ಅಸ್ತಮಾ ಕಾಯಿಲೆಗೆ ಇಲ್ಲಿದೆ ದಿವ್ಯ ಔಷಧಿ; ನೀವು ಓದಲೇಬೇಕಾದ ಸ್ಟೋರಿ ಇದು!

author-image
Ganesh Nachikethu
Updated On
ಅಸ್ತಮಾ ಕಾಯಿಲೆಗೆ ಇಲ್ಲಿದೆ ದಿವ್ಯ ಔಷಧಿ; ನೀವು ಓದಲೇಬೇಕಾದ ಸ್ಟೋರಿ ಇದು!
Advertisment
  • ಅಸ್ತಮಾ ಕಾಯಿಲೆಗೆ ಇಲ್ಲಿದೆ ದಿವ್ಯ ಔಷಧ
  • ಮೀನಿನ ಪ್ರಸಾದದಿಂದ ಅಸ್ತಮಾಕ್ಕೆ ಹೇಳಿ ಗುಡ್​ ಬೈ
  • ಮೀನಿನ ಪ್ರಸಾದಕ್ಕೆ ಭಾರೀ ಡಿಮ್ಯಾಂಡ್​​.. ಜನವೋ ಜನ

ಅಸ್ತಮಾ ಕಾಯಿಲೆಗೆ ಸರಿಯಾದ ಚಿಕಿತ್ಸೆ ಇಲ್ಲ. ಆದರೆ ಇಂತಹ ಸಮಸ್ಯೆ ಒಳಗೊಂಡವರು ಚಿಕಿತ್ಸೆಗಾಗಿ ವೈದ್ಯರ ಮೊರೆ ಹೋದರೆ. ಇನ್ನು ಕೆಲವರು ಹಳ್ಳಿ ಮದ್ದಿನ ಮೂಲಕ ಈ ಕಾಯಿಲೆ ಗುಣ ಮುಖವಾಗಲು ಶ್ರಮಿಸುತ್ತಾರೆ. ಆದರೆ ಇದು ಮೀನಿನ ಪ್ರಸಾದದ ಮೂಲಕ ಗುಣವಾಗುತ್ತದೆ ಎಂದರೆ ನಂಬುತ್ತೀರಾ?. ಆಂಧ್ರ ಪ್ರದೇಶದಲ್ಲಿ ‘ಫಿಶ್​ ಪ್ರಸಾದಮ್’​ ಎಂಬ ಹೆಸರಿನಲ್ಲಿ ಅಸ್ತಮಾ ಕಾಯಿಗೆ ಔಷಧಿ ನೀಡಲಾಗುತ್ತಿದೆ.

ಫಿಶ್​ ಪ್ರಸಾದಮ್​ ಭಾರೀ ಜನಪ್ರಿಯತೆ ಪಡೆದ ಔಷಧವಾಗಿದ್ದು, ಮೃಗಶೀರಾಕಾರ್ಟೆ ಎಂಬ ಕಂಪನಿ ಈ ಪ್ರಸಾದವನ್ನು ನೀಡುತ್ತಾ ಬಂದಿದೆ. ಆದರೆ ಕೊರೋನಾ ಕಾಲದಲ್ಲಿ ಇದನ್ನು ಸ್ಥಗಿತ ಮಾಡಲಾಗಿತ್ತು. ಆದರೆ ಇಂದಿನಿಂದ ಮತ್ತೆ ಶುರು ಮಾಡಲಾಗಿದ್ದು, ಮೊದಲಿನಂತೆಯೇ ಬೇಡಿಕೆ ಪಡೆದುಕೊಂಡಿದೆ.

publive-image

ಭಾತಿನಿ ಗೌಡ ಎಂಬ ಫ್ಯಾಮಿಲಿ ಅಸ್ತಮಾ ಕಾಯಿಲೆಗೆಂದು ಮೀನಿನ ಪ್ರಸಾದವನ್ನು ನೀಡುತ್ತಾ ಬಂದಿದೆ. ಸುಮಾರು 175 ವರ್ಷಗಳ ಇತಿಹಾಸ ಈ ಫ್ಯಾಮಿಲಿಗಿದೆ. ಇದೊಂದು ಹಳ್ಳಿ ಔಷಧವಾಗಿದ್ದು, ಇದನ್ನು ಸೇವಿಸಿದರೆ ಉಸಿರಾಟದ ಸಮಸ್ಯೆ ಮತ್ತು ಅಸ್ತಮಾ ಸಮಸ್ಯೆ ಹೋಗಲಾಡಿಸುತ್ತಂತೆ.

ಮೀನಿನ ಪ್ರಸಾದ ತಯಾರಿಸಲು ಮೃಗಶೀರಾಕಾರ್ಟೆ ಕಂಪನಿಯ ಜೊತೆಗೆ ಮೀನುಗಾರಿಕಾ ವಿಭಾಗ ಕೈ ಜೋಡಿಸಿಕೊಂಡಿದೆ. ಇದಕ್ಕಾಗಿ 1.30 ಲಕ್ಷ ಮೀನುಗಳನ್ನು ಸರಬರಾಜು ಮಾಡುತ್ತದೆ. ಅಂದಹಾಗೆಯೇ ಮುರ್ರೆಲ್​ ಮೀನನ್ನು ಔಷಧವಾಗಿ ಬಳಸುತ್ತಾರೆ. ಮಾತ್ರವಲ್ಲದೆ ಈ ಕಂಪನಿಯಲ್ಲಿ 250 ಜನರು ದುಡಿಯುತ್ತಿದ್ದಾರೆ.

ಮೊದಲಿಗೆ ಬತಿನಿ ಕುಟುಂಬ ಹೈದರಾಬಾದ್​​ನಲ್ಲಿರುವ ದೂಧಬೌಲಿಯಲ್ಲಿರುವ ನಿವಾಸದಲ್ಲಿ ಪೂಜೆ ಮಾಡುತ್ತಾರೆ. ಪೂಜೆಯ ಬಳಿಕ ಗಿಡಮೂಲಿಕೆ ಬಳಸಿ ತಯಾರಿಸಿದ ಪೇಸ್ಟ್​ ಅನ್ನು ಮುರ್ರೆಲ್​ ಮೀನಿನ ಬಾಯಿಯೊಳಗೆ ಜಾಗರೂಕತೆಯಿಂದ ಇಡುತ್ತಾರೆ. ನಂತರ ಅದನ್ನು ರೋಗಿಗಳಿಗೆ ಕೊಡುತ್ತಾರೆ. ಮೀನಿನ ಪ್ರಸಾದಕ್ಕಾಗಿ ವಿವಿಧ ರಾಜ್ಯದಿಂದಲೂ ಜನರು ಬರುತ್ತಾರೆ. ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ಅಸ್ತಮಾ ಮಕಾಯಿಲೆಯವರು ತಮಗಿರುವ ರೋಗವನ್ನು ಹೋಗಲಾಡಿಸಲು ಮೀನಿನ ಪ್ರಸಾದ ಸೇವಿಸುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment