newsfirstkannada.com

ಗಡಿ ಭದ್ರತಾ ಪಡೆಯಲ್ಲಿ ಹೊಸ ಮೈಲಿಗಲ್ಲು: ಬಿಎಸ್​ಎಫ್​ಗೆ ಸಿಕ್ಕರು ಮೊದಲ ಮಹಿಳಾ ಸ್ನೈಪರ್

Share :

Published March 5, 2024 at 6:25am

Update March 5, 2024 at 6:26am

    ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯ ಮಹಿಳಾ ಸ್ನೈಪರ್​

    ಘಟಾನುಘಟಿ ಪುರುಷರೇ ಸ್ನೈಪರ್​ ಆಗುವಲ್ಲಿ ಫೇಲ್​

    ಶ್ರಮದಿಂದ ಸ್ನೈಪರ್​ ಹುದ್ದೆಗೆ ಏರಿದ ಸುಮನ್ ಕುಮಾರಿ

ಭಾರತದ ಗಡಿ ಭದ್ರತಾ ಪಡೆಯಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಯಾಗಿದೆ. ಗಡಿ ಭದ್ರತಾ ಪಡೆಗೆ ಮೊಟ್ಟಮೊದಲ ಮಹಿಳಾ ಸ್ನೈಪರ್ ದೊರೆತಿದ್ದಾರೆ. ಬಿಎಸ್​ಎಫ್​ನಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಸುಮನ್ ಕುಮಾರಿ 8 ವಾರಗಳ ಕಠಿಣ ಸ್ನೈಪರ್ ಕೋರ್ಸ್ ಪೂರೈಸಿ ಬೋಧಕ ಹುದ್ದೆಗೆ ಏರುವ ಮೂಲಕ ಈ ಸ್ಥಾನ ಅಲಂಕರಿಸುತ್ತಿರುವ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸ್ನೈಪರ್​… ಅಂದ್ರೆ ಗುರಿಕಾರ.. ಬಂದೂಕು ವಿದ್ಯೆಯಲ್ಲಿ ಅಸಾಧ್ಯ ನೈಪುಣ್ಯತೆ ಪಡೆದವರು. ಸಾಮಾನ್ಯ ವ್ಯಕ್ತಿಗಳಿಗೆ ಅಸಾಧ್ಯವೆನ್ನಬಹುದಾದ ದೂರದಿಂದ ಹಾಗೂ ಗುಪ್ತಸ್ಥಳದಿಂದ ಇಟ್ಟ ಗುರಿ ತಪ್ಪದಂತೆ ಬುಲೆಟ್​ ಫೈರ್​ ಮಾಡಿ ಎದುರಾಳಿಯನ್ನು ಉಡೀಸ್​ ಮಾಡುವ ಗುರಿಕಾರ. ಸ್ನೈಪರ್​ ವಿಧ್ಯೆಯಲ್ಲಿ ಪಂಟರ್​ ಆಗೋದು ಅಷ್ಟು ಸಲಭದ ಮಾತಲ್ಲ. ಘಟಾನುಘಟಿ ಪುರುಷರೇ ಸ್ನೈಪರ್​ ಆಗುವಲ್ಲಿ ಫೇಲ್​ ಆಗ್ತಾರೆ. ಆದ್ರೆ ಈ ಮಹಿಳೆ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಬಿಎಸ್​ಎಫ್​ ಗಡಿ ಭದ್ರತಾ ಪಡೆಯ ಮೊದಲ ಮಹಿಳಾ ಸ್ನೈಪರ್​ ಆಗಿ ಹೊರಹೊಮ್ಮಿದ್ದಾರೆ.

