/newsfirstlive-kannada/media/post_attachments/wp-content/uploads/2025/04/Tesla-Cybertruck-in-india-4.jpg)
ಅಮೆರಿಕದಲ್ಲಿ ಜನಪ್ರಿಯ ಎಲೆಕ್ಟ್ರಿಕ್ ಕಾರ್ಗಳನ್ನು ಉತ್ಪಾದಿಸುವ ಕಂಪನಿ ಟೆಸ್ಲಾ. ಈ ಕಂಪನಿಯಿಂದ ಬಹುನೀರಿಕ್ಷಿತ ಸೈಬೆರ್ ಟ್ರಕ್ ಎಲೆಕ್ಟ್ರಿಕ್ ಪಿಕ್ ಅಪ್. ಈ ಕಾರಿಗಾಗಿ ಜನ 2019ರಿಂದಲೂ ಕಾದಿದ್ದರು. ಕೊನೆಗೆ ಈ ಕಾರು 2023ರಲ್ಲಿ ಬಿಡುಗಡೆಯಾಗಿತ್ತು. ಈ ಕುತೂಹಲವೆಲ್ಲಾ ಅಮೆರಿಕಾದಲ್ಲೇ ಇತ್ತು. ಆದರೆ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಈ ಕಾರನ್ನ ಒಬ್ಬ ಉದ್ಯಮಿ ಖರೀದಿಸಿದ್ದಾರೆ.
ಇಡೀ ಭಾರತದ ಕಾರು ಲವರ್ಸ್ಗಳಿಗೆ ಶಾಕ್ ಕೊಟ್ಟಿದ್ದು ಸೂರತ್ ಮೂಲದ ಉದ್ಯಮಿ ಲವ್ಜಿ ಬಾದ್‌ಶಾ. ಅವರು ಇದೇ ಅಮೆರಿಕದ ಟೆಸ್ಲಾ ಸೈಬೆರ್ ಟ್ರಕ್ ಅನ್ನ ಮನೆ ಮುಂದೆ ನಿಲ್ಲಿಸಿ, ಇಡೀ ಭಾರತಕ್ಕೆ ಸರ್ಪ್ರೈಸ್ ಕೊಟ್ಟಿದ್ದಾರೆ. ಯಾಕಂದರೆ, ಈ ಟೆಸ್ಲಾ ಕಾರು ಭಾರತದಲ್ಲಿ ಇನ್ನೂ ಲಾಂಜ್ ಆಗಿಲ್ಲ. ಆದರೂ ಪಟ್ಟು ಬಿಡದ ಬಾದ್‌ಶಾ ಅವ್ರು, ಈ ಕಾರನ್ನ ಸ್ಪೆಷಲ್ಲಾಗಿ ದುಬೈನಿಂದ ಆಮದು ಮಾಡಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದ ತುಂಬಾ ದುಬೈ ನಂಬರ್ ಪ್ಲೇಟ್ ಇರೋ ಈ ಟೆಸ್ನಾ ಸೈಬರ್‌ಟ್ರಕ್ ಎಲೆಕ್ಟ್ರಿಕ್ ಪಿಕ್ ಅಪ್ ಕಾರ್ನ ಓಡಾಟದ ಫೋಟೋ ವಿಡಿಯೋಗಳು ವೈರಲ್ ಆಗ್ತಿರೋದನ್ನ ನೋಡಿ, ಅನೇಕರಿಗೆ ಶಾಕ್ ಆಗಿದೆ. ದುಬೈ ನಂಬರ್ ಪ್ಲೇಟ್ ಇರೋ ಕಾರನ್ನ ಇಲ್ಲಿಗೇಗೆ ತಂದು ಓಡಿಸ್ತಿದ್ದಾರೆ ಅನ್ನೋ ಶಾಕ್ ಈಗಲೂ ಹಲವರನ್ನ ಕಾಡ್ತಿದೆ. ಜೊತೆಗೆ ಭಾರತದ ವ್ಯಕ್ತಿ, ಕಾರು ದೇಶಕ್ಕೆ ಬರುವ ಮುನ್ನವೇ ಮನೆ ಮುಂದೆ ನಿಲ್ಲಿಸಿದ್ದು, ದೇಶಾದ್ಯಂತ ಭಾರಿ ಕುತೂಹಲವನ್ನ ಹುಟ್ಟುಹಾಕಿದೆ.
