/newsfirstlive-kannada/media/post_attachments/wp-content/uploads/2025/02/aero-india-show-7.jpg)
ಬೆಂಗಳೂರಿನ ನೀಲಿ ಆಕಾಶದಲ್ಲಿ ಇಂದಿನಿಂದ ಐದು ದಿನಗಳ ಕಾಲ ಲೋಹದ ಹಕ್ಕಿಗಳ ಕಲರವ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ ಮೀನುಗಾರಿಕೆಗೆ ತೆರಳದಂತೆ ಆದೇಶ ನೀಡಿದೆ.
ಯಾಕೆ..?
ಬೆಂಗಳೂರು ಉತ್ತರ, ಯಲಹಂಕ ಸುತ್ತಮುತ್ತಲಿನ 21 ಕರೆಗಳಲ್ಲಿ ಮೀನುಗಾರಿಕೆ ನಿಷೇಧ ಹೇರಲಾಗಿದೆ. ಫೆಬ್ರವರಿ 17ರವರೆಗೆ ಮೀನುಗಾರಿಕೆಗೆ ನಿಷೇಧ ಇದೆ. ಮೀನುಗಳು ಹೊರಗೆ ಬಂದಾಗ ಪಕ್ಷಿಗಳ ಹಾರಾಟ ಹೆಚ್ಚಾಗಲಿದೆ. ಹೆಚ್ಚಿನ ಪಕ್ಷಿಗಳ ಹಾರಾಟದಿಂದ ವಿಮಾನಗಳ ಹಾರಾಟಕ್ಕೆ ತೊಂದರೆ ಆಗಲಿದೆ.
ಇದನ್ನೂ ಓದಿ: Aero India Show; ಬೆಂಗಳೂರಲ್ಲಿ ಭಾರೀ ಟ್ರಾಫಿಕ್.. ಕೆಲ ರಸ್ತೆಗಳಿಗೆ ಎಂಟ್ರಿಯೇ ಇಲ್ಲ, ಎಲ್ಲೆಲ್ಲಿ?
ಹೀಗಾಗಿ ಯಲಹಂಕ ವಾಯುನೆಲೆಯ ಸುತ್ತಮುತ್ತ ಹಾಗೂ ದೇವನಹಳ್ಳಿ ವ್ಯಾಪ್ತಿಗೆ ಬರುವ ಎಲ್ಲಾ ಕೆರೆಗಳಲ್ಲಿ ಮೀನು ಹಿಡಿಯುವುದು ಹಾಗೂ ಮಾರಾಟವನ್ನು ಸ್ಥಗತಗೊಳಿಸಲಾಗಿದೆ. ಮೀನುಗಾರಿಕೆ ಇಲಾಖೆಯು ಎಲ್ಲಾ ಟೆಂಡರ್ ಹಾಗೂ ಗುತ್ತಿಗೆದಾರರಿಗೆ ಕೆರೆಗಳಿಗೆ ಇಳಿಯದಂತೆ ನಿಷೇಧ ಹೇರಿದೆ.
ಏರ್ ಶೋಗೆ ಸಂಬಂಧಿಸಿದ ಪ್ರಮುಖ 10 ವಿಚಾರಗಳು..!
- ಒಟ್ಟು 90 ದೇಶಗಳು ಏರೋ ಇಂಡಿಯಾದಲ್ಲಿ ಪಾಲ್ಗೊಳ್ಳುತ್ತಿವೆ
- ಯುದ್ಧ, ಸರಕು, ತರಬೇತಿ ಸೇರಿ ಒಟ್ಟು 70 ವಿಮಾನಗಳಿಂದ ಪ್ರದರ್ಶನ
- ಏರ್ ಶೋನಲ್ಲಿ 30 ವಿಮಾನ, ಹೆಲಿಕಾಪ್ಟರ್ ಪ್ರದರ್ಶನಕ್ಕೆ ಇಡಲಾಗಿದೆ
- 750 ಭಾರತದ ಕಂಪನಿಗಳು ಏರ್ಶೋನಲ್ಲಿ ಭಾಗಿಯಾಗಲಿವೆ
- ಏರ್ಶೋನಲ್ಲಿ 100ಕ್ಕೂ ರಾಷ್ಟ್ರಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ
- ಐದು ದಿನದಲ್ಲಿ ಒಟ್ಟ 7 ಲಕ್ಷ ಮಂದಿ ಏರ್ ಶೋಗೆ ಆಗಮಿಸುವ ನಿರೀಕ್ಷೆ
- 30ಕ್ಕೂ ಹೆಚ್ಚು ರಾಷ್ಟ್ರಗಳ ರಕ್ಷಣಾ ಮಂತ್ರಿಗಳು ಭಾಗಿಯಾಗಲಿದ್ದಾರೆ
- ವಿಮಾನ, ರಕ್ಷಣಾ ಉತ್ಪನ್ನಗಳ ಪ್ರದರ್ಶನಕ್ಕಾಗಿ 42 ಸಾವಿರ ಚ.ಮೀ ಮೀಸಲಿಡಲಾಗಿದೆ
- ವಿಕಸಿತ ಭಾರತಕ್ಕೆ ಏರೋ ಇಂಡಿಯಾದಿಂದ ಭರ್ಜರಿ ಕೊಡುಗೆ ನಿರೀಕ್ಷೆ-ರಾಜನಾಥ್ ಸಿಂಗ್
- ಎಐ, ಡ್ರೋನ್ಸ್, ಸೈಬರ್ ಸೆಕ್ಯುರಿಟಿ, ಗ್ಲೋಬರ್ ಏರೋಸ್ಪೇಸ್
- USನ ಎಫ್-35, ರಷ್ಯಾದ SU-57 ಏರ್ ಶೋನ ಪ್ರಮುಖ ಆಕರ್ಷಣೆ
ಇದನ್ನೂ ಓದಿ: Aero India! ಭದ್ರತೆಗೆ AI ಆಧಾರಿತ ಕ್ರಮ, ಬೆಂಗಳೂರಲ್ಲಿ ಯಾವುದೆಲ್ಲ ನಿಷೇಧ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