ಭಾರತದ ಗಡಿ ಭದ್ರತಾ ಪಡೆಯಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಯಾಗಿದೆ. ಗಡಿ ಭದ್ರತಾ ಪಡೆಗೆ ಮೊಟ್ಟಮೊದಲ ಮಹಿಳಾ ಸ್ನೈಪರ್ ದೊರೆತಿದ್ದಾರೆ. ಅದೇ ಈ ಸುಮನ್ ಕುಮಾರಿ. ಬಿಎಸ್​ಎಫ್​ನಲ್ಲಿ ಸಬ್​ಇನ್ಸ್ ಪೆಕ್ಟರ್ ಆಗಿದ್ದ ಸುಮನ್ ಕುಮಾರಿ ಕಠಿಣ ಪರಿಶ್ರಮದ ಮೂಲಕ ಸ್ನೈಪರ್​ ಹುದ್ದೆಗೆ ಏರಿದ ಮೊದಲ ಮಹಿಳಾ ಸ್ನೈಪರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುಮನ್ ಕುಮಾರಿ ಮೂಲತ ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯವರು. 2021ರಲ್ಲಿ ಬಿಎಸ್ ಎಫ್ ಸೇರಿದ್ದಾರೆ. ಪಂಜಾಬ್​ನ ಗಡಿವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಸ್ನೈಪರ್ ದಾಳಿಯ ಅಪಾಯ ಎದುರಿಸುತ್ತಿದ್ದರು. ಆಗ ಸ್ನೈಪರ್​ ಹುದ್ದೆಗೆ ಇರುವ ಮಹತ್ವವನ್ನು ಅರಿತ ಸುಮನ್ ಸ್ವಯಂ ಪ್ರೇರಿತರಾಗಿ ಸ್ನೈಪರ್ ಕೋರ್ಸ್ ಪಡೆಯುವ ಆಸಕ್ತಿ ವ್ಯಕ್ತಪಡಿಸಿದ್ರು. ಹಿರಿಯ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡು ಈ ಕೋರ್ಸ್​ಗೆ ಅರ್ಜಿ ಹಾಕಿದ್ರು. ಹೀಗೆ ಅರ್ಜಿ ಹಾಕಿದವರ ಪೈಕಿ ಸುಮನ್ ಮೊದಲ ಮಹಿಳೆ.