ಬಹುಶಃ ಹಾಲಿವುಡ್ ಸಿನಿಮಾ ಸೆಟ್‌ನಿಂದ ಏನಾದರೂ ಈ ಕಾರ್ ಬಂದಿದೆಯೇನೋ ಎಂದು ಬಾದ್‌ಶಾ ಮನೆ ಮುಂದೆ ಜನರು ನಿಂತು ನೋಡುತ್ತಿದ್ದಾರಂತೆ. ಆ ಕಾರ್ನ ಅಟ್ರ್ಯಾಕ್ಷನ್ ಅಂತದ್ದು. ಯಾಕಂದ್ರೆ ಇದ ಡಿಸೈನ್ ಆಟೋಮೊಬೈಲ್ ಟೆಕ್ನಾಲಜಿಯಲ್ಲೇ ಅದ್ಭುತ ಎಂದು ಹೇಳಲಾಗ್ತಿದೆ. ಇದೇ ಕಾರಣಕ್ಕೆ ಸೈಬರ್ಟ್ರಕ್ ಅಂದ್ರೆ ಕಾರ್ ಪ್ರಿಯರಿಗೆ ಸಿಕ್ಕಾಪಟ್ಟೆ ಪ್ರೀತಿ.
ಅಮೆರಿಕಾದಿಂದ ಸೂರತ್‌ಗೆ ತಂದಿದ್ದೇಗೆ?
ಲವ್ಜಿ ಬಾದ್‌ಶಾ ಅವರಿಗೆ ಸ್ಪೆಷಲ್ಲಾಗಿ ಐಷಾರಾಮಿ ವಾಹನಗಳ ಮೇಲೆ ವ್ಯಾಮೋಹ ಇರುತ್ತೆ. ಕಾರುಗಳಂದರೇ ಅವರಿಗೆ ಎಲ್ಲಿಲ್ಲದ ಕ್ರೇಜ್. ಇದೇ ಕ್ರೇಜ್ನಲ್ಲಿ ದುಬೈಗೆ ಹಾರಿ, ಸೈಬರ್ಟ್ರಕ್ನ ಹೊತ್ತು ತಂದಿದ್ದಾರೆ. ಆದರೇ ಭಾರತದಲ್ಲಿ ಇನ್ನೂ ಲಾಂಚ್ ಆಗದ ಕಾರನ್ನ ಅದೇಗೆ ಬಳಸಲಾಗುತ್ತಿದೆ ಅನ್ನೋದೇ ಅರ್ಥವಾಗಿಲ್ಲ. ಸದ್ಯಕ್ಕೆ ಇದು ಟ್ರೆಂಡ್‌ಸೆಟರ್ ಮೂಮೆಂಟ್ ಆಗಿದೆ. ಆಟೋಮೊಬೈಲ್ ಟೆಕ್ನಾಲಜಿಯಲ್ಲಿ ಹೊಸದೇನೇ ಬಂದರೂ ಅದರಲ್ಲಿ ಬಾದ್‌ಶಾ ಅವರಿಗೆ ಇಷ್ಟವಾಗುತ್ತೆ. ಈಗ ಬಂದ ಈ ಟೆಸ್ಲಾ ಸೈಬರ್ಟ್ರಕ್ ಎಲೆಕ್ಟ್ರಿಕಲ್ ಪಿಕಪ್ ಕಾರ್ ಆಗಿರೋದ್ರಿಂದ, ಇದು ಭವಿಷ್ಯಕ್ಕೆ ಬೆಸ್ಟ್ ಆಗಿರೋದ್ರಿಂದ, ಈ ಕಾರ್ ಮೇಲೆ ಇನ್ನಷ್ಟು ಪ್ರೀತಿ ಹೆಚ್ಚಾಗಿದೆಯಂತೆ.
ಎಲಾನ್ ಮಸ್ಕ್ ಟೆಸ್ಲಾ ಕಾರ್ಗಳನ್ನ ಭಾರತದಲ್ಲಿ ಲಾಂಚ್ ಮಾಡಿದ್ದರು.ಆದರೇ ಸೈಬರ್ಟ್ರಕ್ನ್ನ ಅಧಿಕೃತವಾಗಿ ಬಿಡುಗಡೆ ಮಾಡದಿದ್ದರೂ ಸಹ, ಅದು ಭಾರತಕ್ಕೆ ವೀಲ್ ಇಟ್ಟಿರಲಿಲ್ಲ. ನಿಜಕ್ಕೆ ಈ ಸೈಬರ್‌ಟ್ರಕ್ ಕಾರನ್ನ ಭಾರತಕ್ಕೆ ತರುವುದು ಅಷ್ಟು ಈಸಿಯಲ್ಲ. ಹಾಗಾಗಿನೇ ಬಾದ್‌ಶಾ ಅದನ್ನ ದುಬೈನಿಂದ, ಮುಂಬೈಗೆ ತಂದು, ಮುಂಬೈ ಮೂಲಕ ಕೊನೆಗೆ ಸೂರತ್‌ಗೆ ತಂದಿದ್ದಾರೆ. ಈ ಕಾರನ್ನ ಸೂಪರ್ ಹೀರೋಗಳಿಗಾಗಿನೇ ತಯಾರಿಸಲ್ಪಟ್ಟಿದೆ ಅಂತಾರೆ ಈ ಸೂರತ್ ಬಾದ್‌ಶಾ.
