/newsfirstlive-kannada/media/post_attachments/wp-content/uploads/2025/03/Kerala-man-fishing-death.jpg)
ಮೀನು ಹಿಡಿಯುವಾಗ ಚಾಲಾಕಿ ಮೀನೊಂದು ಯುವಕನ ಜೀವಕ್ಕೆ ಕುತ್ತು ತಂದ ಅಪರೂಪದ ಘಟನೆ ಕೇರಳದಲ್ಲಿ ಬೆಳಕಿಗೆ ಬಂದಿದೆ. ಒಮ್ಮೊಮ್ಮೆ ಹೀಗೂ ಆಗುತ್ತಾ ಅನ್ನೋ ಈ ಘಟನೆಯನ್ನ ಕಂಡು ಎಲ್ಲರೂ ಅಚ್ಚರಿಗೊಂಡಿದ್ದಾರೆ.
ಈ ಯುವಕನ ಹೆಸರು ಆದರ್ಶ್ ಅಂತ. ಇವನಿಗೆ 25 ವರ್ಷ ವಯಸ್ಸು. ಕಳೆದ ಭಾನುವಾರ ಆದರ್ಶ್ ತನ್ನ ಗೆಳೆಯರ ಜೊತೆ ಕೇರಳದ ಆಲಪ್ಪುಳ ಬಳಿಯ ಗದ್ದೆಯಲ್ಲಿ ಮೀನು ಹಿಡಿಯಲು ಹೋಗಿದ್ದ.
ಸಂಜೆ 4.30ರ ಸುಮಾರಿಗೆ ಆದರ್ಶ್ ಒಂದು ಮೀನು ಹಿಡಿದ ಮೇಲೆ ಮತ್ತೊಂದು ಮೀನು ಹಿಡಿಯಲು ಮುಂದಾಗಿದ್ದಾನೆ. ಆಗ ಆ ಮೀನು ಯುವಕನ ಬಾಯಿಗೆ ಕಚ್ಚಿ ಗಂಟಲಿಗೆ ಹೋಗಿ ಸಿಲುಕಿಕೊಂಡಿದೆ.
/newsfirstlive-kannada/media/post_attachments/wp-content/uploads/2025/03/Kerala-man-fishing-death-1.jpg)
ಆದರ್ಶ್ ಮೇಲೆ ಮೀನು ದಾಳಿ ಮಾಡಿರೋದನ್ನ ಸ್ನೇಹಿತರು ನೋಡಿ ಗಾಬರಿಯಾಗಿದ್ದಾರೆ. ಗಂಟಲಿಗೆ ಮೀನು ಸಿಲುಕಿ ಆದರ್ಶ್ ಉಸಿರಾಡಲು ಪರದಾಡಿದ್ದಾನೆ. ಆದರೆ ಸಾಧ್ಯವೇ ಆಗಿಲ್ಲ. ಕೂಡಲೇ ಜೊತೆಗಿದ್ದವರು ಓಚಿರಾದ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ.
ಆಸ್ಪತ್ರೆಗೆ ದಾಖಲಾದ ಆದರ್ಶ್ ಜೀವ ಉಳಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಮೀನು ಹಿಡಿಯಲು ಹೋಗಿ ಮೀನಿನಿಂದಲೇ ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು, ಪೊಲೀಸರು ಖಚಿತಪಡಿಸಿದ್ದಾರೆ.
ಕೇರಳದಲ್ಲಿ ಯುವಕರು ಮೀನುಗಾರಿಕೆಯಲ್ಲಿ ಪಾಲ್ಗೊಳ್ಳುವುದು ಹೊಸದೇನು ಅಲ್ಲ. ಮೀನು ಹಿಡಿಯುವಾಗ ಎಂತಹ ಚಾಲಾಕಿ ಮೀನುಗಳಾದರೂ ಅದನ್ನು ಹಿಡಿಯುವ ಕಲೆ ಕರಗತ ಮಾಡಿಕೊಂಡಿರುತ್ತಾರೆ. ಆದರೆ ಮೀನು ಹಿಡಿಯುವ ಹುಮ್ಮಸ್ಸಿನಲ್ಲಿ ಅದೇ ಮೀನು ಯುವಕನ ಜೀವ ತೆಗೆದಿರುವ ಈ ಪ್ರಕರಣ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us