ಶಾರ್ಪ್ ಶೂಟಿಂಗ್‌ನಲ್ಲಿ ಸುಮನ್​ರನ್ನು ಮೀರಿಸೋರಿಲ್ಲ

ಗಡಿ ಭದ್ರತಾ ಪಡೆಯಲ್ಲಿ ಸ್ನೈಪರ್​ ಆಗಬೇಕು ಎಂಬುದು ಸುಲಭದ ಸಂಗತಿಯಲ್ಲ. ಅದಕ್ಕೆ ಕಠಿಣ ತರಬೇತಿ, ನಿರ್ದಿಷ್ಟ ಗುರಿ ಮತ್ತು ಎದುರಾಳಿಗಳ ನಡೆ ಅರಿಯುವ ಚಾಕಚಕ್ಯತೆ ಬೇಕು. ಇಂಥ ಸವಾಲುಗಳನ್ನು ಎದುರಿಸುವ ಬಗ್ಗೆ ಇಂದೋರ್​ನ ಸೆಂಟ್ರಲ್ ಆರ್ಮಮೆಂಟ್ ಮತ್ತು ಕಾಂಬ್ಯಾಟ್ ಸ್ಕಿಲ್ಸ್ ಸ್ಕೂಲ್ ಆಫ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್​ನಲ್ಲಿ 8 ವಾರಗಳ ಕಠಿಣ ತರಬೇತಿ ಪಡೆದು ಸುಮನ್​ ಕುಮಾರಿ ಸಜ್ಜಾಗಿದ್ದಾರೆ. ಸ್ನೈಪರ್​ ಕೋರ್ಸ್​ ತುಂಬಾ ಕಠಿಣ. ಇದಕ್ಕೆ ಮಾನಸಿಕ ಮತ್ತು ದೈಹಿಕವಾಗಿ ಬಹಳ ಗಟ್ಟಿಯಾಗಿರಬೇಕು. ಶತ್ರುಗಳಿಗೆ ಕಾಣದಂತೆ ಅವರ ಚಲನವಲನವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕು. ಇದಕ್ಕಾಗಿ ತರಬೇತಿ ನಡೆಸುವುದು ಅನೇಕ ಪುರುಷ ಅಭ್ಯರ್ಥಿಗಳಿಗೇ ಕಷ್ಟ. ತರಬೇತಿ ಪಡೆದ ಸ್ನೈಪರ್​ ನಿರ್ದಿಷ್ಟ ದೂರದಲ್ಲಿ ನಿಖರ ಗುರಿ ಹೊಂದಿರುತ್ತಾರೆ. ಎಸ್​ಎಸ್​ಜಿ ಸೇರಿದಂತೆ ಹಲವು ಅತ್ಯಾಧುನಿಕ ಗನ್​ ಬಳಕೆ ಮಾಡುತ್ತಾರೆ. ಕಷ್ಟಕರ ಪರಿಸ್ಥಿತಿಯಲ್ಲಿ ಶತ್ರುಗಳೆದುರು ತಮ್ಮನ್ನು ಮರೆಮಾಚುತ್ತಾ 3 ಕಿ.ಮೀ. ದೂರದಿಂದಲೇ ಹೊಡೆದುರುಳಿಸಲು ತರಬೇತಿ ಪಡೆದಿರುತ್ತಾರೆ. 56 ಪುರುಷ ಸಹೋದ್ಯೋಗಿಗಳೊಂದಿಗೆ ಏಕಾಂಗಿಯಾಗಿ ಕಠಿಣ ತರಬೇತಿ ಪಡೆದು ಸುಮನ್​ ಕುಮಾರ್​ ಸ್ನೈಪರ್​ ಆಗಿ ಹೊರಹೊಮ್ಮಿದ್ದಾರೆ.

ಕಠಿಣ ಪ್ರದೇಶಗಳಲ್ಲಿ ಗುರಿಕಾರರಾಗಿ ಕಾರ್ಯನಿರ್ವಹಿಸುವ ಸ್ನೈಪರ್​ಗಳು ಯಾವುದೇ ಸೇನಾ ಪಡೆಯ ಪ್ರಮುಖ ಶಕ್ತಿಯಾಗಿರುತ್ತಾರೆ. ಯಾವುದೇ ಸನ್ನಿವೇಶದಲ್ಲಿ ಇವರ ಪಾತ್ರ ಮಹತ್ವದ್ದಾಗಿರುತ್ತದೆ. ಸದ್ಯ ಸುಮನ್​ ಕುಮಾರಿ ಸ್ನೈಪರ್​ ಭೋದಕರಾಗಿ ಕಾರ್ಯ ನಿರ್ವಹಿಸಲು ಅರ್ಹರಾಗಿದ್ದಾರೆ. ಗಡಿ ಭದ್ರತಾ ಪಡೆಯ ಇಂತಹ ಸ್ನೈಪರ್ ಹುದ್ದೆಗೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಆಯ್ಕೆಯಾಗಿದ್ದು. ಇದು ಹೆಮ್ಮೆಯ ಸಂಗತಿ.. ಸುಮನ್​ ಕುಮಾರಿಯವರ ಈ ಶ್ರಮ ಮತ್ತಷ್ಟು ಮಹಿಳೆಯರಿಗೆ ಸ್ಫೂರ್ತಿಯಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಡಿ ಭದ್ರತಾ ಪಡೆಯಲ್ಲಿ ಹೊಸ ಮೈಲಿಗಲ್ಲು: ಬಿಎಸ್​ಎಫ್​ಗೆ ಸಿಕ್ಕರು ಮೊದಲ ಮಹಿಳಾ ಸ್ನೈಪರ್

https://newsfirstlive.com/wp-content/uploads/2024/03/wonen.jpg

Load More