/newsfirstlive-kannada/media/post_attachments/wp-content/uploads/2024/11/IND-Vs-SA-T20-1.jpg)
ಡರ್ಬನ್‌ನಲ್ಲಿ ಭಾರತ, ದಕ್ಷಿಣ ಆಫ್ರಿಕಾ ಮಧ್ಯೆ ಮೊದಲ T20 ಹಣಾಹಣಿ ಶುರುವಾಗಿದೆ. ಟಾಸ್ ಗೆದ್ದ ಸೌತ್ ಆಫ್ರಿಕಾ ಕ್ಯಾಪ್ಟನ್ ಐಡೆನ್ ಮಾರ್ಕ್ರಾಮ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಸೂರ್ಯ ಕುಮಾರ್ ಯಾದವ್ ನೇತೃತ್ವದ ಬಲಿಷ್ಠ ಟೀಂ ಇಂಡಿಯಾ ಡರ್ಬನ್ ಮೈದಾನದಲ್ಲಿ ಅಗ್ನಿಪರೀಕ್ಷೆಗಿಳಿದಿದೆ.
ತವರಿನಲ್ಲಿ ನಡೆಯೋ ಮೊದಲ ಚುಟುಕು ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದು ಬೀಗಲು ದಕ್ಷಿಣ ಆಫ್ರಿಕಾ ಭರ್ಜರಿ ತಯಾರಿ ನಡೆಸಿದೆ. ಡರ್ಬನ್‌ನಲ್ಲಿ ಸದ್ಯ ಮಳೆಯ ವಾತಾವರಣ ಇದ್ದು ತೇವಾಂಶದ ಪಿಚ್ ನಿರ್ಣಾಯಕ ಪಾತ್ರವಹಿಸಲಿದೆ. ಆರಂಭದಲ್ಲೇ ವಿಕೆಟ್ ತೆಗೆದು ಟೀಂ ಇಂಡಿಯಾವನ್ನು ಕಟ್ಟಿ ಹಾಕಲು ಪ್ರಯತ್ನಿಸುತ್ತೇವೆ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವುದಾಗಿ ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಐಡೆನ್ ಮಾರ್ಕ್ರಾಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/11/Suryakumar-Yadav.jpg)
ಟಾಸ್ ಸೋತ ಬಳಿಕ ಮಾತನಾಡಿದ ನಾಯಕ ಸೂರ್ಯ ಕುಮಾರ್ ಯಾದವ್ ಅವರು ಭಾರತ ತಂಡ ಹೆಚ್ಚು ಸ್ಕೋರ್ ಗಳಿಸೋ ಗುರಿ ಹೊಂದಿದ್ದೇವೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ನಮ್ಮ ಇಡೀ ತಂಡ ಅತ್ಯುತ್ಸಾಹದಲ್ಲಿ ಪಂದ್ಯವನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.
ಭಾರತದ ಪ್ಲೇಯಿಂಗ್ 11ರಲ್ಲಿ ಯಾರಿದ್ದಾರೆ?
ಮೊದಲು ಬ್ಯಾಟ್ ಮಾಡುತ್ತಿರುವ ಭಾರತ ತಂಡದಲ್ಲಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(ಕೀಪರ್), ಸೂರ್ಯಕುಮಾರ್ ಯಾದವ್(ಕ್ಯಾಪ್ಟನ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಅವೇಶ್ ಖಾನ್ ಸ್ಥಾನ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ ಹೀಗಿದೆ!
ರಿಯಾನ್ ರಿಕೆಲ್ಟನ್(ಕೀಪರ್), ಐಡೆನ್ ಮಾರ್ಕ್ರಾಮ್(ಕ್ಯಾಪ್ಟನ್), ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಪ್ಯಾಟ್ರಿಕ್ ಕ್ರುಗರ್, ಮಾರ್ಕೊ ಜಾನ್ಸೆನ್, ಆಂಡಿಲ್ ಸಿಮೆಲೇನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ನ್ಕಾಬಯೋಮ್ಜಿ ಪೀಟರ್ ಕಣಕ್ಕಿಳಿಯುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us