Advertisment

ಚೀನಾ HMPV ವೈರಸ್ ಬಗ್ಗೆ ಭಾರತೀಯರಿಗೆ ಭಯ ಬೇಡ.. ಕೇಂದ್ರ ಆರೋಗ್ಯ ಇಲಾಖೆ ಹೇಳಿದ್ದೇನು?

author-image
Gopal Kulkarni
Updated On
ಚೀನಾ HMPV ವೈರಸ್ ಬಗ್ಗೆ ಭಾರತೀಯರಿಗೆ ಭಯ ಬೇಡ.. ಕೇಂದ್ರ ಆರೋಗ್ಯ ಇಲಾಖೆ ಹೇಳಿದ್ದೇನು?
Advertisment
  • ಚೀನಾದಲ್ಲಿ ಹೊಸದಾಗಿ ಹುಟ್ಟಿಕೊಂಡಿರುವ HMPV ವೈರಸ್​
  • ಯಾವುದೇ ಕಾರಣಕ್ಕೂ ಆತಂಕ ಬೇಡ ಎಂದ ಕೇಂದ್ರ ಸರ್ಕಾರ
  • ಬೇರೆ ವೈರಸ್​ನಂತೆ ಇದು ಕೂಡ ಒಂದು ವೈರಸ್ ಎಂದು ಸ್ಪಷ್ಟನೆ

ಚೀನಾದಲ್ಲಿ ಹೆಚ್​ಎಂಪಿವಿ ವೈರಸ್ ಹರಡುತ್ತಿರುವ ಬಗ್ಗೆ ಭಾರತದ ಆರೋಗ್ಯ ಇಲಾಖೆ ಪ್ರತಿಕ್ರಿಯೆ ನೀಡಿದೆ. ಭಾರತದಲ್ಲಿ ಜನರು ಆತಂಕಪಡುವ ಅಗತ್ಯವಿಲ್ಲ, ಯಾರು ಕೂಡ ಪ್ಯಾನಿಕ್ ಆಗಬೇಡಿ ಎಂದು ಕೇಂದ್ರ ಸರ್ಕಾರ ಹೇಳಿದೆ. ಉಸಿರಾಟದ ಸಮಸ್ಯೆಗಳ ಬಗ್ಗೆ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮರೆಯಬೇಡಿ.

Advertisment

HMPV ವೈರಸ್ ಬೇರೆ ವೈರಸ್​ಗಳಂತೆ ಶೀತ, ಕೆಮ್ಮು, ಜ್ವರಕ್ಕೆ ಕಾರಣವಾಗುತ್ತದೆ ಎಂದು ಕೇಂದ್ರ ಸರ್ಕಾರದ ಹೆಲ್ತ್ ಸರ್ವೀಸಸ್​ನ ಡಿಜಿ ಡಾ. ಆತುಲ್ ಗೋಯಲ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:ಚೀನಾದಲ್ಲಿ ಭೀತಿ ಹುಟ್ಟಿಸಿದ ಹೊಸ ವೈರಸ್​; ಇದು ಕೋವಿಡ್​ನಷ್ಟೇ ಅಪಾಯಕಾರಿನಾ? ತಜ್ಞ ವೈದ್ಯರು ಹೇಳೋದೇನು?

ನಮ್ಮ ದೇಶದ ಉಸಿರಾಟ ಸಮಸ್ಯೆಯ ಕೇಸ್ ಡಾಟಾ ವಿಶ್ಲೇಷಣೆ ಗಮನಿಸಿದಾಗ 2024ರ ಡಿಸೆಂಬರ್​ನಲ್ಲಿ ಉಸಿರಾಟದ ಸಮಸ್ಯೆಗಳ ಕೇಸ್ ಹೆಚ್ಚಳವಾಗಿಲ್ಲ.ದೇಶದ ಯಾವುದೇ ಆಸ್ಪತ್ರೆಗಳಲ್ಲೂ ಉಸಿರಾಟದ ಸಮಸ್ಯೆಯ ಪ್ರಕರಣಗಳು ಹೆಚ್ಚಾಗಿಲ್ಲ. ಚಳಿಗಾಲದಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಿಗೆ ಕಂಡು ಬಂದಲ್ಲಿ ಅವುಗಳನ್ನು ನಿಭಾಯಿಸಲು ಆಸ್ಪತ್ರೆಗಳು ಸಜ್ಜಾಗಿವೆ.

Advertisment

ಆಸ್ಪತ್ರೆಗಳಲ್ಲಿ ಬೆಡ್​, ಅಗತ್ಯ ಔಷಧಿ ಪೂರೈಕೆ ಎಲ್ಲವೂ ಸಾಕಷ್ಟು ಪ್ರಮಾಣದಲ್ಲಿದೆ. ಭಾರತ ಆರೋಗ್ಯ ಇಲಾಖೆ ನಿರಂತರವಾಗಿ ಅಂತಾರಾಷ್ಟ್ರೀಯ ಏಜೆನ್ಸಿಗಳ ಸಂಪರ್ಕದಲ್ಲಿದೆ ದೇಶದ ಜನರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಆತುಲ್ ಗೋಯಲ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment