newsfirstkannada.com

ಇದು ಅಂತಿಂಥಾ ದಾಖಲೆ ಅಲ್ಲವೇ ಅಲ್ಲ.. ಯಾವ ಟೀಮ್​ ಮಾಡಿರದ ರೆಕಾರ್ಡ್​ ಮಾಡಿದ RCB

Share :

Published May 13, 2024 at 11:01am

    ಮೊದಲು 7 ಪಂದ್ಯಗಳಲ್ಲಿ ಸತತ ಸೋಲುಗಳನ್ನ ಕಂಡಿದ್ದ RCB

    ಐಪಿಎಲ್​ನಲ್ಲಿ ಆರ್​ಸಿಬಿ ಪ್ರತಿ ಗೆಲುವು ಈಗ ದಾಖಲೆ ಆಗುತ್ತಿದೆ

    ಹೊಸ ರೆಕಾರ್ಡ್​ಗಳನ್ನ ಬರೆಯುತ್ತಿರೋ ರಾಯಲ್ ಚಾಲೆಂಜರ್ಸ್

ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​​ಸಿಬಿ 47 ರನ್‌ಗಳ ಮೂಲಕ ಭರ್ಜರಿ ಜಯ ಸಾಧಿಸಿದೆ. ಈ ವಿಜಯದೊಂದಿಗೆ ಬೆಂಗಳೂರು ತಂಡದ ಪ್ಲೇ ಆಫ್ ಆಕಾಂಕ್ಷೆಗಳು ಇನ್ನು ಜೀವಂತವಾಗಿವೆ. ಇದು ಮಾತ್ರವಲ್ಲದೆ 2024ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ 5 ಪಂದ್ಯಗಳಲ್ಲಿ ಸತತ ಗೆಲುವಿನೊಂದಿಗೆ ಫಾಫ್ ಪಡೆ ಹೊಸ ದಾಖಲೆ ಬರೆದಿದೆ.

2024ರ ಐಪಿಎಲ್​ ಟೂರ್ನಿಯ ಆರಂಭದಲ್ಲಿ 8 ಪಂದ್ಯಗಳಲ್ಲಿ ಸತತ 7 ಮ್ಯಾಚ್​ಗಳಲ್ಲಿ ಆರ್​ಸಿಬಿ ಸೋಲು ಕಂಡಿತ್ತು. ಆದರೆ ಟೂರ್ನಿಯ ಕೊನೆ ಹಂತ ಬರುತ್ತಿದ್ದಂತೆ ಸತತ 5 ಪಂದ್ಯಗಳ ಗೆಲುವಿನೊಂದಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ಲೇಯರ್ಸ್​ ಫುಲ್ ಖುಷಿಯಲ್ಲಿದ್ದಾರೆ. ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 47 ರನ್​ಗಳಿಂದ ಅಮೋಘ ಜಯ ದಾಖಲಿಸಿತು. ಈ ಮೂಲಕ ಸತತ 5 ಪಂದ್ಯಗಳನ್ನು ಗೆದ್ದು ಐತಿಹಾಸಿಕ ದಾಖಲೆ ಬರೆಯಿತು.

2024ರ ಐಪಿಎಲ್​ನಲ್ಲಿ ಸತತವಾಗಿ 5 ಪಂದ್ಯ ಗೆದ್ದ ಆರ್​​ಸಿಬಿ

  • ಏಪ್ರಿಲ್ 25 ರಂದು ಎಸ್​ಆರ್​ಹೆಚ್ ವಿರುದ್ಧ 35 ರನ್​ಗಳ ಗೆಲುವು
  • ಏಪ್ರಿಲ್ 28 ರಂದು ಗುಜರಾತ್ ವಿರುದ್ಧ 9 ವಿಕೆಟ್​ಗಳಿಂದ ವಿನ್
  • ಮೇ 4 ರಂದು ಗುಜರಾತ್ ಜೊತೆ 4 ವಿಕೆಟ್​ಗಳಿಂದ ಗೆಲುವು
  • ಮೇ 9 ರಂದು ಪಂಜಾಬ್ ವಿರುದ್ಧ 60 ರನ್​ಗಳಿಂದ ವಿನ್
  • ಮೇ 12 ರಂದು ಡೆಲ್ಲಿ ಜೊತೆ ಆರ್​ಸಿಬಿಗೆ 47 ರನ್​ಗಳ ಗೆಲುವು

ಇದುವರೆಗೂ ಐಪಿಎಲ್​ನಲ್ಲಿ ಆರ್​ಸಿಬಿಯ ಸತತ ಗೆಲುವುಗಳು

ಸತತವಾಗಿ ಪಂದ್ಯಗಳನ್ನು ಗೆಲ್ಲುವುದು ಆರ್​ಸಿಬಿ ಇದೇ ಮೊದಲಲ್ಲ. ಈ ಮೊದಲು ಕೆಲವು ಬಾರಿ ಸತತ ಗೆಲುವುಗಳನ್ನು ಕಂಡು ಫೈನಲ್​ಗೂ ಎಂಟ್ರಿಕೊಟ್ಟಿದೆ. ಅಂದರೆ ಈ ವರ್ಷವು ಅದನ್ನೇ ಮುಂದುವರೆಸಬಹುದು ಎಂದು ಫ್ಯಾನ್ಸ್​ ಹೇಳುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ನಟ‌ ಚೇತನ್​ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ.. ಸಿನಿಮಾ ಸ್ಟೈಲ್​ನಲ್ಲಿ ರಾಬರಿ.. ಅಸಲಿಗೆ ಆಗಿದ್ದೇನು..?

ಐಪಿಎಲ್​ನಲ್ಲಿ ಆರ್​ಸಿಬಿ ಸತತ ಗೆಲುವುಗಳು

  • 2009ರಲ್ಲಿ 5 ಪಂದ್ಯಗಳಲ್ಲಿ ಸತತ ಗೆಲುವು
  • 2011ರಲ್ಲಿ 7 ಪಂದ್ಯಗಳಲ್ಲಿ ಸತತ ಗೆಲುವು
  • 2016ರಲ್ಲಿ 5 ಪಂದ್ಯಗಳಲ್ಲಿ ಸತತ ಗೆಲುವು
  • 2024ರಲ್ಲಿ 5 ಪಂದ್ಯಗಳಲ್ಲಿ ಸತತ ಗೆಲುವು

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಇದು ಅಂತಿಂಥಾ ದಾಖಲೆ ಅಲ್ಲವೇ ಅಲ್ಲ.. ಯಾವ ಟೀಮ್​ ಮಾಡಿರದ ರೆಕಾರ್ಡ್​ ಮಾಡಿದ RCB

https://newsfirstlive.com/wp-content/uploads/2024/05/RCB-won-match.jpg

Load More