರ್ ಮಾಡಿಕೊಂಡು ಸಂತೋಷ ಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬರೋಬ್ಬರಿ 5 ತಿಂಗಳ ಬಳಿಕ ಬೆಂಗಳೂರಲ್ಲಿ ಮೊದಲ ಮಳೆ; ಜನ ಫುಲ್​ ಖುಷ್​

https://newsfirstlive.com/wp-content/uploads/2023/07/bng-rain.jpg

Load More