ಟೆಸ್ಲಾ ಸೈಬೆರ್ಟ್ರಕ್ ಏನಿದರ ವಿಶೇಷ?
ಸೈಬರ್ಟ್ರಕ್ ಕಾರ್ಗೆ ಇಷ್ಟು ಕ್ರೇಜ್ ಇರೋಕೆ ಕಾರಣ.. ಅದರಲ್ಲೂ ಉದ್ಯಮಿಗಳೇ ಹೆಚ್ಚಾಗಿ ಇಷ್ಟ ಪಡಲು ಕಾರಣ,ಇದರ ಬುಲೆಟ್ ಪ್ರೂಫ್ ಗ್ಲಾಸ್, ಮತ್ತೆ ಇದರ ಡಿಸೈನ್. ಯಾವ ರೋಡ್ ಆದರೂ, ಯಾವ ಭೂಪ್ರದೇಶವಾದರೂ ಸ್ಮೂತ್ ರೈಡ್ ಅನಿಸೋ ಕಾರ್ ಇದು. ಹೊರಗಿನ ಡಿಸೈನ್ ತುಸು ವಿಚಿತ್ರ ಎನ್ನಿಸಿದರೂ ಇದಕ್ಕಿರುವ ಟೆಕ್ನಾಲಜಿಗೆ ಭಾರಿ ಬೇಡಿಕೆ ಇದೆ.
ಇದನ್ನೂ ಓದಿ: ಭಾರತಕ್ಕೆ ಬರ್ತಿದೆ ಟೆಸ್ಲಾ ಎಲೆಕ್ಟ್ರಿಕ್ ಕಾರು.. 13 ಹುದ್ದೆಗಳ ಭರ್ತಿಗೆ ಆಹ್ವಾನ; ಇಲ್ಲಿದೆ ಕಂಪ್ಲೀಟ್ ಮಾಹಿತಿ
ಇದು ಎಲೆಕ್ಟ್ರಿಕ್ ಕಾರ್ ಆಗಿರೋದರಿಂದ,ನಾಲ್ಕು ವೆರಿಯೆಂಟ್ನಲ್ಲಿ ಪವರ್ಫುಲ್ ಬ್ಯಾಟರಿ ಇದ್ದು.. ಪ್ರತಿ ಚಾರ್ಜ್ ಗೆ 850 ಕಿ.ಮೀ ಮೈಲೇಜ್ ಕೊಡುತ್ತೆ. ಹಾಗೆ ಸುಮಾರು 4,500 ಕೆಜಿ ತೂಕದ ಗೂಡ್ಸ್ ಎಳೆಯುವ ಪವರ್ ಇದಕ್ಕಿದೆ. ಒಳಗೆ ಏರ್ ಸಸ್ಪೆನ್ಷನ್ ಸಿಸ್ಟಮ್ ಹಾಗೂ ಸೀಟ್ಸ್ ಮತ್ತಷ್ಟು ಕಂಫರ್ಟ್ ಫೆಸಿಲಿಟಿ, ಎಲ್ಲಾದಕ್ಕೂ ಮೀರಿ ಇದರಲ್ಲಿ ಆಫ್ ರೋಡ್‌ಗಳಲ್ಲೂ ಪವರ್ಫುಲ್ ಡ್ರೈವ್ ಸಿಸ್ಟಂ, ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಇದೆ. ಹಾಗಾಗಿ ಕಾರ್ ಪ್ರಿಯರಿಗೆ ಇದು ಅಚ್ಚುಮೆಚ್ಚು ಅನಿಸುತ್ತೆ.
Tesla @cybertruck driving on the streets of Surat, Gujarat 😍⚡
📐 is huge🔋
🎥: insta iamsuratcity https://t.co/UdnpASlb7Apic.twitter.com/J0wV3sk65M
— Tesla Club India® (@TeslaClubIN)
Tesla @cybertruck driving on the streets of Surat, Gujarat 😍⚡
📐 is huge🔋
🎥: insta iamsuratcity https://t.co/UdnpASlb7Apic.twitter.com/J0wV3sk65M— Tesla Club India® (@TeslaClubIN) April 24, 2025
">April 24, 2025
ಸದ್ಯಕ್ಕೆ ಈ ಕಾರ್ ಭಾರತದಲ್ಲಿ ಸದ್ದು ಮಾಡ್ತಿದೆ. ಸೂರತ್ನ ಬಾದ್‌ಶಾ ಈ ಕಾರನ್ನ ಸುಮಾರು ₹51 ಲಕ್ಷ ಕೊಟ್ಟು ಕೊಂಡುಕೊಂಡಿದ್ದಾರೆ. ಸೂರತ್ನಿಂದ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸೈಬೆರ್ಟ್ರಕ್ಗೆ ಭಾರಿ ಡಿಮ್ಯಾಂಡ್ ಶುರುವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